Just In
Don't Miss!
- News
ಧಾರವಾಡದ ಅಪಘಾತದಲ್ಲಿ ಮೃತಪಟ್ಟವರ ಉಂಗುರ, ವಾಚ್ ನೋಡಿ ಭಾವುಕರಾದ ಕುಟುಂಬಸ್ಥರು
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Finance
ಆನ್ ಲೈನ್ ವಂಚನೆ ತಡೆಯಲು ಸೇಫ್ ಪೇ ಪರಿಚಯಿಸಿದ ಏರ್ ಟೆಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹುಡುಗರು ಆಡಿಯೋ ಕೇಳಿದ್ರೆ ಏನೋ ಆನಂದ
ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸುತ್ತಿರುವ ಹುಡುಗರು ಚಿತ್ರ ಆಡಿಯೋ ಬಿಡುಗಡೆ ನಾಳೆ ಜರುಗಲಿದೆ. ಈಗಾಗಲೇ ರಾಜ್ಯದೆಲ್ಲೆಡೆಯಿಂದ ಆಡಿಯೋ ಕ್ಯಾಸೆಟ್ ಹಾಗೂ ಸಿಡಿಗಳಿಗೆ ಬೇಡಿಕೆ ಬಂದಿದೆ ಸೋಮವಾರದಿಂದ ಎಲ್ಲಾ ಪ್ರಮುಖ ಮ್ಯೂಸಿಕ್ ಮಳಿಗೆಗಳಲ್ಲಿ ಶಂಭೋ ಶಿವ ಶಂಭೋ ಎಂಬ ಹುಡುಗರ ಹಾಡು ಗುನುಗಲಿದೆ. ವಿ ಹರಿಕೃಷ್ಣ ಸಂಗೀತವಿರುವ ಈ ಚಿತ್ರದಲ್ಲಿ ಹಾಡುಗಳು ಕಥೆಯ ಓಟಕ್ಕೆ ತಕ್ಕಂತೆ ಮೂಡಿ ಬಂದಿದೆ. ಎಂದು ಆನಂದ್ ಆಡಿಯೋ ಕಂಪೆನಿ ಹೇಳಿದೆ.
ಹುಡುಗರು ಚಿತ್ರಕ್ಕಾಗಿ ಪ್ರತ್ಯೇಕ ವೆಬ್ ಸೈಟ್, ಫೇಸ್ ಬುಕ್, ಯೂಟ್ಯೂಬ್ ವಾಹಿನಿ ಮೂಲಕ ವಿನೂತನವಾಗಿ ಪ್ರಚಾರಕ್ಕಿಳಿದಿರುವ ವಜ್ರೇಶ್ವರಿ ಸಂಸ್ಥೆ ಈ ರಿಮೇಕ್ ಚಿತ್ರವನ್ನು ಕನ್ನಡದ ಸದಭಿರುಚಿ ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದೆ. ಜನ ಏನು ಕೇಳ್ತಾರೋ ಅದನ್ನು ನಾವು ಕೊಡಬೇಕು. ಹುಡುಗರು ಹೆಸರೇ ಹೇಳುವಂತೆ ಯುವ ಜನಾಂಗಕ್ಕೆ ಒಂದು ಒಳ್ಳೆ ಮೇಸೆಜ್ ಇರುವಂಥ ಚಿತ್ರ ಹಾಗಾಗಿ ಫೇಸ್ ಬುಕ್ ಯೂಟ್ಯೂಬ್ ಅನ್ನು ಬಳಸಿಕೊಂಡು ಯುವಕರನ್ನು ಹೆಚ್ಚು ತಲುಪಲು ಉದ್ದೇಶಿಸಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ['ಹುಡುಗರು' ಟ್ರೈಲರ್ ನೋಡಿ]
ಈ ಚಿತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಇದೆ. ಅಪ್ಪು ಪಾತ್ರವನ್ನು ಎತ್ತರಕ್ಕೆ ಏರಿಸಿಲ್ಲ. ಯೋಗಿ, ಕಿಟ್ಟಿ ಪಾತ್ರ ಕೂಡಾ ಕಥೆಗೆ ತುಂಬಾ ಮುಖ್ಯವಾಗಿದೆ.ಮೇ 5 ಅಥವಾ 6 ರಂದು ಚಿತ್ರವನ್ನು ತರಲು ಪ್ರಯತ್ನಿಸುತ್ತಿದ್ದೇವೆ. ನೋಡೋಣ, ಅಪ್ಡೇಟ್ಸ್ ಇದ್ರೆ ಫೇಸ್ ಬುಕ್ ನಲ್ಲಿ ಹಾಕ್ತೀನಿ. ಆದ್ರೆ ಯಾವುದೇ ವೆಬ್ ಸೈಟ್ ನಿಂದ ಕದ್ದು ಡೌನ್ ಲೋಡ್ ಮಾಡಿ ಹಾಡು ಕೇಳಬೇಡಿ. ಒರಿಜಿನಲ್ ಕ್ಯಾಸೆಟ್, ಸಿಡಿ ಕೊಂಡು ತಂದು ಹಾಡು ಕೇಳಿ ಎಂದು ರಾಘವೇಂದ್ರ ರಾಜ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ ಬುಕ್ ನಲ್ಲಿ ಹುಡುಗರು ಚಿತ್ರದ ಅಭಿಮಾನಿಗಳ ಸಂಖ್ಯೆ ಇನ್ನೂ 500 ದಾಟಿಲ್ಲ. ಚಿತ್ರಲೋಕ ತಯಾರಿಸಿ ಕೊಟ್ಟಿರುವ ವೆಬ್ ತಾಣದಲ್ಲಿ ಅಂಥಾ ಹೊಸತನವಿಲ್ಲ. ಯೂಟ್ಯೂಬ್ ವಾಹಿನಿ ಈಗಲ್ಲದಿದ್ದರೂ ಭವಿಷ್ಯದ ದೃಷ್ಟಿಯಿಂದ ಉತ್ತಮ ಪ್ರಯತ್ನವಾಗಿದೆ. ಚಿತ್ರಮಂದಿರಕ್ಕೆ ಜನರನ್ನು ಸೆಳೆಯಲು ಏನೇ ತಂತ್ರ ಬಳಸಿದರೂ, ಪುನೀತ್ ಚಿತ್ರ, ರಾಜ್ ಬ್ಯಾನರ್ ಎಂಬ ಶಕ್ತಿಮಂತ್ರ ಸಾಕು.