»   » ನ.20ರಂದು ಮಾರುಕಟ್ಟೆಗೆ 'ಕಾರ್ತಿಕ್' ಆಡಿಯೋ

ನ.20ರಂದು ಮಾರುಕಟ್ಟೆಗೆ 'ಕಾರ್ತಿಕ್' ಆಡಿಯೋ

Posted By:
Subscribe to Filmibeat Kannada

ಯುವ ನಾಯಕ ಕಾರ್ತಿಕ್ ಶೆಟ್ಟಿ ಅಭಿನಯದ 'ಕಾರ್ತಿಕ್' ಚಿತ್ರದ ಆಡಿಯೋ ನವೆಂಬರ್ 20ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಯಶೋಧ ಮೂವೀಟೋನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಡಬ್ಬಿಂಗ್ ಕಾರ್ಯ ಈಗಾಗಲೆ ಪೂರ್ಣಗೊಂಡಿದೆ.

ಸತೀಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ಅವಿನಾಶ್, ಕುರಿ ಸುನಿಲ್ ಮುಂತಾದವರ ತಾರಾಗಣವಿದೆ. ಈ ಚಿತ್ರದಲ್ಲಿ ಕಾರ್ತಿಕ್ ಶೆಟ್ಟಿಗೆ ಜೊತೆಯಾಗಿ ಅರ್ಚನಾ ಗುಪ್ತಾ ನಟಿಸಿದ್ದಾರೆ.ನಾಯಕ ಕಾರ್ತಿಕ್ ಶೆಟ್ಟಿ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್ ಇಲ್ಲದೇ ಪಾಲ್ಗೊಂಡಿರುವುದು ವಿಶೇಷ.

ನಂಜುಂಡಿ ನಾಗರಾಜ್ ಸಾಹಸ ಸಂಯೋಜನೆಯ ಈ ಚಿತ್ರ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ. ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರೇ ಸೇರಿ ನಿರ್ಮಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಪುಗಾಲಿಡುವ ಎಲ್ಲ ತಯಾರಿಯನ್ನೂ ಮಾಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada