For Quick Alerts
  ALLOW NOTIFICATIONS  
  For Daily Alerts

  ಏ.2ರಂದು ಮಾರುಕಟ್ಟೆಗೆ ಅಣ್ಣಾಬಾಂಡ್ ಆಡಿಯೋ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಾಬಾಂಡ್' ಧ್ವನಿಸುರುಳಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 2ರಂದು 'ಅಣ್ಣಾಬಾಂಡ್' ಆಡಿಯೋ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. ವಿ ಹರಿಕೃಷ್ಣ ಸಂಗೀತದ ಹಾಡುಗಳನ್ನು ಕೇಳಲು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತಾಗಿದೆ.

  'ಅಣ್ಣಾಬಾಂಡ್' ಚಿತ್ರದ "ತುಂಬಾ ನೋಡ್ಬೇಡಿ..." ಎಂಬ ಹಾಡನ್ನು ಎಕ್ಸ್‌ಕ್ಲೂಸಿವ್ ಆಗಿ ಮೊದಲ ಬಾರಿಗೆ ಯೂಟ್ಯೂಬ್‌ಗೆ ಹಾಕಲಾಗಿದೆ. ಈ ಹಾಡಿನ ಸಾಹಿತ್ಯ ಯೋಗರಾಜ್ ಭಟ್ ಅವರದು. ಆನಂದ್ ಆಡಿಯೋ ಮೂಲಕ 'ಅಣ್ಣಾಬಾಂಡ್' ಆಡಿಯೋ ನಿಮ್ಮ ಕೈ ಸೇರಲಿದೆ.

  ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪುನೀತ್, ಸೂರಿ, ಹರಿಕೃಷ್ಣ ಕಾಂಬಿನೇಷನ್ನಿನ 'ಜಾಕಿ' ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ 'ಅಣ್ಣಾಬಾಂಡ್' ಬಗ್ಗೆಯೂ ಅದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. (ಒನ್‌ಇಂಡಿಯಾ ಕನ್ನಡ)

  English summary
  Much expected Kannada movie Anna Bond audio all set to release on 2nd April, 2012. Power Star Puneeth Rajkumar, Priyamani and Nidhi Subbaiah play lovers in this mass entertainer that is being directed by Duniya Soori.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X