»   »  ಸಾಕಷ್ಟು ಭರವಸೆ ಮೂಡಿಸಿರುವ ಎರಡು ಚಿತ್ರಗಳು!

ಸಾಕಷ್ಟು ಭರವಸೆ ಮೂಡಿಸಿರುವ ಎರಡು ಚಿತ್ರಗಳು!

Posted By:
Subscribe to Filmibeat Kannada
Nisha Kothari
ಬಿಡುಗಡೆಗೂ ಮುನ್ನವೇ ಕನ್ನಡ ಎರಡು ಚಿತ್ರಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಒಂದು ಪುನೀತ್ ರಾಜ್ ಕುಮಾರ್ ನಟನೆಯ ರಾಜ್ ಹಾಗೂ ಮತ್ತೊಂದು ರಮ್ಯಾ, ಪ್ರೇಮ್ ಕುಮಾರ್ ಅಭಿನಯದ ಜೊತೆಗಾರ ಚಿತ್ರ. ಈ ಎರಡು ಚಿತ್ರಗಳು ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.

ಜೊತೆಗಾರ ಮತ್ತು ರಾಜ್ ಚಿತ್ರದ ಧ್ವನಿಸುರುಳಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಈ ಎರಡು ಚಿತ್ರಗಳ ಹೆಗ್ಗಳಿಕೆ. ಚಿತ್ರ ಬಿಡುಗಡೆಗೂ ಮುನ್ನವೇ ರಾಜ್ ಧ್ವನಿಸುರುಳಿಗಳು ದಾಖಲೆ ಮಾರಾಟ ಖಂಡಿವೆ. ಜೋಗಿ ಚಿತ್ರ ಬಿಡುಗಡೆಯಾದ ನಂತರ ಧ್ವನಿಸುರುಳಿಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿತ್ತು. ಆದರೆ ರಾಜ್ ಚಿತ್ರದ ಧ್ವನಿಸುರುಳಿಗಳು ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿವೆ ಎನ್ನುತ್ತಾರೆ ಅಶ್ವಿನಿರಾಮ್ ಪ್ರಸಾದ್.

ಜೊತೆಗಾರ ಚಿತ್ರದ ಧ್ವನಿಸುರುಳಿಗೂ ಉತ್ತಮ ಬೇಡಿಕೆ ಉಂಟಾಗಿದೆ. ಚಿತ್ರದ ಪ್ರಮುಖ ಪಾತ್ರಧಾರಿ ಪ್ರೇಮ್ ಕುಮಾರ್ ತನ್ನನ್ನು ಸಹ ನಟ ಎಂದು ಕರೆದು ಅಪಮಾನ ಮಾಡಿದರು ಎಂದು ಆ ಚಿತ್ರದ ನಿರ್ಮಾಪಕರೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ಅತ್ತ ಧ್ವನಿಸುರುಳಿ ವಿಚಾರದಲ್ಲಿ ಇತ್ತ ವಿವಾದಗಳಿಂದ ಜೊತೆಗಾರನಿಗೆ ಬಿಟ್ಟಿ ಪ್ರಚಾರ ಸಿಕ್ಕಿದೆ. ಒಟ್ಟಿನಲ್ಲಿ ಜೊತೆಗಾರ ಚಿತ್ರವೂ ಕನ್ನಡ ಚಿತ್ರೋದ್ಯಮದಲ್ಲಿ ಭರವಸೆ ಮೂಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X