ಫಾದರ್ಸ್ ಡೇ ಅಂದ್ರೆ ದೇವತಾ ಮನುಷ್ಯ ರಾಜ್ ಹಾಡು

By Mahesh

ಅಪ್ಪಂದಿರ ದಿನದಂದು ಹಾಡು ಹುಡುಕ ಹೊರಟರೆ ಮೊದಲಿಗೆ ಕಣ್ಣಿಗೆ ಬೀಳುವುದು ಡಾ.ರಾಜ್ ಹಾಗೂ ಸುಧಾರಾಣಿ ಅಭಿನಯದ ದೇವತಾ ಮನುಷ್ಯ ಚಿತ್ರ ಈ ಗೀತೆ. ಚಿ ಉದಯಶಂಕರ್ ಅವರ ಗೀತ ರಚನೆ ಇರುವ ಈ ಹಾಡು ಇಂದಿಗೂ ಜನಪ್ರಿಯ. ಕನ್ನಡಿಗರ ಪಾಲಿನ ಅಣ್ಣನಾಗಿ ಬೆಳೆದ ರಾಜ್ ಅವರು ಅಪ್ಪಾಜಿಯಾಗಿ ಕೂಡಾ ಯಶಸ್ವಿಯಾದವರು. ನಿನ್ನಂಥ ಅಪ್ಪ ಇಲ್ಲಾ ಎಂದು ಹೆಮ್ಮೆಯಿಂದ ರಾಜ್ ಬಗ್ಗೆ ಹೇಳಬಹುದು. ಫಾದರ್ಸ್ ಡೇ ವಿಶೇಷ ಗೀತೆಯಾಗಿ ಈ ಹಾಡು ನಿಮಗಾಗಿ

ಚಿತ್ರ:ದೇವತಾ ಮನುಷ್ಯ (1990)
ಗೀತರಚನೆ:ಚಿ.ಉದಯಶಂಕರ್
ರಾಗಸಂಯೋಜನೆ :ಉಪೇಂದ್ರ ಕುಮಾರ್
ಗಾಯಕರು: ಡಾ.ರಾಜಕುಮಾರ್ ಮತ್ತು ಬಿ.ಆರ್.ಛಾಯಾ

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು

ಡಾ.ರಾಜಕುಮಾರ್: ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ

ಡಾ.ರಾಜಕುಮಾರ್:ನಿನ್ನಂಥ ಮಗಳು ಇಲ್ಲಾ

ಬಿ.ಆರ್.ಛಾಯಾ: ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ ಹುಡುಗನ ಹಾಗಿದೆ

ಡಾ.ರಾಜಕುಮಾರ್:ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
ಆನಂದ ತರುತಿರೆ ಹುಡುಗನೇ ಎಂದಿಗೂ

ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ

ಬಿ.ಆರ್.ಛಾಯಾ:ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ

ಡಾ.ರಾಜಕುಮಾರ್:ನಿನ್ನಂಥ ಮಗಳು ಇಲ್ಲಾ

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ

ಡಾ.ರಾಜಕುಮಾರ್: ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ ಜೊತೆ ನಡೆದರೆ

ಬಿ.ಆರ್.ಛಾಯಾ:ಮುದ್ಡಾದ ಮಾತನು ಹಿತವಾದ ರಾಗದಿ
ದಿನವೆಲ್ಲ ಆಡಲು ಹೇಗೇ ನೀ ಅರಿತೆಯೋ

ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ

ಡಾ.ರಾಜಕುಮಾರ್:ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನು

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ

ಡಾ.ರಾಜಕುಮಾರ್:ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ

ಬಿ.ಆರ್.ಛಾಯಾ:ನೀನೇ ನನ್ನ ಜೀವ ನೀನೇ ನನ್ನ ಪ್ರಾಣ

ಡಾ.ರಾಜಕುಮಾರ್:ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ

ಇಬ್ಬರೂ : ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು

More from Filmibeat

English summary
Fathers Day Special Songs: Dr Rajkumar and Sudharani acted movie Devatha Manushaya has father and daughter song. Here is the lyrics of famous song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X