»   »  ರತ್ನಜ ವಿಭಿನ್ನ ಪ್ರಯತ್ನ 'ಪ್ರೇಮಿಸಂ '

ರತ್ನಜ ವಿಭಿನ್ನ ಪ್ರಯತ್ನ 'ಪ್ರೇಮಿಸಂ '

Posted By:
Subscribe to Filmibeat Kannada

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ 'ಪ್ರೇಮಿಸಂ'. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತು ಅಜಯ್ ಗೌಡ ಅವರು ಪ್ರೇಮಿಸಂ ಎಂಬ ಹೊಸ ಅಸ್ತ್ರ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

'ಹೊಂಗನಸು' ಚಿತ್ರದಲ್ಲಿ ಅಜಯ್, ಹಂಸ್ ಮತ್ತು ರತ್ನಜ ಎಡವಿದ್ದರು. ಹಾಗಾಗಿ 'ಪ್ರೇಮಿಸಂ' ಚಿತ್ರವನ್ನು ಜಾಗುರೂಕತೆಯಿಂದ ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಸಿಡಿ ಮತ್ತು ಧ್ವನಿಸುರುಳಿಗಳನ್ನು ಬೆಂಗಳೂರಿನ 'ರಸ' ರೆಸ್ಟೋರೆಂಟ್ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಆನಂದ್ ಆಡಿಯೋ ಹೊರತಂದಿರುವ 'ಪ್ರೇಮಿಸಂ' ಆಡಿಯೋ ಸಿಡಿಯ ಬೆಲೆ ಕೇವಲ ರು.25. ಧ್ವನಿಸುರುಳಿ ಬಿಡುಗಡೆ ಬಳಿಕ ಮಾತನಾಡಿದ ಹಂಸಲೇಖ, ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆ. ಪ್ರೇಮಿಸಂ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.

ಪ್ರೇಮಿಸಂ ಚಿತ್ರದ ಡಬ್ಬಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿರಿವ ನಿರ್ದೇಶಕ ರತ್ನಜ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಕ್ಕೂ ಬಂದಿದ್ದರು. ಯಾವುದೇ ಚಿತ್ರಕ್ಕೆ ಪ್ರಚಾರ ಬಹಳ ಮುಖ್ಯ ಎಂದ ಅವರು ಈ ಚಿತ್ರಕ್ಕಾಗಿ ಸಹಾಯ ಮಾಡಿದ ನಾಲ್ಕು ಮಂದಿ ಗೆಳೆಯರನ್ನು ನೆನೆಸಿಕೊಂಡರು.

ಈ ಹಿಂದೆ ಬಂದ ತಮ್ಮ ಎರಡು ಚಿತ್ರಗಳಿಗೆ ಹೋಲಿಸಿದರೆ ಪ್ರೇಮಿಸಂ ಚಿತ್ರ ವಿಭಿನ್ನವಾಗಿದೆ. ಕ್ಲೈಮ್ಯಾಕ್ಸ್ ಹಾಡಂತೂ ಅದ್ಭುತವಾಗಿದೆ. ಗುಲಾಬಿ ಕೆನ್ನೆ...ಎಂಬ ಹಾಡನ್ನು ಚೀನಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ ಎಂದು ಚಿತ್ರದ ನಾಯಕಿ ಅಮೂಲ್ಯ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X