»   »  ಅಪ್ಪುಗೆ ಪ್ರೇಮ್ ಕಹಾನಿ ಸಿಡಿ ಕೊಟ್ಟ ಪೂಜಾ ಗಾಂಧಿ

ಅಪ್ಪುಗೆ ಪ್ರೇಮ್ ಕಹಾನಿ ಸಿಡಿ ಕೊಟ್ಟ ಪೂಜಾ ಗಾಂಧಿ

Subscribe to Filmibeat Kannada

'ತಾಜ್ ಮಹಲ್' ಚಿತ್ರದ ಯಶಸ್ಸಿನಿಂದ ಉತ್ತೇಜಿತರಾಗಿರುವ ನಿರ್ದೇಶಕ ಆರ್ ಚಂದ್ರು ಅವರ ಎರಡನೇ ಚಿತ್ರ ' ಪ್ರೇಮ್ ಕಹಾನಿ' ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ನಡೆಯಿತು. ಆ ದಿನಗಳು ಚಿತ್ರದ ನಂತರ ಸಂಗೀತ ಬ್ರಹ್ಮ ಇಳೆಯರಾಜಾ ಅವರು ಪ್ರೇಮ್ ಕಹಾನಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಧ್ವನಿಸುರಳಿ ಬಿಡುಗಡೆಗೊಳಿಸಿದರು.

ತಾಜ್ ಮಹಲ್ ಚಿತ್ರದಂತೆ ನನ್ನ ನಿರ್ದೇಶನದ ಪ್ರೇಮ ಕಹಾನಿ ಚಿತ್ರ ಕೂಡ ಯಶಸ್ಸುಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ ಎಂದು ಚಂದ್ರು ಈ ಸಂದರ್ಭದಲ್ಲಿ ಹೇಳಿದರು. 28 ವರ್ಷಗಳಿಂದ ಚಿತ್ರವೊಂದನ್ನು ನಿರ್ಮಿಸಬೇಕೆಂದು ಕನಸು ಕಂಡಿದ್ದೆ, ಅದೂ ನನ್ನ ನಿರ್ಮಾಣದ ಚಿತ್ರಕ್ಕೆ ಇಳೆಯರಾಜಾ ಅವರ ಸಂಗೀತದೊಂದಿಗೆ ಸಂಯೋಜಿಸಬೇಕು ಎಂಬ ಕನಸಿತ್ತು, ನಿರ್ದೇಶಕ ಚಂದ್ರು ಮೂಲಕ ಅದು ಈಡೇರಿದೆ ಎಂದು ನಿರ್ಮಾಪಕ ವಿಶ್ವನಾಥ್ ಹೇಳಿದ್ದಾರೆ. ಇಳೆಯರಾಜಾ ಸಂಗೀತ ನಿರ್ದೇಶಿಸಿರುವ ಚಿತ್ರವೊಂದಕ್ಕೆ ನಾನು ನಾಯಕನಾಗಿರುವುದು ನನ್ನ ಅದೃಷ್ಟ ಎಂದು ನಾಯಕ ಅಜಯ್ ರಾವ್ ತನ್ನ ಮನದಾಳದ ಮಾತನ್ನು ಬಿಚ್ಚಿಟ್ಟರು.

ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ. ಕಲ್ಯಾಣ್, ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಸಾಹಿತ್ಯವಿದೆ. ಚಿತ್ರದ ಎರಡು ಹಾಡುಗಳನ್ನು ಇಳಯರಾಜ ಅವರೇ ಸ್ವತಃ ಹಾಡಿದ್ದಾರೆ. ಶ್ರೇಯಾ ಘೋಷಾಲ್, ಮೇಘಾ ಪಾಂಡೆ, ಟಿಪ್ಪು, ರಾಹುಲ್ ಪಾರ್ಥಸಾರಥಿ ಮತ್ತು ಸಾಧನಾ ಸರ್ಗಂ ಕೂಡ ಚಿತ್ರದಲ್ಲಿ ಹಾಡಿದ್ದಾರೆ. ಚಿತ್ರದ ಧ್ವನಿಸುರಳಿ ಅಶ್ವಿನಿ ಆಡಿಯೋ ಮೂಲಕ ಹೊರಬಂದಿದೆ.

(ದಟ್ಸ್ ಕನ್ನಡ ಚಿತ್ರ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada