»   » ಯಾವನಿಗ್ ಗೊತ್ತು ಹಾಡಿಗೆ ಟೆಕ್ಕಿಶೈಲಿ ರೀಮಿಕ್ಸ್...

ಯಾವನಿಗ್ ಗೊತ್ತು ಹಾಡಿಗೆ ಟೆಕ್ಕಿಶೈಲಿ ರೀಮಿಕ್ಸ್...

By: * ವಿಬಿ ಅಮರನಾಥ್, ಬ್ಯಾಡಗಿ
Subscribe to Filmibeat Kannada
Paramathma song lyrics in techie style
ಎಲ್ಲಾ ಜೀನಿಯಸ್ಸಾ...ಬೇರೆಯವರೆ ಸರಿಯಿಲ್ಲ ಅನ್ನೋದಾಯ್ತಲ್ಲ...
PU"ನ, PVG"ನ, Implementationನ್ನಾ ಯಾರಿಗ್ ಗೊತ್ತು...

ಏನು ಮಾಡೋದು ಮೇಜರ್ರು BUGವೊಂದು ಸೈಟಲ್ಲಿ ಸಿಕ್ತು...ಸೈಟಲ್ಲಿ ಸಿಕ್ತು
ಏನು ಹೇಳೋದು ಕಸ್ಟಮರ್ಗೆ ಇಂಥಾ ಟೈಮಲ್ಲಿ ಯಾರಿಗೊತ್ತು...ಯಾರಿಗೊತ್ತು...
ಸರ್ಟಿಫಿಕೇಷನೆಂಬ ಕಿರೀಟದಿಂದ ಕೆಳಗೆ ಹಾಗೆ ಬಿದ್ದಂಗಾಯ್ತು

ಸರ್ಟಿಫಿಕೇಷನ್ ಯಾತಕ್ಕೋ ಸೌಂಡು ಮಾಡುತ್ತೋ ಯಾರಿಗ್ ಗೊತ್ತು..ಯಾರಿಗ್ ಗೊತ್ತು..
ಕಸ್ಟಮರ್ ದುಡ್ಡು ಕೊಡ್ತಾನೋ... ಹಾಗೆ ಬಿಡ್ತಾನೋ ಯಾರಿಗ್ ಗೊತ್ತು..ಯಾರಿಗ್ ಗೊತ್ತು..

ಅದು ಯಾವುದೋ ಒಂದು ಪ್ಯಾಚನ್ನ... ಟೆಸ್ಟಿಂಗ್ ಮಾಡ್ತಾ ಇದ್ದಾಗ
ಒಂದೊಂದು BUGಗಿಗು ಟೆಸ್ಟ್-ಕೇಸನ್ನ... ಬರಿದಿಟ್ಟು ಶುರು ಮಾಡ್ದಾಗ
BOSS"ದು ಒಂದು mail ಹಾಗೆ ಬಂತು ನೋಡ್ರಿ

ಏನ್ ಮಾಡೀರಿ ಕೆಲ್ಸ ಅಂತ ಉಗುದ್ರು ನೋಡ್ರಿ
ಹೃದಯದ ಮೇಲೆ ಬರೆಯನ್ನು ಎಳೆದು
Appraisal"ಗೆ ಒಂದು ಕಪ್ಪು ಚುಕ್ಕೆ ಇಟ್ಟಂಗಾಯ್ತು

ಇಂಥಾ ಟೈಮಲ್ಲಿ... appraisal ಬರ್ಬೇಕಿತ್ತಾ ಕರ್ಮಕಾಂಡ...ಕರ್ಮಕಾಂಡ...
ಎಲ್ಲಾ ಟ್ಯಾಲೆಂಟೂ...ಬೆಲ್ ಕರ್ವಿಗೆ ಚಿಂತೆ ಮಾಡಿತ್ತು....ಕರ್ಮಕಾಂಡ...ಕರ್ಮಕಾಂಡ...

ದಿನದ ಇಪ್ಪತ್ನಾಲ್ಕು ಘಂಟೆ ಯಾರಿಗೂ ಸಾಲಲ್ಲ
ನೆಮ್ಮದಿಯಿಂದ ನಿದ್ದೆ ಯಾವಾಗೂ ಬರಲ್ಲ
BUGS ಇಲ್ದೆ PRODUCT ಕೊಡಕ್ಕಾಗಲ್ಲ
ಎಲ್ಲಾ ಗೊತ್ತಿದ್ದು ಹಿಂಗೆ ಬರಿತಾರಲ್ಲ
ಮತ್ತೆ ಮತ್ತೆ ಹಿಂಗೆ ಪ್ಯಾಚಲ್ಲಿ ಹಾಗೆ ಒಂದು
ತುಂಬಾ ಒಳ್ಳೆ ಬಗ್ಗು ಸಿಕ್ತು ಬಿಡ್ತು ಕಣ್ರೀ...
ತುಂಬಾ ಜೀನಿಯಸ್ ಆಗಿದ್ರೆ ನಾನು
ಮುಂಚೇನೆ ಎಲ್ಲಾ ಕೊಡ್ತಿದ್ದೆ ಕಣ್ರೀ...

ಈ BUGಗಿಗೂ ಬೆಲೆ ಇರಬಹುದಾ... ಯಾರಿಗ್ ಗೊತ್ತು..ಯಾರಿಗ್ ಗೊತ್ತು..
ಮುಂದೆ ಮತ್ತೊಂದು ಹೀಗೆ ಸಿಗಬಹುದಾ...ಯಾರಿಗ್ ಗೊತ್ತು

English summary
Paramathma kannada movie song 'Yavanig gottu..' re written in software style by techie Amaranath VB. Movie has Puneeth Rajkumar and Deepa Sannidhi in the lead. Original song lyric penned by Director cum lyricist Yograj Bhat with Tippu as singer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada