»   » ಧನುಷ್ 'ಥ್ರೀ' ಕೊಲಾವರಿ ಡಿ... ಮಿಂಚಿನ ಸಂಚಲನ

ಧನುಷ್ 'ಥ್ರೀ' ಕೊಲಾವರಿ ಡಿ... ಮಿಂಚಿನ ಸಂಚಲನ

Posted By:
Subscribe to Filmibeat Kannada
Dhanush
ಧನುಷ್ ತಮಿಳಿನ ಖ್ಯಾತ ನಟನೆಂಬುದು ಎಲ್ಲರಿಗೂ ಗೊತ್ತು. ಆದರೆ ಆತ ಗೀತರಚನೆಕಾರ ಎಂಬುದು ತುಂಬಾ ಮಂದಿಗೆ ಗೊತ್ತಿಲ್ಲ. ಈಗ ಅವರೇ ರಚಿಸಿ, ಹಾಡಿರುವ 'ಥ್ರೀ' ಚಿತ್ರದ ಹಾಡು 'ಕೊಲಾವರಿ ಡಿ...' ಯಾವ ಪರಿ ಸೂಪರ್ ಹಿಟ್ ಆಗಿದೆ ಎಂದರೆ ಸ್ವತಃ ಧನುಷ್ ಕೂಡ ನಂಬುವ ಸ್ಥಿತಿಯಲ್ಲಿ ಇಲ್ಲ. ಕಾಲಿವುಡ್, ಬಾಲಿವುಡ್ ಗಲ್ಲಗಲ್ಲಿಯಲ್ಲೂ ಗುಲ್ಲೋ ಗುಲ್ಲು.

ಸುಮಾರು ಎಂಟು ದಿನಗಳ ಹಿಂದೆ ಯೂಟ್ಯೂಬ್ ಗೆ ಈ ಹಾಡನ್ನು ಅಪ್ ಲೋಡ್ ಮಾಡಲಾಗಿದೆ. ಸುಮಾರು 20 ಲಕ್ಷ ಹಿಟ್ಸ್ ಗಳು ಈಗಾಗಲೇ ಬಂದಿದ್ದು ಸೌತ್ ನಾರ್ತ್ ಬೇಧವಿಲ್ಲದೇ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ವಾಪಸ್ ತೆಗೆದುಕೊಳ್ಳಲೂ ಮರೆತಿದ್ದಾರೆ. ಬಿಗ್ ಅಮಿತಾಬ್, ಅಭಿಷೇಕ್ ಹಾಗೂ ಖುಷ್ ಬೂ ಮುಂತಾದ ಘಟಾನುಘಟಿ ತಾರೆಗಳು ಹಾಡನ್ನು ಕೇಳಿ ಸಖತ್ ಥ್ರಿಲ್ ಆಗಿದ್ದಾರೆ.

ಧನುಷ್ ಹಾಗೂ ಶೃತಿ ಹಾಸನ್ ಅಭಿನಯದ 'ಥ್ರೀ' ಚಿತ್ರದಲ್ಲಿ ಲವ್ ಫೇಲ್ಯೂರ್ ಇರುವ ಹಾಡು ಇದು. ಇಂಗ್ಲೀಷ್ ಮತ್ತು ತಮಿಳು ಪದಗಳನ್ನು ಮಿಕ್ಸ್ ಮಾಡಿ ಧನುಷ್ ಈ ಹಾಡು ಬರೆದಿದ್ದಾರೆ. ಯೂಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುವ 'ಜಸ್ಟ್ ಮೇಕಿಂಗ್' ಹಾಡೇ ಈ ಮಟ್ಟಕ್ಕೆ ಹಿಟ್ ಆಗಿದೆ. ಇನ್ನು, ಸ್ಟುಡಿಯೋದಲ್ಲಿ ಹಾಡಿದ ಒರಿಜಿನಲ್ ಹಾಡು ಇನ್ನೆಷ್ಟು ಹುಚ್ಚು ಹಿಡಿಸಬಹುದು ಎಂದು ಯೋಚಿಸಿದರೆ ನೀವೇ ಹುಚ್ಚರಾಗಬಹುದು, ಹುಶಾರ್! (ಒನ್ ಇಂಡಿಯಾ ಕನ್ನಡ)

English summary
The Song 'Kolaveri di...' bug has bitten many hearts all around the nation. Not only Dhanush Fans, it has also become a rage among some well known celebrities of the Bollywood and the Kollywood. Actor Dhanush Written and Sung this song for his movie '3'. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada