For Quick Alerts
  ALLOW NOTIFICATIONS  
  For Daily Alerts

  ಗಾನ ಕೋಗಿಲೆ ಘಜಲ್ ಗಾಯಕಿ ಜ್ಯೋತಿ ಅಸ್ತಂಗತ

  By Rajendra
  |

  ಜನಪ್ರಿಯ ಹಿನ್ನೆಲೆ ಗಾಯಕಿ ಕುಮಾರಿ ಜ್ಯೋತಿ (55) ಅವರು ಮೈಸೂರಿನಲ್ಲಿ ಶುಕ್ರವಾರ (ಮೇ.27)ನಿಧನರಾಗಿದ್ದಾರೆ. ಇವರು ಕನ್ನಡ ಚಿತ್ರರಂಗದ ಖ್ಯಾತ ಸಾಹಿತ್ಯ ಹಾಗೂ ಗೀತ ರಚನೆಕಾರ ದಿವಂಗತ ಸೋರಟ್ ಅಶ್ವತ್ಥ್ ಅವರ ಪುತ್ರಿ. ಜ್ಯೋತಿ ಅವರು ಸಹೋದರ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಸಹೋದರಿ ಗೀತಾ ಮತ್ತು ಛಾಯಾ ಅವರನ್ನು ಅಗಲಿದ್ದಾರೆ.

  ಜ್ಯೋತಿ ಅವರು ಗಾನ ಗಂಧರ್ವ ಡಾ.ರಾಜ್ ಕುಮಾರ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಪಿ ಬಿ ಶ್ರೀನಿವಾಸ್ ಸೇರಿದಂತೆ ಅನೇಕ ಗಾಯಕರೊಂದಿಗೆ ಹಾಡಿದ್ದಾರೆ. ಎಂಟು ಭಾಷೆಗಳಲ್ಲಿ ಹಾಡಿರುವ ಜ್ಯೋತಿ ಸುಮಾರು 10 ಸಾವಿರ ಗೀತೆಗಳು ಅವರ ಕಂಠಸಿರಿಯಿಂದ ಹೊರಹೊಮ್ಮಿವೆ.

  ಕಲಾ ಜ್ಯೋತಿ ಆರ್ಕೆಸ್ಟ್ರಾ ತಂಡದ ಮೂಲಕ ಮೈಸೂರು ಸೇರಿದಂತೆ ನಾಡಿನಾದ್ಯಂತ ಹಲವಾರು ರಸಸಂಜೆ ಕಾರ್ಯಕ್ರಮಗಳನ್ನು ನಿರ್ವಹಿಸಿದ ಖ್ಯಾತಿ ಜ್ಯೋತಿ ಅವರದು. 2000ನೇ ಸಾಲಿನಲ್ಲಿ ಆರ್ಯಭಟ ಪ್ರಶಸ್ತಿ ಸೇರಿದಂತೆ ಬೆಂಗಳೂರು ಗಾಯನ ಸಮಾಜದ ಗಾನ ಕೋಗಿಲೆ ಅವರಿಗೆ ಸಿಕ್ಕ ಬಿರುದುಗಳು.

  'ಶನಿ ಪ್ರಭಾವ' ಹಾಗೂ 'ಬಾಂಧವ್ಯ' ಎಂಬ ಎರಡು ಕನ್ನಡ ಚಿತ್ರಗಳನ್ನು ಅವರು ನಿರ್ಮಿಸಿದ್ದರು. ಜ್ಯೋತಿ ಅವರು ಮೈಸೂರು ಆಕಾಶವಾಣಿಯ ಗಾಯಕಿಯರು ಸೇರಿದಂತೆ ಎಷ್ಟೋ ಮಂದಿ ಉದಯೋನ್ಮುಖರಿಗೆ ತಮ್ಮ ಸೂಚನೆ ಸಲಹೆಗಳನ್ನು ನೀಡುತ್ತಿದ್ದರು. ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಅವರ ಅಂತ್ಯಕ್ರಿಯೆ ನೆರವೇರುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Renowned Kannada playback singer Jyoti (55) passed away at her residence in Mysore on 27th May. She is the daughter of Kannada movie script writer and lyricist late Sorat Ashwath. She has sung more than 10,000 songs in eight languages. Jyoti was also a ghazal singer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X