For Quick Alerts
  ALLOW NOTIFICATIONS  
  For Daily Alerts

  'ಪರಮಾತ್ಮ' ದಾಖಲೆ ಮುರಿದ 'ಸಂಗೊಳ್ಳಿ ರಾಯಣ್ಣ'

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಆರಂಭದಿಂದಲೂ ಸದ್ದಿನ ಮೇಲೆ ಸದ್ದು ಮಾಡುತ್ತಲೇ ಇದೆ. ಭಾರಿ ಬಜೆಟ್‍ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ಭರವಸೆಗಳೂ ಬೆಟ್ಟದಷ್ಟಿವೆ. ಚಿತ್ರದ ಆಡಿಯೋ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿರುವುದು ಈಗ ಇನ್ನೊಂದು ವಿಶೇಷ ಸುದ್ದಿ.

  ಚಿತ್ರದ ಆಡಿಯೋ ರೈಟ್ಸ್‌ನ್ನು ಅಶ್ವಿನಿ ಆಡಿಯೋ ಸಂಸ್ಥೆ ಭರ್ಜರಿ ಬೆಲೆಗೆ ಖರೀದಿಸಿದೆ. ರು.64 ಲಕ್ಷ ದಾಖಲೆ ಬೆಲೆಗೆ ಕ್ರಾಂ.ವೀ.ಸಂ ಆಡಿಯೋ ರೈಟ್ಸ್ ಮಾರಾಟವಾಗಿವೆ ಎನ್ನುತ್ತವೆ ಮೂಲಗಳು. ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಆಡಿಯೋ ರೈಟ್ಸ್ ರು.57 ಲಕ್ಷಕ್ಕೆ ಮಾರಾಟವಾಗಿತ್ತು. ಈಗ ಆ ದಾಖಲೆಯನ್ನು 'ಕ್ರಾಂ.ವೀ.ಸಂ' ಚಿತ್ರ ಮುರಿದಿದೆ.

  ಚಿತ್ರದ ಟಿವಿ ರೈಟ್ಸ್‌ ಬಗ್ಗೆ ಮಾತುಕತೆ ನಡೆಯುತ್ತಿದೆ. ಚಿತ್ರದ ಬಜೆಟ್‌ನ ಶೇ.25ರಷ್ಟನ್ನು ಅಂದರೆ ರು.7 ಕೋಟಿ ಬೇಡಿಕೆಯನ್ನು ನಿರ್ಮಾಪಕರು ಮುಂದಿಟ್ಟಿದ್ದಾರೆ. 'ಕ್ರಾ.ವೀ.ಸಂ' ಚಿತ್ರದ ಟಿವಿ ರೈಟ್ಸ್‌ ಉದಯ ವಾಹಿನಿ ಕೈ ಸೇರುವ ಸಾಧ್ಯತೆಗಳಿವೆ. ಯಶೋವರ್ಧನ್ ಸಂಗೀತ ನೀಡಿರುವ ಚಿತ್ರದ ಆಡಿಯೋ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)

  English summary
  Challenging Star Darshan's forthcoming filmkranthiveera sangolli raayanna audio rights were sold for ahwini media networks for a highest price of 64 lakhs. This indeed is a good price for a Sandalwood film. Yashovardhan composed the tunes for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X