»   » ನಾಡ ರೈತ ಗೀತೆ ನೇಗಿಲ ಯೋಗಿ ಹಾಡು

ನಾಡ ರೈತ ಗೀತೆ ನೇಗಿಲ ಯೋಗಿ ಹಾಡು

Posted By:
Subscribe to Filmibeat Kannada
C Ashwath
'ನೇಗಿಲ ಯೋಗಿ' ಕವನವನ್ನು ರಾಷ್ಟ್ರಕವಿ ಕುವೆಂಪು ಅವರು 1930ರಲ್ಲಿ ರಚಿಸಿದ್ದರು. 'ಕೊಳಲು' ಕವನ ಸಂಕಲನದಲ್ಲಿ ಇದು ಮೊದಲು ಪ್ರಕಟಗೊಂಡಿತ್ತು. ರೈತನನ್ನು ಯೋಗಿಗೆ ಹೋಲಿಸಿರುವುದು ಕವನದ ವಿಶೇಷ. ಇದೀಗ 'ನೇಗಿಲ ಯೋಗಿ' ಗೀತೆ 'ನಾಡ ರೈತ ಗೀತೆ'ಯ ಸ್ಥಾನಮಾನ ಪಡೆದುಕೊಂಡಿದೆ.

1983ರಲ್ಲಿ ತೆರೆಕಂಡ 'ಕಾಮನಬಿಲ್ಲು' ಚಿತ್ರದಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿ 'ನೇಗಿಲ ಯೋಗಿ' ಹಾಡನ್ನು ಬಳಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ಎತ್ತರದ ಧ್ವನಿಯಲ್ಲಿ ಹಾಡಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣಗಳು ಇಲ್ಲಿದೆ.

ನೇಗಿಲ ಹಿಡಿದ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯ ಪೂಜೆಯು
ಕರ್ಮವೆ ಇಹಪರ ಸಾಧನವು

ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ
ಉಳುವಾ ಯೋಗಿಯ ನೋಡಲ್ಲಿ

ಲೋಕದೊಳೇನೇ ನಡೆಯುತಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು

ಮುತ್ತಿಗೆ ಹಾಕಲಿ ಸೈನಿಕರೆಲ್ಲ
ಬಿತ್ತುಳುವುದನವ ಬಿಡುವುದೆ ಇಲ್ಲ
ಉಳುವಾ ಯೋಗಿಯ ನೋಡಲ್ಲಿ

ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣೋಣಿ ನೇಗಿಲಿನಾಶ್ರಯದಿ
ನೇಗಿಲ ಹಿಡಿದ ಕೈಯಾದಾರದಿ
ದೊರೆಗಳು ದರ್ಪದೊಳಾಳಿದರು

ನೇಗಿಲ ಬಲದೊಳು ವೀರರು ಮೆರೆದರು
ಶಿಲ್ಪಿಗಳೆಸೆದರು, ಕವಿಗಳು ಬರೆದರು
ಉಳುವಾ ಯೋಗಿಯ ನೋಡಲ್ಲಿ

ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ
ದುಡಿದವನು ಗೌರವಕಾಶಿಸದೆ

ನೇಗಿಲ ಕುಲದೊಳಗಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ
ಉಳುವಾ ಯೋಗಿಯ ನೋಡಲ್ಲಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada