»   » ಶ್ರೇಯಾ ಘೋಷಾಲ್ ಗೆ ಶ್ರುತಿ ಹಾಸನ್ ಸಡ್ಡು

ಶ್ರೇಯಾ ಘೋಷಾಲ್ ಗೆ ಶ್ರುತಿ ಹಾಸನ್ ಸಡ್ಡು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪೃಥ್ವಿ' ಚಿತ್ರಕ್ಕೆ ಶ್ರುತಿ ಹಾಸನ್ ಹಾಡೊಂದನ್ನು ಹಾಡಿರುವುದು ಗೊತ್ತೆ ಇದೆಯಲ್ಲ. ಈ ಹಾಡಿಗೆ ಶ್ರುತಿ ಹಾಸನ್ ಪಡೆದಿರುವ ಸಂಭಾವನೆ ರು.75,000 ಎನ್ನುತ್ತವೆ ಮೂಲಗಳು. ರಾಷ್ಟ್ರ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಕನ್ನಡಹಾಡೊಂದಕ್ಕೆ ಪಡೆಯುವ ಸಂಭಾವನೆ ರು.40,000.ಈ ಮೂಲಕ ಶ್ರುತಿ ಹಾಸನ್ ಸಂಭಾವನೆ ಶ್ರೇಯಾ ಘೋಷಾಲ್ ಸಂಭಾವನೆಯನ್ನು ಮೀರಿಸಿದಂತಾಗಿದೆ.

ಪೃಥ್ವಿ ಚಿತ್ರಕ್ಕಾಗಿ ಗೀತ ಸಾಹಿತಿ ಕೆ.ಕಲ್ಯಾಣ್ ರಚಿಸಿರುವ ''ನೆನಪಿದು ನೆನಪಿದು ಕನಸಲು ಮರೆಯದ ನೆನೆಪಿದು...''ಎಂಬ ಹಾಡನ್ನು ಶ್ರುತಿ ಹಾಸನ್ ಹಾಡಿದ್ದಾರೆ. ಮಾರ್ಚ್7ರಂದು ಈ ಹಾಡಿನ ಧ್ವನಿ ಮುದ್ರಣ ಮುಂಬೈನಲ್ಲಿ ನಡೆದಿತ್ತು. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.ಜೋರ್ಡಾನ್ ನ ಸುಂದರ ತಾಣಗಳಲ್ಲಿ ಈ ಹಾಡನ್ನು ಈಗಾಗಲೆ ಚಿತ್ರೀಕರಿಸಲಾಗಿದೆ.

ಪೃಥ್ವಿ ಚಿತ್ರದ ಧ್ವನಿಸುರುಳಿ ಏಪ್ರಿಲ್ 2ರಂದು ಮಾರುಕಟ್ಟೆಗೆ ತರುವ ಸಿದ್ಧತೆ ನಡೆಯುತ್ತಿದೆ. ಚಿತ್ರವನ್ನು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬದಲಾಗಿ ಒಂದು ದಿನ ಮುನ್ನ ಅಂದರೆ ಏಪ್ರಿಲ್ 23ರಂದು ತೆರೆಗೆ ತರುವ ಸಿದ್ಧತೆಯಲ್ಲಿದ್ದಾರೆ ನಿರ್ಮಾಪಕರು. ಬೆಂಗಳೂರು, ಮೈಸೂರು, ವಿಶಾಖಪಟ್ಟಣಂ, ಸೇಲಂ ಹಾಗೂ ಜೋರ್ಡಾನ್ ನಲ್ಲಿ ಒಟ್ಟು 90 ದಿನಗಳ ಕಾಲ ಪೃಥ್ವಿ ಚಿತ್ರೀಕರಣ ನಡೆದಿದೆ.

ಪೃಥ್ವಿ ಚಿತ್ರ ದೃಶ್ಯ ವೈಭವದೊಂದಿಗೆ ನಿರೂಪಣೆಯಲ್ಲೂ ಭಿನ್ನವಾಗಿರುತ್ತದೆ. ತುಂಬ ಮುತುವರ್ಜಿ ವಹಿಸಿ ಚಿತ್ರೀಕರಣ ತಾಣಗಳನ್ನು ಆಯ್ಕೆಮಾಡಲಾಗಿತ್ತು. ಚಿತ್ರ ತಾಂತ್ರಿಕವಾಗಿಯೂ ಸೊಗಸಾಗಿ ಮೂಡಿಬಂದಿದೆ. ಪುನೀತ್ ಅಭಿಮಾನಿಗಳನ್ನು ಎಲ್ಲೂ ನಿರಾಶೆಗೊಳಿಸುವುದಿಲ್ಲ ಎನ್ನುತ್ತಾರೆ ನಿರ್ಮಾಪಕರು. ಜೇಕಬ್ ವರ್ಗೀಸ್ ರ ನಿರ್ದೇಶನ ಬಗ್ಗೆ ಕುತೂಹಲವು ನೆಲೆಗೊಂಡಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada