For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಹಿಂದಿ ಗಾನಾ ಬಜಾನಾ

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಮೊಟ್ಟ ಮೊದಲ ಬಾರಿಗೆ ಹಿಂದಿ ಗೀತೆಯೊಂದನ್ನು ಹಾಡಿದ್ದಾರೆ. ತಮ್ಮ ಮುಂದಿನ ಚಿತ್ರ 'ಕೊಚ್ಚಡಯಾನ್' ಚಿತ್ರಕ್ಕಾಗಿ ಅವರು ಹಿಂದಿ ಗೀತೆ ಹಾಡಿರುವುದು ವಿಶೇಷ. ಕೊಚ್ಚಡಯಾನ್ ಚಿತ್ರ ತಮಿಳು, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.

  ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ತಮಿಳು ಹಾಡನ್ನು ಮೊದಲು ರಜನಿಕಾಂತ್ ಹಾಡಿದ್ದಾರೆ. ಬಳಿಕ ಈ ಹಾಡಿನ ಹಿಂದಿ ಸಾಹಿತ್ಯಕ್ಕೂ ರಜನಿ ಅವರಿಂದಲೇ ಹಾಡಿಸಬೇಕೆಂದು ರೆಹಮಾನ್ ಪಟ್ಟುಹಿಡಿದರಂತೆ. ಇದಕ್ಕೆ ರಜನಿ ಕೂಡಒಪ್ಪಿ ತಮ್ಮ ಕಂಠ ಸರಿಮಾಡಿಕೊಂಡು ಗಾನ ಬಜಾಯಿಸಿದ್ದಾರೆ.

  ಆದರೆ ಉರ್ದು ಮಿಶ್ರಿತ ಆ ಹಾಡನ್ನು ಹಾಡಲು ರಜನಿ ನಾಲಿಗೆ ಅಷ್ಟಾಗಿ ಸಹಕರಿಸಲಿಲ್ಲವಂತೆ. ಬಳಿಕ ಸಾಕಷ್ಟು ಕಸರತ್ತು ಮಾಡಿ ಹಾಡನ್ನು ಹಾಡಿದ್ದಾರೆ. ಸದ್ಯಕ್ಕೆ ಚೆನ್ನೈನಲ್ಲಿ 'ಕೊಚ್ಚಡಯಾನ್' ಚಿತ್ರೀಕರಣ ಭರದಿಂದ ಸಾಗಿದೆ. ಸೌಂದರ್ಯ ನಿರ್ದೇಶಿಸುತ್ತಿರುವ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. (ಏಜೆನ್ಸೀಸ್)

  English summary
  Super Star Rajinikanth for the first time in his acting career, he recorded a Hindi song composed and co-sung by AR Rahman in London for his daughter Soundarya's film Kochadaiyaan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X