»   » ಕಣ್ ಕಣ್ಣ ಸಲಿಗೆ ಇದು ನವಗ್ರಹ ಗುಳಿಗೆ

ಕಣ್ ಕಣ್ಣ ಸಲಿಗೆ ಇದು ನವಗ್ರಹ ಗುಳಿಗೆ

Posted By: Staff
Subscribe to Filmibeat Kannada
Navagraha movie Song lyrics big hit
ದರ್ಶನ್, ಜಯಣ್ಣ ಮತ್ತು ಅಣಜಿ ನಾಗರಾಜ್ ಅವರ ಸ್ನೇಹದಲ್ಲಿ ಬಿರುಕು ಬಿಟ್ಟಿದೆ, "ನವಗ್ರಹ" ಚಿತ್ರದ ವಿತರಣೆ ಹಕ್ಕಲ್ಲಿ ಗೊಂದಲ ಎದ್ದಿದೆ ಎಂಬ ಗುಸುಗುಸು ಸುದ್ದಿಯ ಬೆನ್ನಲ್ಲೇ ನವಗ್ರಹ ಚಿತ್ರದ ಆಡಿಯೋ ಭರ್ಜರಿ ವ್ಯಾಪಾರ ಮಾಡುತ್ತಿರುವ ಸುದ್ದಿ ಬಂದಿದೆ. ತೂಗುದೀಪ ಸೋದರರ ಬ್ಯಾನರ್ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕ ಹರಿಕೃಷ್ಣ ಉತ್ತಮ ಟ್ಯೂನ್ ಗಳನು ಹೊಸೆದಿದ್ದಾರೆ. ಡಾ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಯುವಜನರನ್ನು ಆಕರ್ಷಿಸುತ್ತಿದೆ. ಈಚಿತ್ರ ಜನಪ್ರಿಯ ಗೀತೆಯ ಸಾಹಿತ್ಯ ನಿಮ್ಮ ಮುಂದೆ..

ಚಿತ್ರ: ನವಗ್ರಹ
ಬ್ಯಾನರ್: ತೂಗುದೀಪ ಪ್ರೊಡಕ್ಷನ್
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್
ಗಾಯಕ : ಸೋನು ನಿಗಂ

ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ
ಥರ ಥರ ಹೊಸಥರ
ಒಲವಿನ ಅವಸರ
ಹೃದಯಾನೇ ಜೋಕಾಲಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ

ಋತು ಏಳು ಭೂಮಿಯ ಮೇಲೆ
ಪ್ರಣಯಾನೇ ಎಂಟನೇ ಓಲೆ
ತಿಳಿ ತಿಳಿ ಪ್ರೇಮ
ಇರೋದಂತು ನಾಲ್ಕೇ ವೇದ
ಪ್ರೀತಿ ತಾನೆ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲೀ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೇ ಹೋದರೆ ಏನೋ ಭೀತಿ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ

ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೇ
ಒಂದೇ ಒಂದು ಮಾತು ಕೇಳು
ಎಲ್ಲ ಜನ್ಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲೀ ಇದ್ದರೂ
ನಾನು ನಿನ್ನನೇ ಕಾಯುವೆ
ಪ್ರೀತಿಸೇ ಪ್ರೀತಿ ಮಾಡೇ
ಕಣ್ ಕಣ್ಣ ಸಲಿಗೆ
ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ
ನನಗೆ ನನ್ ನನಗೆ
ಥರ ಥರ ಹೊಸಥರ
ಒಲವಿನ ಅವಸರ
ಹೃದಯಾನೇ ಜೋಕಾಲಿ

English summary
Navagraha movie Song lyrics big hit.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada