»   »  ಕುಲವಧು ಚಿತ್ರದ ತಾಯೆ ಬಾರ ಮೊಗವ ತೋರ

ಕುಲವಧು ಚಿತ್ರದ ತಾಯೆ ಬಾರ ಮೊಗವ ತೋರ

Subscribe to Filmibeat Kannada
S Janaki
ಅರುವತ್ತರ ದಶಕದಲ್ಲಿ ತೆರೆಕಂಡ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ 'ಕುಲವಧು'(1963) ಸಹ ಒಂದು. ರಾಜ್ ಕುಮಾರ್, ಲೀಲಾವತಿ ಅವರ ಜನಪ್ರಿಯ ಜೋಡಿ, ಜಿ.ಕೆ.ವೆಂಕಟೇಶ್ ಸಂಗೀತದ ಮೋಡಿ ಚಿತ್ರಪ್ರೇಮಿಗಳನ್ನು ಎಲ್ಲ ಕಾಲದಲ್ಲೂ ಕಟ್ಟಿಹಾಕುವಂಥ ಚಿತ್ರ! ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ ಲೇಖನಿಯಿಂದ ಹೊಮ್ಮಿದ ಗೀತೆಗೆ ಎಸ್.ಜಾನಕಿ ಮತ್ತ್ತು ಸಂಗಡಿಗರು ಧ್ವನಿಯಾಗಿದ್ದರು. 'ಕುಲವಧು' ಚಿತ್ರದ ಮತ್ತೊಂದು ಗೀತೆ 'ಯುಗ ಯುಗಾದಿ ಕಳೆದರೂ...' ಎಷ್ಟೇ ವಸಂತಗಳು ಉರುಳಿದರೂ ಸದಾ ಸ್ಫೂರ್ತಿಯ ಚಿಲುಮೆಯಾಗಿ ಕೇಳಿಸುತ್ತದೆ!

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ನಮ್ಮ ತಪ್ಪನೆನಿತ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲೆಂದೆವು
ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

ತನ್ನ ಮರೆಯ ಕಂಪನರಿಯ ಗಗನ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡಕುವ
ಕನ್ನಡ ಕಸ್ತೂರಿಯನ್ನ ಹೊಸತುಸಿರೆಂತೀರದೆನ್ನ
ಸುರಭಿಯಲ್ಲಿ ನೀನದನ್ನ ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು, ನವಶಕ್ತಿಯನ್ನೆಬ್ಬಿಸು
ಹೊಸ ಸುಗಂಧ, ರಸಗೆಯಿಂದ ಜಗದಿ ಹೆಸರ ಹಬ್ಬಿಸು
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ತಾಯೆ ನಮ್ಮ ಜನ್ಮದಾತೆಯೆ, ನಮ್ಮ ಜನ್ಮದಾತೆಯೆ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಗಾಯಕಿ ಎಸ್ ಜಾನಕಿಗೆ ಗೌರವ ಡಾಕ್ಟರೇಟ್?
ಲೀಲಾವತಿಗೆ ತುಮಕೂರು ವಿವಿಯ ಡಾಕ್ಟರೇಟ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada