»   » ಭಾರತಕ್ಕೆ ಬಂದ ಗೂಗಲ್ ಆನ್ ಲೈನ್ ಮ್ಯೂಸಿಕ್

ಭಾರತಕ್ಕೆ ಬಂದ ಗೂಗಲ್ ಆನ್ ಲೈನ್ ಮ್ಯೂಸಿಕ್

Posted By:
Subscribe to Filmibeat Kannada

ಹತ್ತು ಹಲವು ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಮೂಲಕ ವೆಬ್ ಗ್ರಾಹಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿರುವ ಗೂಗಲ್ ಸಂಸ್ಥೆ, ಈಗ ಸಿನಿಮಾ ಸಂಗೀತ ಲೋಕದತ್ತ ಗಮನ ಹರಿಸಿದೆ. ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಡಿರುವ ಪೈರಸಿ ಜಾಲಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಗೂಗಲ್, ನ್ಯಾಯಯುತವಾಗಿ ಸಂಗೀತ ಆಲಿಸುವ ಡೌನ್ ಲೋಡ್ ಮಾಡಿಕೊಳ್ಳುವ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಕಳೆದ ವರ್ಷವೇ ಮ್ಯೂಸಿಕ್ ಸರ್ಚ್ ಆರಂಭಿಸಿದರೂ ಭಾರತದಲ್ಲಿ ಮೊದಲ ಬಾರಿಗೆ ಈ ಸೌಲಭ್ಯ ಒದಗಿಸುತ್ತಿದೆ.

ಈ ನಿಟ್ಟಿನಲ್ಲಿ ಸರ್ಚ್ ಇಂಜಿನ್ ಕ್ಷೇತ್ರದ ದಿಗ್ಗಜ ಗೂಗಲ್ ಈಗಾಗಲೆ ಭಾರತದ ಸರೇಗಾಮ ಸಂಸ್ಥೆ, ಅಮೆರಿಕ ಮೂಲಕ ರೆಕಾರ್ಡಿಂಗ್ ಕಂಪೆನಿ ಸಾವ್ನ್(Saavn) ಹಾಗೂ ಇನ್.ಕಾಮ್ ಜೊತೆ ಕೈ ಜೋಡಿಸಿದೆ.

ಈ ಕಂಪೆನಿಗಳು ಹೊಂದಿರುವ ಸಾವಿರಾರು ಅಧಿಕೃತ ಹಾಡುಗಳು ಕೇಳುಗರಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಬಾಲಿವುಡ್ ನ ಹಾಡುಗಳು ಮಾತ್ರ ಲಭ್ಯವಿದ್ದು, ಮುಂದೆ ಶಾಸ್ತ್ರೀಯ ಸಂಗೀತ, ಪ್ರಾದೇಶಿಕ ಸಂಗೀತ ಲೋಕಕ್ಕೂ ಗೂಗಲ್ ಕಾಲಿಡಲಿದೆ.

ಗೂಗಲ್ ಸಂಗೀತ ಕೇಳುವುದು ಹೇಗೆ: ಗೂಗಲ್ ಮ್ಯೂಸಿಕ್ ಸರ್ಚ್ ಇಂಜಿನ್ (http://www.google.co.in/music)ಮೂಲಕ ನಿಮ್ಮಿಷ್ಟದ ಹಾಡು ಅಥವಾ ಚಿತ್ರದ ಮೊದಲ ಸಾಲು ಹಾಕಿ, ಹುಡುಕಿ ತೆಗೆಯಬಹುದು. ಗೂಗಲ್ ನ ಮೂವರು ಪಾರ್ಟ್ನರ್ ಗಳ ಮೂಲಕ ಅವಿರತವಾಗಿ ಸಂಗೀತ ಪಟ್ಟಿ ಸಿಗಲಿದೆ. ನಂತರ ನಿಮಗೆ ಬೇಕಾದ ಹಾಡಿನ ಮೇಲೆ ಕ್ಲಿಕ್ ಮಾಡಿದರೆ, ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ಹಾಡನ್ನು ಕೇಳಬಹುದು.

ಗೂಗಲ್ ಮ್ಯೂಸಿಕ್ ಸರ್ಚ್ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ, ಈಗಾಗಲೇ ಪ್ರಾಯೋಗಿಕವಾಗಿ ಲಭ್ಯವಿದೆ. ಗೂಗಲ್ ನ ಈ ಸೇವೆಯಿಂದ ಪೈರಸಿ ತಡೆಗಟ್ಟಬಹುದ್ದಲ್ಲದೆ, ಗ್ರಾಹಕರು ಮ್ಯೂಸಿಕ್ ಸರ್ವ್ ಆಡ್ ಅನ್ನು ತಮ್ಮ ವೆಬ್ ತಾಣಗಳಲ್ಲಿ ಅಳವಡಿಸಿಕೊಂಡು ಟ್ರಾಫಿಕ್ ಹೆಚ್ಚಿಸಿಕೊಳ್ಳಬಹುದು.

ಗುರೂಜಿ.ಕಾಂ ಕೂಡಾ 1932ರ ನಂತರ ಬಂದ ಎಲ್ಲಾ ಬಗೆಯ ಸಂಗೀತವನ್ನು ತನ್ನ ಸರ್ಚ್ ಇಂಜಿನ್ ನಲ್ಲಿ ಅಳವಡಿಸಿಕೊಂಡಿದ್ದು, ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಗುಜರಾತಿ ಭಾಷೆಗಳ ಸಾವಿರಾರು ಹಾಡುಗಳನ್ನು ಗ್ರಾಹಕರಿಗೆ ತಲುಪಿಸಿದೆ.

ಆದರೆ, ಇದರಲ್ಲಿ ಪೈರೇಟೆಡ್ ಹಾಡುಗಳು ಡೌನ್ ಲೋಡ್ ಗೆ ಲಭ್ಯವಾಗಿ, ಗುರೂಜಿ.ಕಾಂ ಸಿಇಒ ಅನುರಾಗ್ ಅವರಿಗೆ ಕಾರಾಗೃಹದ ದರ್ಶನ ಕೂಡಾ ಮಾಡಿಸಿದ್ದು ಹಳೆ ಕಥೆ. ಒಟ್ಟಿನಲ್ಲಿ ಸಂಗೀತ ಪ್ರೇಮಿಗಳ ಮನ ತಣಿಸಲು ಆನ್ ಲೈನ್ ಮ್ಯೂಸಿಕ್ ಸೇವೆಗಳು ಸಿದ್ಧವಾಗುತ್ತಿವೆ.

ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada