»   »  ವಾಯ್ಸ್ ಆಫ್ ಬೆಂಗಳೂರಿಗೆ ಅಮೀರ್ ಖಾನ್?

ವಾಯ್ಸ್ ಆಫ್ ಬೆಂಗಳೂರಿಗೆ ಅಮೀರ್ ಖಾನ್?

Subscribe to Filmibeat Kannada
Amir Khan
'ವಾಯ್ಸ್ ಆಫ್ ಬೆಂಗಳೂರ'ನ್ನು ಆಯ್ಕೆ ಮಾಡಲು ಬಾಲಿವುಡ್ ನಟ ಅಮೀರ್ ಖಾನ್ ಜುಲೈತಿಂಗಳಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಗರುಡ ಮಾಲ್ ನಲ್ಲಿ ನಡೆಯಲಿರುವ 'ವಾಯ್ಸ್ ಆಫ್ ಬೆಂಗಳೂರು ಸೀಸನ್ 3' ಕಾರ್ಯಕ್ರಮಕ್ಕೆ ಅಮೀರ್ ಚಾಲನೆ ನೀಡಲಿದ್ದು ಅಂತಿಮ ವಿಜೇತರನ್ನು ಆಯ್ಕೆ ಮಾಡುವವರೆಗೂ ಅವರು ಬೆಂಗಳೂರಿನಲ್ಲೇ ಉಳಿಯಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಗರುಡ ಮಾಲ್ ನ ವ್ಯವಸ್ಥಾಪಕ ಎಂ ಆರ್ ನಂದೀಶ್, ಅವರ ಡೇಟ್ಸ್ ಗಾಗಿ ನಿರೀಕ್ಷಿಸಲಾಗುತ್ತಿದೆ. ಅಮೀರ್ ನಮ್ಮೊಂದಿಗೆ ಯಾವಾಗ ಭಾಗವಹಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದರು. ರಾಜ್ ಕುಮಾರ್ ಹಿರಾನಿ ಚಿತ್ರೀಕರಣಕ್ಕಾಗಿ ಅಮೀರ್ ಖಾನ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂ ಸಂಸ್ಥೆಯ ಕ್ಯಾಂಪಸ್ ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಬಹಳಷ್ಟು ಬದಲಾವಣೆಗಳೊಂದಿಗೆ ವಾಯ್ಸ್ ಆಫ್ ಬೆಂಗಳೂರು ಸೀಸನ್ 3ನೇ ಕಾರ್ಯಕ್ರಮ ಜುಲೈ 9ರಿಂದ ಆರಂಭವಾಗಲಿದೆ. ಬಾಲಿವುಡ್ ಮತ್ತು ಕನ್ನಡ ಚಿತ್ರರಂಗದ ತಾರೆಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ವಿಶೇಷ. ಚಿತ್ರ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಗಾಯಕಿ ಚಿತ್ರಾ ಅವರು ತಂಡದ ಸದಸ್ಯರಲ್ಲಿರುತ್ತಾರೆ.

ಬಾಲಿವುಡ್ ನಿಂದ ಗಾಯಕ ಸೋನು ನಿಗಂ, ಅಮೀರ್ ಖಾನ್, ಜೆನಿಲಿಯಾ ಡಿಸೋಜಾ ಮುಂತಾದ ತಾರೆಗಳು ಬರುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಶನ್ ಸಹ ಬರುವ ಸಾಧ್ಯತೆಗಳಿಗೆ ಎಂದು ಕಾರ್ಯಕ್ರಮದ ನಿರ್ವಾಹಕರೊಬ್ಬರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಎಲೆಮರೆಯ ಹಾಡು ಹಕ್ಕಿಗಳಿಗೆ ವಿಷ್ಣು ಆಹ್ವಾನ!
ಲಕ್ಷ್ಮಿನಾರಾಯಣ್ ಮದುವೆಗೆ ವಿಭಿನ್ನ ಕರೆಯೋಲೆ!
ದಾಖಲೆ ಮಾರಾಟ ಕಂಡರಾಜ್ ಧ್ವನಿಸುರುಳಿ
ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada