For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಲೋಕ ಆಡಿಯೋ ರಿಲೀಸ್‌ಗೆ ಗಜರಾಜ ಗೆಸ್ಟ್!

  By Rajendra
  |

  ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜಿಲೋಕ' ಚಿತ್ರದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯೊಬ್ಬರು ಆಗಮಿಸುತ್ತಿದ್ದಾರೆ. ಅವರು ಬೇರಾರು ಅಲ್ಲ ಜೆಮಿನಿ ಸರ್ಕಸ್‌ನಲ್ಲಿ ಪಳಗಿದ ಗಜರಾಜ ಅರ್ಥಾತ್ ಆನೆ.

  ಹೌದು ಕ್ರೇಜಿಲೋಕ ಚಿತ್ರದ ಆಡಿಯೋವನ್ನು ಗಜರಾಜ ಬಿಡುಗಡೆ ಮಾಡಲಿದ್ದಾನೆ. ಬೆಂಗಳೂರಿನ ಅರಮನೆಯಲ್ಲಿ ಈ ವಿಶೇಷ ಆಡಿಯೋ ಬಿಡುಗಡೆ ಸಮಾರಂಭ ಶನಿವಾರ (ಜ.28) ನಡೆಯಲಿದೆ. ಕ್ರೇಜಿಲೋಕ ಚಿತ್ರತಂಡ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದೆ.

  ನಲವತ್ತರ ಹರೆಯದ ರವಿಚಂದ್ರನ್ ಕಾಲೇಜಿಗೆ ಬಂದರೆ ಏನಾಗುತ್ತದೆ? ಎಂಬ ಕುತೂಹಲಕಾರಿ ಅಂಶಗಳೊಂದಿಗೆ ಚಿತ್ರಕತೆ ಸಾಗುತ್ತದೆ. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಕವಿತಾಲಂಕೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ಅಭಿನಯಿಸುತ್ತಿದ್ದಾರೆ.

  ಭಾರತಿ ವಿಷ್ಣುವರ್ಧನ್, ಹರ್ಷಿಕಾ ಪೂಣಚ್ಚ, ಅವಿನಾಶ್, ನೀನಾಸಂ ಅಶ್ವತ್ ಮುಂತಾದವರು 'ಕ್ರೇಜಿಲೋಕ"ದ ತಾರಾಬಳಗದಲ್ಲಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ. (ಏಜೆನ್ಸೀಸ್)

  English summary
  Kavitha Lankesh directional Krazy Loka audio will release on Jan 28th in Bangalore palace. An elephant at the Gemini Circus is unveiling the audio CD of 'Krazy Loka'. V Ravichandran, Daisy Boppana, Harshika Poonachcha, Dr Bharathi Vishnuvardhana are in the cast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X