»   »  ಕನ್ನಡ ನಿರ್ಮಾಪಕರಿಗೆ ಕಾಯ್ಕಿಣಿ ಕಿವಿಮಾತು

ಕನ್ನಡ ನಿರ್ಮಾಪಕರಿಗೆ ಕಾಯ್ಕಿಣಿ ಕಿವಿಮಾತು

Subscribe to Filmibeat Kannada
Jayanth Kaikini lashed at film makers
''ಒಂದು ಸಿನಿಮಾವನ್ನು ಹೇಗೆ ಮಾಡಿದರು ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಾನೆ ಎಂಬ ಧೋರಣೆಯನ್ನು ಬಿಡಬೇಕು'' ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. 'ಪರಿಚಯ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕಾಗಿ ಅಕ್ಷಯ ತೃತೀಯ ದಿನ ಬೆಂಗಳೂರಿನಲ್ಲಿ ನಡೆಯಿತು.

ಪ್ರೇಕ್ಷಕರಿಗೆ ಇಂದು ಆತ್ಮೀಯ ಚಿತ್ರದ ಅವಶ್ಯಕತೆ ಇದೆ. ದೇವರಿಲ್ಲದ ಮಂದಿರ ಎಷ್ಟು ಚೆನ್ನಾಗಿದ್ದರೆ ಏನು ಬಂತು ಪ್ರಯೋಜ? ಹಿಂದಿ ಚಿತ್ರರಂಗದಲ್ಲಿ ಇಂದಿಗೂ ಸಹ ಅಮೀರ್, ಮುಂಬೈ ಮೇರಿ ಜಾನ್ ನಂತಹ ಉತ್ತಮ ಚಿತ್ರಗಳು ಬರುತ್ತಿವೆ. ಆ ರೀತಿಯ ಪ್ರವೃತ್ತಿ ಕನ್ನಡ ಚಿತ್ರರಂಗದಲ್ಲೂ ಬರಬೇಕು. ಉತ್ತಮ ಕತೆ, ಕ್ರಿಯಾಶೀಲತೆ ಇದ್ದರೆ ಖಂಡಿತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದರು.

ಗೀತೆ ರಚನೆಕಾರ ಕವಿರಾಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಯಂತ ಕಾಯ್ಕಿಣಿ, ಪರಿಚಯ ಚಿತ್ರದಲ್ಲಿ ಕವಿರಾಜ್ ಉತ್ತಮ ಸಾಹಿತ್ಯ ಕೊಟ್ಟಿದ್ದಾರೆ ಎಂದರು. ಮುಂಗಾರು ಮಳೆ ಚಿತ್ರದ ನಂತರ ನಿರ್ದೇಶಕ ಸಂಜಯ್ ನನಗೆ ಕರೆದು ಕೆಲಸ ಕೊಟ್ಟಿದ್ದರು. ಆ ಕಾರಣಕ್ಕೆ ಪರಿಚಯ ಚಿತ್ರಕ್ಕೆ ಎರಡು ಹಾಡುಗಳನ್ನು ರಚಿಸಿರುವುದಾಗಿ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಾಗೆ ಸುಮ್ಮನೆ ಚಿತ್ರಕ್ಕೆ ಕಾಯ್ಕಿಣಿ ಸಾಹಿತ್ಯ ಸ್ಪರ್ಶ
ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ, ಶಿಬಿರ ಯಶಸ್ವಿ
ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?
ಕನ್ನಡ ಗಾಯಕರ ಮೇಲೆ ಹಿಂದಿ ಗಾಯಕರ 'ಸವಾರಿ'

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada