»   » 'ಮತ್ತೆ ಮುಂಗಾರಿ'ನಲ್ಲಿ ಆಶಾ ಭೋಂಸ್ಲೆ ಹಾಡು

'ಮತ್ತೆ ಮುಂಗಾರಿ'ನಲ್ಲಿ ಆಶಾ ಭೋಂಸ್ಲೆ ಹಾಡು

Posted By:
Subscribe to Filmibeat Kannada
asha bhonsle to sing in kannada
ಹಾಡು ಕೋಗಿಲೆ ಆಶಾ ಭೋಂಸ್ಲೆ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಪ್ರಗತಿಯಲ್ಲಿದೆ. ಇ ಕೃಷ್ಣಪ್ಪ ನಿರ್ಮಿಸುತ್ತಿರುವ ಮುಂದಿನ ಚಿತ್ರ 'ಮತ್ತೆ ಮುಂಗಾರು' ಚಿತ್ರಕ್ಕಾಗಿ ಆಶಾ ಅವರನ್ನು ಕರೆತರಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಾಪ್ ಗೌಡ ಎಂಬುವವರು ಈ ಹಿಂದೆ ತಮ್ಮ 'ಉದ್ಯಾನ್ ಎಕ್ಸ್ ಪ್ರೆಸ್' ಚಿತ್ರಕ್ಕೆ ಆಶಾ ಅವರನ್ನು ಕರೆತರುವ ಪ್ರಯತ್ನ ಮಾಡಿದ್ದರು. ಆದರೆ ಅದು ನೆರವೇರಲಿಲ್ಲ.

ಇದುವರೆಗೂ ಆಶಾ ಭೋಂಸ್ಲೆ ಅವರು ಅಸ್ಸಾಮಿ, ಹಿಂದಿ, ಉರ್ದು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ತಮಿಳು, ಇಂಗ್ಲಿಷ್, ರಷ್ಯಾ, ಜೆಕ್, ನೇಪಾಳಿ ಮತ್ತು ಮಲೆಯಾಳಂ ಸೇರಿದಂತೆ ಒಟ್ಟು 14 ಭಾಷೆಗಳಲ್ಲಿ ಹಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಈ ಚಿತ್ರವನ್ನು ದ್ವಾರ್ಕಿ ನಿರ್ದೇಶಿಸುತ್ತಿದ್ದು ಮುಖ್ಯಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ, ಮುಂಬೈ ಮೂಲದ ರಚನಾ ಮಲ್ಹೋತ್ರಾ ಇದ್ದಾರೆ. ಉತ್ತರ ಕನ್ನಡದ ಕರಾವಳಿ ತೀರದಲ್ಲಿ ಚಿತ್ರೀಕರಣ ಮುಂದುವರೆದಿದೆ. ಇತ್ತೀಚೆಗೆ ಶ್ರೀಲಂಕಾಗೆ ಭೇಟಿ ನೀಡಿದ್ದಾಗ ಸಿಂಹಳ ಭಾಷೆಯಲ್ಲಿ ಹಾಡಲು ಒಲವು ವ್ಯಕ್ತಪಡಿಸಿದ್ದರು.

ಉದಿತ್ ನಾರಾಯಣ್, ಸೋನು ನಿಗಂ, ಶ್ರೇಯಾ ಘೋಶಾಲ್, ಕೂನಲ್ ಗಾಂಜಾವಾಲಾ ಸೇರಿದಂತೆ ಹಲವಾರು ಬಾಲಿವುಡ್ ಗಾಯಕ/ಗಾಯಕಿಯರು ಕನ್ನಡದಲ್ಲಿ ಹಾಡುತ್ತಿದ್ದಾರೆ. ಆದರೆ ಆಶಾ ಭೋಂಸ್ಲೆ ಮಾತ್ರ ಕನ್ನಡದಲ್ಲಿ ಇದುವರೆಗೂ ಹಾಡಿಲ್ಲ. ಇ ಕೃಷ್ಣಪ್ಪ ಅವರ ಪ್ರಯತ್ನ ಫಲಿಸಿದ್ದೇ ಆದರೆ ಆಶಾ ಕನ್ನಡದಲ್ಲಿ ಹಾಡುವ ದಿನಗಳು ದೂರವಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada