»   » ಪಾಪ್ ದೇವತೆ ಶಕೀರಾ ಹಾಟ್ ಹಾಗೂ ಗ್ರೇಟ್

ಪಾಪ್ ದೇವತೆ ಶಕೀರಾ ಹಾಟ್ ಹಾಗೂ ಗ್ರೇಟ್

Posted By:
Subscribe to Filmibeat Kannada
Shakira and Nadal
ಕೊಲಂಬಿಯಾ ಮೂಲದ ಹಾಟ್ ಪಾಪ್ ಸಿಂಗರ್ ಶಕೀರಾ ಇಸಬೆಲ್ ಮೆಬರಕ್ ರಿಪೊಲ್ ಅಲಿಯಾಸ್ ಶಕೀರಾ ಹಾಗೂ ಸ್ಪೇನ್ ನ ಟೆನ್ನಿಸ್ ತಾರೆ ರಫೆಲ್ ನಡಾಲ್ ಇಬ್ಬರಿಗೂ ಮದನ ರೋಗ ಬಡಿದಂತೆ ಹೊಸ ವಿಡಿಯೋ ಆಲ್ಬಂ 'ಜಿಪ್ಸಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇನೆ ಇದ್ದರೂ, ಸಂಗೀತ, ನೃತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶಕೀರಾ ವಿಭಿನ್ನ ಹಾಗೂ ವಿಶಿಷ್ಟ ಕಲಾವಿದೆ .

ಫೆ.26ರಂದು ಇಂಗ್ಲೀಷ್ (Gypsy)ಹಾಗೂ ಸ್ಪಾನೀಷ್ (Gitana)ಭಾಷೆಯಲ್ಲಿ ಈ ಅಲ್ಬಂ ಬಿಡುಗಡೆಯಾಗಲಿದೆ. ಆದರೆ, ಈಗಾಗಲೇ ಅಲ್ಬಂನ ಟ್ರೈಲರ್ ಗಳು ಯೂಟೂಬ್ ಸೇರಿದಂತೆ ಎಲ್ಲೆಡೆ ಬಹು ಜನಪ್ರಿಯತೆ ಗಳಿಸಿದೆ. ಶಕೀರಾಳ ಮಾದಕತೆ ಜೊತೆಗೆ ಕಟ್ಟುಮಸ್ತಾದ ಕ್ರೀಡಾಪಟು ನಡಾಲ್ ಜೋಡಿ ಎಲ್ಲರಿಗೂ ಹುಚ್ಚಿಡಿಸಿದೆ. ಸಂಗೀತ ಲೋಕದಲ್ಲಿ ಅತಿಹೆಚ್ಚು ಗಳಿಕೆಯ ಮಹಿಳಾಮಣಿಗಳ ಸಾಲಿನಲ್ಲಿ ಮಡೋನ್ನಾ, ಬಾರ್ಬರಾ ಸ್ಟ್ರೇಸ್ಯಾಂಡ್, ಸೆಲಿನೆ ಡಿಯಾನ್ ನಂತರ ಸ್ಥಾನದಲ್ಲಿ ಶಕೀರಾ ನಿಲ್ಲುತ್ತಾರೆ. ಸುಮಾರು 6 ಅಲ್ಬಂಗಳನ್ನು ಹೊರತಂದಿರುವ ಶಕೀರಾ ಅವರ ಕಳೆದ ಅಲ್ಬಂದ ಶೀ ವುಲ್ಫ್(2009) ಜನಪ್ರಿಯತೆ ಗಳಿಸಿತ್ತು.

ದಾನಶೂರಸಂಗೀತ ಸಾಮ್ರಾಜ್ಞಿ

Pies Descalzos Foundation ಎಂಬ ದತ್ತಿ ಸಂಸ್ಥೆ ಸ್ಥಾಪಿಸಿರುವ ಶಕೀರಾ, ತನ್ನ ದುಡಿಮೆಯ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಯಥೇಚ್ಛವಾಗಿ ಬಳಸುತ್ತಿದ್ದಾರೆ. ಯುನಿಸೆಫ್ ನ ಗುಡ್ ವಿಲ್ ನ ರಾಯಭಾರಿಯಾಗಿರುವ ಶಕೀರಾ, ಮಕ್ಕಳ ಶಿಕ್ಷಣ, ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ವಿಶ್ವದ ಅತಿ ಶ್ರೀಮಂತರಾದ ಕರ್ಲೊಸ್ ಸಿಮ್, ವಾರೆನ್ ಬಫೆಟ್ ಅವರ ಮಗ ಹಾರ್ವಡ್ ಬಫೆಟ್ ಅವರಿಂದ ಸುಮಾರು 200 ಮಿಲಿಯನ್ ಡಾಲರ್ ಹಣವನ್ನು ದೇಣಿಗೆಯಾಗಿ ಪಡೆಯುವಲ್ಲಿ ಶಕೀರಾ ಯಶಸ್ವಿಯಾಗಿದ್ದಾರೆ.

ಒಂದು ಅಂದಾಜಿನ ಪ್ರಕಾರ ಶಕೀರಾ ಕನಿಷ್ಟವೆಂದರೂ 55,000ಡಾಲರ್ ನಷ್ಟು ಹಣವನ್ನು ಒಂದು ವರ್ಷದ ದಾನ ಧರ್ಮಕಾರ್ಯಗಳಿಗೆ ಮೀಸಲಿಡುತ್ತಾರೆ. ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ ಸಿಕ್ಕಿ, ಅಲ್ಲಿನ ಶಾಲೆಗಳು ನಾಶವಾದಾಗ ಅಲ್ಲಿಗೆ ಭೇಟಿ ನೀಡಿದ ಶಕೀರಾ, ಮೂರು ದಿನಗಳ ಕಾಲ ಮಿರ್ಜಾಪುರ್ ಗ್ರಾಮದಲ್ಲಿ ನೆಲೆಸಿ, ಸ್ಥಳೀಯ ಮಕ್ಕಳೊಡನೆ ಆಡಿ ನಲಿದರು. ತಮ್ಮ 32 ವರ್ಷದ ಹುಟ್ಟುಹಬ್ಬ ಪ್ರಯುಕ್ತ ಸ್ವಂತ ಊರು ಬಂರಂಕ್ವಿಲ್ಲಾದಲ್ಲಿ 6 ಮಿಲಿಯನ್ ಡಾಲರ್ ಖರ್ಚು ಮಾಡಿ ಶಾಲೆ, ಕಾಲೇಜು ಕಟ್ಟಿಸಿದ್ದಾರೆ.

ಡಿಸೆಂಬರ್ 7, 2009 ರಲ್ಲಿ ಶಕೀರಾ ಇನ್ನೊಂದು ಸಾಧನೆ ಮೆರೆದರು. ವಿಶ್ವಖ್ಯಾತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಕ್ಕಳ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. ಅಲ್ಬರ್ಟ್ ಐನ್ ಸ್ಟೀನ್,ಮದರ್ ಥೆರೆಸಾ, ದಲೈ ಲಾಮಾ ಸೇರಿದಂತೆ ಅನೇಕಾನೇಕ ಅಮೆರಿಕ ಅಧ್ಯಕ್ಷರಿಗೆ ಸಿಕ್ಕ ಗೌರವ ಉಪನ್ಯಾಸಕ ಸ್ಥಾನ, ಶಕೀರಾಗೂ ಪ್ರಾಪ್ತಯಾಗಿದ್ದು, ಆಕೆಯ ಸಾಧನೆ ಎನ್ನಬಹುದು. ಅಂದಿನ ಉಪನ್ಯಾಸದಲ್ಲಿ ಆಕೆಯ ಮಾತುಗಳು ಮನಮುಟ್ಟುವಂತ್ತಿತ್ತು. "'2010 ರಲ್ಲಿ ವಿಶ್ವದ ನಂ.1 ಆಗಲು ಹಲವು ದೇಶಗಳು ಹವಣಿಸುತ್ತಿವೆ ಇದಕ್ಕಿಂತ ಶಿಕ್ಷಣ, ಸ್ವಾವಲಂಬನೆ ಬಹುಮುಖ್ಯ. ಮುಂಬರುವ ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ 30 ಯೋಧರನ್ನು ಕಳಿಸುವ ಬದಲು 30 ಸಾವಿರ ಶಿಕ್ಷಕರನು ಕಳಿಸುವಂತಾಗಲಿ, ಜ್ಞಾನ ಹಂಚುವಿಕೆಯಿಂದ ವಿಶ್ವಶಾಂತಿ ನೆಲೆಸುವಂತಾಗಲಿ" ಎಂಬ ಉನ್ನತ ಆದರ್ಶದ ಮಾತುಗಳನ್ನಾಡಿದ್ದು ಪಾಪ್ ಲೋಕದ ದೇವತೆ ಶಕೀರಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada