twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ : ಬೇಂದ್ರೆ ಜನ್ಮದಿನಕ್ಕೆ ಕುರುಡು ಕಾಂಚಾಣಕ್ಕೆ ಹೊಸ ರೂಪ

    |

    ''ಕುರುಡು ಕಾಂಚಾಣಾ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತೋ'' ಹಾಡು ಯಾರಿಗೆ ತಾನೇ ತಿಳಿದಿಲ್ಲ. ವರಕವಿ ದ ರಾ ಬೇಂದ್ರೆ ಅವರ ಈ ಜನಪ್ರಿಯ ಹಾಡು ಈಗ ಹೊಸ ರೂಪ ಪಡೆದುಕೊಂಡಿದೆ.

    'ಆ ಒಂದು ನೋಟು' ಎಂಬ ಕನ್ನಡ ಸಿನಿಮಾದಲ್ಲಿ 'ಕುರುಡು ಕಾಂಚಾಣಾ ಕುಣಿಯುತಲಿತ್ತು..' ಹಾಡು ಬಳಸಿಕೊಂಡಿದ್ದು, ಈ ದಿನ ಬೇಂದ್ರೆ ಅವರ ಜನ್ಮದಿನದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಹಾಡಿಗೆ ಸಿಕ್ಕಿದೆ.

    ಬೇಂದ್ರೆ ಅಂದ್ರ ಕನ್ನಡ, ಬೇಂದ್ರೆ ಅಂದ್ರ ಕನ್ನಡಿ

    ಕೌಶಿಕ್ ಹಾಡಿಗೆ ಸಂಗೀತ ನೀಡಿದ್ದಾರೆ. ಕಲಾವತಿ ಪುತ್ರನ್ ಅವರ ಧ್ವನಿ ಹಾಡಿಗೆ ಶಕ್ತಿ ತುಂಬಿದೆ. ಈ ಹಿಂದೆ ಸಿ ಅಶ್ವತ್ ಸಹ ವರಕವಿಯ ಈ ಹಾಡಿಗೆ ಜೀವ ನೀಡಿದ್ದರು. ಈಗ ಈ ಸಿನಿಮಾ ಮೂಲಕ ಸಹ ಕುರುಡು ಕಾಂಚಾಣಾ ಎಲ್ಲರನ್ನು ಕುಣಿಸುತ್ತಿದೆ.

    aa ondu notu kannada movie song released

    ರತ್ನತನಯ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಹರೀಶ್ ಕೆ ಗೌಡ ಸಹ ನಿರ್ದೇಶನ ಸಿನಿಮಾಗೆ ಇದೆ. ಎಮ್ ಕೆ ಜಗದೀಶ್ ಮತ್ತು ಪ್ರೇಮ್ ನಾಥ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

    ಎರಡು ಸಾವಿರ ರೂಪಾಯಿ ಚಿತ್ರದ ಪ್ರಮುಖ ವಿಷಯವಾಗಿದ್ದು, ಅದರ ಸುತ್ತ ಸಿನಿಮಾದ ಪಾತ್ರಗಳು ಸುತ್ತುತ್ತದೆಯಂತೆ.

    English summary
    Aa ondu notu kannada movie song released.
    Thursday, January 31, 2019, 20:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X