ಕನ್ನಡ ಸಂಗೀತ ನಿರ್ದೇಶಕ ಸೀತಾರಾಮರಾಜು ನಿಧನ

ಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರ 'ಶಂಖನಾದ' ಹಾಗೂ 'ನಮ್ಮೂರ ಬಸವಿ' ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದ ಹಲವಾರು ಸಂಗೀತ ನಿರ್ದೇಶಕರಿಗೆ ಸಹಾಯಕರಾಗಿ ಸೀತಾರಾಮರಾಜು ಕೆಲಸ ಮಾಡಿದ್ದರು.
ರಾಜ್ಯೋತ್ಸವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಸೀತಾರಾಮರಾಜು ಭಾಜನರಾಗಿದ್ದಾರೆ. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ಡು ಹಾಗೂ ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ಕಂಪನಿಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಸೀತಾರಾಮರಾಜು ಅವರ ಅಂತ್ಯಕ್ರಿಯೆ ಬೆಂಗಳೂರು ಚಾಮರಾಜಪೇಟೆ ಸಮೀಪದ ಟಿ ಆರ್ ಮಿಲ್ ರುದ್ರಭೂಮಿಯಲ್ಲಿ ನೆರವೇರಲಿದೆ.
English summary
Kannada films music director B M Seetaramaraju passes away on Monday (Dec 27) morning in Bangalore. He has 76 years old. He has composed music for award winning Kannada movie Shankhanada and Nammura Basavi.


Click it and Unblock the Notifications