»   » ಈ ವರ್ಷ ಪ್ರೇಕ್ಷಕರ ಮನಗೆದ್ದ ಚಿತ್ರಗೀತೆಗಳು!

ಈ ವರ್ಷ ಪ್ರೇಕ್ಷಕರ ಮನಗೆದ್ದ ಚಿತ್ರಗೀತೆಗಳು!

Posted By:
Subscribe to Filmibeat Kannada
Raghu Dixit

ಸೈಕೊ ಚಿತ್ರದ ರಘು ದೀಕ್ಷಿತ್ ಅವರನ್ನು ಹೊರತುಪಡಿಸಿದರೆ ಕನ್ನಡೇತರರ ಗಾಯಕರೇ ಈ ವರ್ಷಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದಾರೆ. ಹೊಸ ವರ್ಷದ ಉದ್ದಕ್ಕೂ ಮೆಲುಕು ಹಾಕುವಂತ ಚಿತ್ರೆಗೀತೆಗಳು ಈ ವರ್ಷಹರಿದು ಬಂದಿವೆ. ವರ್ಷದ ಕೊನೆಗೆ ಬಿಡುಗಡೆಯಾದ ಹಾಗೆ ಸುಮ್ಮನೆ ಚಿತ್ರದ ಮಾಯವಾಗಿದೆ ಮನಸು...ಹಾಡು ಪ್ರೇಕ್ಷಕರನ್ನು ಕಾಡಲು ಶುರು ಮಾಡಿದೆ.

ಗಜ, ಗಾಳಿಪಟ, ನಂದ ನಂದಿತ, ಬುದ್ಧಿವಂತ, ಸೈಕೊ ಮತ್ತು ಮುಸ್ಸಂಜೆಯ ಮಾತು ಚಿತ್ರದಹಾಡುಗಳು ಕೇಳುಗರ ಕಿವಿಗಳನ್ನು ತಣಿಸಿವೆ. ಮುಸ್ಸಂಜೆ ಮಾತು ಚಿತ್ರದ ಎರಡು ಹಾಡುಗಳು ಪ್ರೇಕ್ಷಕರ ಬಾಯಲ್ಲಿ ನಲಿದಾಡುತ್ತಿವೆ. ಎಮಿಲ್ ಸಂಗೀತ ನಿರ್ದೇಶನದ ನಂದ ನಂದಿತಾ ಚಿತ್ರದ 'ಜಿಂಕೆ ಮರಿನಾ...'ಹಾಗೂ ರಘು ದೀಕ್ಷಿತ್ ಸಂಗೀತ ನಿರ್ದೇಶನದ ಸೈಕೊ ಚಿತ್ರದ 'ನಿನ್ನ ಪೂಜೆಗೆ ಬಂದೆ ಮಾದೇಶ್ವರ...' ಹಾಡುಗಳು ಪ್ರೇಕ್ಷಕರ ಮನ ಗೆದ್ದಿವೆ.

ಅರ್ಜುನ್ ಸಂಗೀತದ ತಾಜ್ ಮಹಲ್ ಚಿತ್ರದ ಖುಷಿಯಾಗಿದೆ...., ವಿ.ಹರಿಕೃಷ್ಣ ಸಂಗೀತದ ಗಾಳಿಪಟದ ಚಿತ್ರದ ಮಿಂಚಾಗಿ ನೀನು ಬರಲು...ಮತ್ತು ನಧೀಂ ಧೀಂ ತನ..., ವಿಜಯ್ ಆಂತೋಣಿ ಸಂಗೀತದ ಬುದ್ಧಿವಂತ ಚಿತ್ರದ ನಾಲ್ಕು ಹಾಡುಗಳಂತೂ ಚಿಂದಿ ಎಬ್ಬಿಸಿವೆ. ಚಿತ್ರಾನ್ನ ಚಿತ್ರಾನ್ನ, ರವಿ ವರ್ಮನಾ, ನೀ ನನಗಾಗಿ ಬೇಕು ಮತ್ತು ನಾ ನನ್ನವನಲ್ಲ ಹಾಡುಗಳು ಜನಪ್ರಿಯವಾಗಿವೆ. ಹಾಗೆಯೇ ಸ್ಲಂ ಬಾಲ ಚಿತ್ರದ ಅಲೆ ಅಲೆಯು ಹಾಡಿದವು...ಹಾಡು ಇಂಪಾಗಿದೆ.

ಉಳಿದಂತೆ ಗಾಯಕರಲ್ಲಿ ರಘು ದೀಕ್ಷಿತ್, ಸೋನು ನಿಗಂ, ರಾಜೇಶ್ ಕೃಷ್ಣನ್, ಪಲ್ಲವಿ, ವಾಣಿ ಅವರು ಹಾಡಿರುವ ಹಾಡುಗಳು ಜನಪ್ರಿಯವಾಗಿವೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಒಂದೊಂದೆ.. ಬಚ್ಚಿಟ್ಟ ಮಾತು...ಹಾಗೂ ಹೂ ಕನಸ ಜೋಕಾಲಿ... ಗೀತೆಗಳು ಅವ್ವ, ಪಟ್ರೆ ಲವ್ಸ್ ಪದ್ಮ , ಅಕ್ಕ ತಂಗಿ, ಸೈಕೊ ಮತ್ತು ಪಯಣ ಚಿತ್ರಗಳು ಯಶಸ್ವಿಯಾಗದಿದ್ದರೂ ಆ ಚಿತ್ರಗಳ ಕೆಲವೊಂದು ಹಾಡುಗಳು ಗೆದ್ದಿವೆ. ಸತ್ಯ ಇನ್ ಲವ್ ಚಿತ್ರದ ಶೀರ್ಷಿಕೆ ಗೀತೆ ಆಕ್ಸಿಡೆಂಟ್ ಚಿತ್ರದ ಬಾ ಮಳೆಯೆ ಬಾ...ನೀನ್ಯಾರೆ ಚಿತ್ರದ ಈ ತುಡಿತ ಈ ಮಿಡಿತ...ಹಾಡುಗಳು ಪ್ರೇಕ್ಷಕರನ್ನು ಗೆಲುವಾಗಿಸಿವೆ.

ಈ ವರ್ಷ ಹೆಚ್ಚು ಗಮನ ಸೆಳೆದ ಹತ್ತು ಹಾಡುಗಳು ಹೀಗಿವೆ:
ಸೈಕೊ:ನಿನ್ನ ಪೂಜೆಗೆ ಬಂದ ಮಾದೇಶ್ವರ
ಗಜ:ಮಿನಮಿನಮಿನ ಮೀನಾಕ್ಷಿ
ಗಾಳಿಪಟ: ಮಿಂಚಾಗಿ ನೀನು ಬರಲು
ಮುಸ್ಸಂಜೆಯ ಮಾತು:ನಿನ್ನ ನೋಡಲೆಂತೋ
ತಾಜ್ ಮಹಲ್: ಖುಷಿಯಾಗಿದೆ
ಬುದ್ಧಿವಂತ: ರವಿ ವರ್ಮನಾ
ಆಕ್ಸಿಡೆಂಟ್: ಬಾ ಮಳೆಯೆ ಬಾ
ಇಂತಿ ನಿನ್ನ ಪ್ರೀತಿಯ: ಒಂದೊಂದೆ ಬಚ್ಚಿಟ್ಟ ಮಾತು
ಹಾಗೆ ಸುಮ್ಮನೆ: ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಪಯಣ: ಮೋಡದ ಒಳಗೆ ಹನಿಗಳ ಬಳಗ

(ದಟ್ಸ್ ಕನ್ನಡ ಚಿತ್ರವಾರ್ತೆ)

2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada