twitter
    For Quick Alerts
    ALLOW NOTIFICATIONS  
    For Daily Alerts

    ಮೈಲಾರಿ ಸಂಗೀತ ವಿಮರ್ಶೆ: ಹಾಡು ಬೊಂಬಾಟ್ ಗುರು

    By * ಬಾಲರಾಜ್ ತಂತ್ರಿ
    |

    ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 99ನೇ ಮತ್ತು ಬಹು ನಿರೀಕ್ಷಿತ ಚಿತ್ರ ಮೈಲಾರಿ. ಅಧಿಕೃತವಾಗಿ ಧ್ವನಿಸುರುಳಿ ಬಿಡುಗಡೆ ಮಾಡಿಲ್ಲವಾದರೂ ಚಿತ್ರದ ಕ್ಯಾಸೆಟ್ ಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಕೆಲವೇ ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ನಂಬರ್ 1 ಸಂಗೀತ ನಿದೇಶಕರಾಗಿದ್ದ ಗುರುಕಿರಣ್ ಆನಂತರ ಅದೇಕೋ ಸಪ್ಪೆಯಾದರು.ಹರಿಕೃಷ್ಣ ಸಂಗೀತದ ಅಬ್ಬರದ ಮುಂದೆ ಗುರು ಕೀಬೋರ್ಡ್ ನಲ್ಲಿದ್ದ ಟ್ಯೂನ್ ಸಪ್ಪೆಯಾಯಿತೋ ತಿಳಿಯದು.

    'ಮೈಲಾರಿ' ಚಿತ್ರಕ್ಕೆ ಮತ್ತೆ ಸಂಗೀತ ನೀಡುವ ಮೂಲಕ ಗುರುಕಿರಣ್ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎನ್ನುವ ಹಾಗೆ ಮೈಗೆದರಿ ಟ್ಯೂನ್ ನೀಡಿದ್ದಾರೆ. ಚಿತ್ರದ ಹಾಡು ಬೊಂಬಾಟ್, ಆಲ್ಬಂ ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ. ಗುರುಕಿರಣ್ ರಾಗ ವೈಭವ ಮತ್ತೊಮ್ಮೆ ರಿಂಗಣಿಸುತ್ತಿದೆ.

    1. ಲಂಗ ದಾವಣಿ ಬಿಟ್ಟು, ತುಂಡು ಜೀನ್ಸ್ ತೊಟ್ಟು ( ಹಾಡಿರುವವರು :ಗುರುಕಿರಣ್)
    This song is dedicated for Padde's. ಕೆಟ್ಟೋದ್ರಪ್ಪಾ ಪ್ಯಾಟೆ ಹುಡ್ಗೀರು ಅರ್ಥವಿರುವ ಸಾಹಿತ್ಯವಿರುವ ಚಿತ್ರಕ್ಕೆ ಗುರು ಫಾಸ್ಟ್ ಟ್ರ್ಯಾಕ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಇಂದಿನ ಯುವ ಪೀಳಿಗೆಯನ್ನು ಆಧರಿಸಿ ಸ್ವತಃ ಗುರುಕಿರಣ್ ಸಾಹಿತ್ಯ ಬರೆದಿದ್ದಾರೆ.

    2. ಬಿಟ್ಟುಬಿಡೆ ಬಿಟ್ಟುಬಿಡೆ ನನ್ನಷ್ಟಕ್ಕೆ ನನ್ನನ್ನು ಬಿಟ್ಬಿಡೇ ( ಹಾಡಿರುವವರು: ಕೈಲಾಶ್ ಖೇರ್)
    ಘಜಲ್ ಟೈಪ್ ನಲ್ಲಿರುವ ಈ ಹಾಡಿಗೆ ಕನ್ನಡದವರೇ ಹಾಡಿರುವ ಹಾಗೇ ಕೈಲಾಶ್ ಸ್ವಲ್ಪವೂ ಉಚ್ಚಾರ ತಪ್ಪಿಲ್ಲದೇ ಹಾಡಿದ್ದಾರೆ. ಅದಕ್ಕೆ ಅವರಿಗೆ ಶಹಭಾಷ್ ಹೇಳಲೇ ಬೇಕು. ಹಂಸಲೇಖ ಬರೆದಿರುವ ಈ ಹಾಡಿನ ಸಾಹಿತ್ಯ ಸೂಪರ್. ಹಾಡು ಮೆಲೋಡಿಯಸ್.

    3. ಘಲ್ಲು ಘಲ್ಲೆನುತಾ ( ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಚ್ ಜಿ ಚೈತ್ರಾ)
    ಇದೊಂದು ಯುಗಳ ಗೀತೆ. ಎಸ್ಪಿಬಿ ಧ್ವನಿ ಮುಂದೆ ಚೈತ್ರಾ ಸ್ವರ ಸಪ್ಪೆ ಅನಿಸುತ್ತದೆ. ಹಾಡು ಪರವಾಗಿಲ್ಲ. ಹಾಡಿನ ಸಾಹಿತ್ಯ ಸುಮಾರಾಗಿದೆ.

    4. ಜಗಿನಕ್ಕಾ, ಜಗಿನಕ್ಕಾ, ಪಕ್ಕದಲ್ಲಿ ಪಾರ್ವತಕ್ಕ ( ಹಾಡಿರುವವರು : ಶಂಕರ್ ಮಹಾದೇವನ್)
    ಇನ್ನೊಂದು ಫಾಸ್ಟ್ ಟ್ರ್ಯಾಕ್ ಸಾಂಗ್. ಮಲೈ ಮಹಾದೇಶ್ವರನ ಬಗ್ಗೆ ಸಾಹಿತ್ಯವಿರುವ ಹಾಡು. ಶಂಕರ್ ಮಹಾದೇವನ್ ಎಂದಿನ ಸ್ಟೈಲ್ ನಲ್ಲಿ ಹಾಡಿದ್ದಾರೆ. ಹಾಡು ಚೆನ್ನಾಗಿದೆ ಮೂಡಿಬಂದಿದೆ. ಕೇಳಲು ಇಂಪಾಗಿದೆ.

    5. ಮೈಲಾಪುರ ಮೈಲಾರಿ ( ಹಾಡಿರುವವರು : ಪುನೀತ್ ರಾಜಕುಮಾರ್)

    ಮೈಲಾರಿ ಬೆಂಗಳೂರಿಗೆ ಬರುವ ಸಾಹಿತ್ಯವಿರುವ ಹಾಡು. ಹಳ್ಳೀಲಿ ಪ್ರೀತಿ ಮೋಹ, ಪ್ಯಾಟೇಲಿ ನೋಟಿನ ಮೋಹ ಮುಂತಾದ ಸಾಹಿತ್ಯವಿರುವ ಹಾಡಿಗೆ ಅಬ್ಬರದ ಸಂಗೀತವಿದೆ.

    6. ಸುಕುಮಾರಿ ಹೃದಯವನ್ನು ಕದ್ದಚೋರಿ ( ಹಾಡಿರುವವರು: ಉದಿತ್ ನಾರಾಯಣ್, ಶಮಿತಾ ಮಲ್ನಾಡ್)
    ಮೆಲೋಡಿಯಸ್ ಹಾಗಿರುವ ಹಾಡು, ಹಿಂದಿಯಲ್ಲಿ ಬಂದ 'ದಿಲ್' ಚಿತ್ರದ ಹಾಡು ನೆನಪು ಬರುವ ಹಾಗೆ ಟ್ಯೂನ್ ಇದೆ. ಉದಿತ್ ನಾರಾಯಣ್ ಕನ್ನಡ ಸ್ವರ ಉಚ್ಚಾರಣೆಯ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮವರಿಗೇ ಅವಕಾಶ ನೀಡಿ ನೋಡಿ ಎನ್ನುವ ಹಾಗೆ ಶಮಿತಾ ಮಲ್ನಾಡ್ ಬಾಲಿವುಡ್ ಹಾಡುಗಾರ ಉದಿತ್ ನಾರಾಯಾಣ್ ಗೆ ಪೈಪೋಟಿಗೆ ನಿಂತತೆ ಹಾಡಿದ್ದಾರೆ.

    Overall, ಚಿತ್ರದ 1,2 , 5, 6ನೇ ಹಾಡು ಹಿಟ್ ಆಗುವುದರಲ್ಲಿ ಸಂಶಯವಿಲ್ಲ ಎನ್ನುವುದು ನಮ್ಮ ಅಭಿಪ್ರಾಯ, ಆದರೆ ಅಂತಿಮವಾಗಿ ನಿರ್ಧರಿಸ ಬೇಕಾದವರು ಅಭಿಮಾನಿ ದೇವರುಗಳು.

    Monday, October 25, 2010, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X