»   » ಉಪೇಂದ್ರ ಚಿತ್ರಕ್ಕೆ ರೆಹಮಾನ್ ಸಂಗೀತ ಬರೀ ಓಳು

ಉಪೇಂದ್ರ ಚಿತ್ರಕ್ಕೆ ರೆಹಮಾನ್ ಸಂಗೀತ ಬರೀ ಓಳು

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ 'ಗಾಡ್ ಫಾದರ್' ಚಿತ್ರಕ್ಕೆ ನಿಜಕ್ಕೂ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತ ನೀಡಿದ್ದಾರಾ? ಎಂಬ ಪ್ರಶ್ನೆ ತಲೆ ಎತ್ತಿದೆ. ಏಕೆಂದರೆ ರೆಹಮಾನ್ ಕನ್ನಡ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಇದೇ ಮೊದಲಲ್ಲ.

ಐದು ವರ್ಷಗಳ ಹಿಂದೆ ಧ್ಯಾನ್ ಹಾಗೂ ಶರ್ಮಿಳಾ ಮಾಂಡ್ರೆ ಮುಖ್ಯಭೂಮಿಕೆಯಲ್ಲಿದ್ದ 'ಸಜನಿ' ಎಂಬ ಚಿತ್ರ ಬಿಡುಗಡೆಯಾದಾಗಲು ಇದೇ ರೀತಿ ಪ್ರಚಾರ ನೀಡಲಾಗಿತ್ತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಅಸಲಿ ಬಣ್ಣ ಬಯಲಾಗಿತ್ತು. ರೆಹಮಾನ್ ತಮಿಳು ಚಿತ್ರಕ್ಕೆ ನೀಡಲಾಗಿದ್ದ ಟ್ಯೂನ್‌ಗಳನ್ನು ಅನಾಮತ್ತಾಗಿ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು.

ಇನ್ನು ಉಪೇಂದ್ರ ಚಿತ್ರಕ್ಕೆ ಬರುವುದಾದರೆ 'ಗಾಡ್ ಫಾದರ್' ಚಿತ್ರ ತಮಿಳಿನ 'ವರಲಾರು' ಚಿತ್ರದ ರೀಮೇಕ್. ಆದರೆ ಈ ಚಿತ್ರಕ್ಕೆ ರೆಹಮಾನ್ ಅವರು ಸಂಗೀತ ನೀಡಿರುವುದು ಅರ್ಧ ಸತ್ಯ ಎನ್ನಲಾಗಿದೆ. ಮೂಲ ಚಿತ್ರ 'ವರಲಾರು'ಗೂ ರೆಹಮಾನ್ ಸಂಗೀತ ನೀಡಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.

ಮೂಲ ಚಿತ್ರದ ಬಹಳಷ್ಟು ಟ್ಯೂನ್‌ಗಳನ್ನು ಹಾಗೆಯೇ ಕಾಪಿ ಮಾಡಲಾಗಿದ್ದು ಕೆಲವೇ ಕೆಲವು ಟ್ಯೂನ್‌ಗಳನ್ನು ಮಾತ್ರ ಗಾಡ್ ಫಾದರ್‌ಗೆ ರೆಹಮಾನ್ ಸಂಯೋಜಿಸಿದ್ದಾರಂತೆ. ಆದರೆ ಈ ಮಾತನ್ನು ಚಿತ್ರದ ನಿರ್ದೇಶಕ ಶ್ರೀರಾಮ್ ಮಾತ್ರ ಸುತಾರಾಂ ಒಪ್ಪಲ್ಲ. ರೆಹಮಾನ್ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡು ತಮ್ಮ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಎನ್ನುತ್ತಾರೆ. (ಏಜೆನ್ಸೀಸ್)

English summary
Sandalwood film industry suspected that, has AR Rahman really scored music for Kannada movie God Father? It is said that, the Mozart of Madras will be making his debut in realstar Upendra's forthcoming movie Godfather.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X