»   » ಇಲ್ಲಿದೆ ಓದಿ ಕಾಯ್ಕಿಣಿ ಬರೆದ ಪಂಚರಂಗಿ ಹಾಡು

ಇಲ್ಲಿದೆ ಓದಿ ಕಾಯ್ಕಿಣಿ ಬರೆದ ಪಂಚರಂಗಿ ಹಾಡು

Posted By:
Subscribe to Filmibeat Kannada

ಮಧುರ ಗೀತೆಗಳ ಸರದಾರ ಎಂದೇ ಖ್ಯಾತರಾದ ಜಯಂತ್ ಕಾಯ್ಕಿಣಿ 'ಪಂಚರಂಗಿ' ಚಿತ್ರಕ್ಕಾಗಿ ಬರೆದ ಹಾಡಿನ ಸಾಹಿತ್ಯವಿದು. ಜಯಂತ್ ಬಳಸುವ ಒಂದೊಂದು ಪದದಲ್ಲೂ ಜೀವಂತಿಕೆ ಇದೆ. ಸಾಹಿತ್ಯದಲ್ಲಿ ಹೊಸ ಹುರುಪಿದೆ. ಸಾಹಿತ್ಯದಲ್ಲಿನ ಲಾಲಿತ್ಯ, ಗಾಂಭೀರ್ಯ, ಬೆರಗು, ಭಾವ ತೀವ್ರತೆ ಪ್ರೇಕ್ಷಕರನ್ನು ಕಾಡದೆ ಇರದು.

"ಉಡಿಸುವೆ ಬೆಳಕಿನ ಸೀರೆಯ..." ಎಂಬ ಚಮತ್ಕಾರದ ಸಾಲುಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ನಿನ್ನ ಕಣ್ಣ ಕಾಗುಣಿತ, ನೋವು ಸಹ ಉಚಿತವಿದೆ ಎಂಬ ಸಾಲುಗಳು ಬಳಸಿಕೊಂಡಿರುವ ರೀತಿ ಕೇಳುಗರನ್ನು ಚಿಂತನೆಗೆ ಹಚ್ಚುತ್ತವೆ. ಮನೋಮೂರ್ತಿ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸೋನು ನಿಗಮ್ ಹಾಡಿದ್ದಾರೆ. ಈ ಹಾಡಿನ ಸಾಲುಗಳನ್ನು ಓದಿ ಆನಂದಿಸಿ.

ಉಡಿಸುವೆ ಬೆಳಕಿನ ಸೀರೆಯ ಚೂರು ನೀ ಸಹಕರಿಸು
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನೂ, ಅದೇ ಚಂದ
ಹಾಗೆಂದೇ ಭಾವಿಸು
ಈ ನಿನ್ನ ಕಣ್ಣ ಕಾಗುಣಿತ
ನಾನರಿಯೆ, ನೀನೆ ಕಲಿಸು
ಸದ್ದಿಲ್ಲದಾ ಅಲೆಯ ಈ ಸೆಳೆತ
ಕಾಣಿಸದು, ನನ್ನ ಸಹಿಸು
ಹೃದಯದ ಸಂಗಡ ನೋವು ಸಹ ಉಚಿತವಿದೆ
ಬಾ ಇನ್ನೊಮ್ಮೆ ಛೇಡಿಸು
ನಾನಿಲ್ಲದಾಗೊಂದು ಕಾಗದಾ ಬಂದು
ಕೂತಿದೆ ಇಂದು, ನನ್ನೆದೆಯಲಿ
ಈ ತೀರದಲ್ಲೊಂದು ತೀರದಾ ದಾಹ
ಏನಿದು ಆಗಾ, ನಿನ್ನೆದುರಲಿ
ಅಂತರಂಗವೆಂಬ ಖಜಾನೆಯಲ್ಲಿ ಇನ್ನು
ನಿನ್ನಾ ಒಂದು ಮುದ್ದಾದ ಗುಟ್ಟಂತೆ ನನ್ನನ್ನು ಸಂಭಾಳಿಸು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada