»   » ಪತ್ನಿ ಎದುರು ಪೇಚಿಗೆ ಸಿಲುಕಿದ ನಿರ್ದೇಶಕ ಮೋಹನ್.!

ಪತ್ನಿ ಎದುರು ಪೇಚಿಗೆ ಸಿಲುಕಿದ ನಿರ್ದೇಶಕ ಮೋಹನ್.!

Posted By:
Subscribe to Filmibeat Kannada

ಮೊದಲು ನಟನಾಗಿ ಎಲ್ಲರಿಗೂ ಕಚಗುಳಿ ಇಡುತ್ತಿದ್ದ ನಟ ಮೋಹನ್, ಇದೀಗ ನಿರ್ಮಾಪಕ ಮತ್ತು ನಿರ್ದೇಶಕ. 'ಮಳೆ ನಿಲ್ಲುವವರೆಗೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಪಕರೂ ಆಗಿರುವ ಮೋಹನ್, ಚಿತ್ರದ ಹಾಡೊಂದಕ್ಕೆ ದನಿಯಾಗಿ ಆಲ್ ರೌಂಡ್ ಪರ್ಫಾಮೆನ್ಸ್ ನೀಡಿದ್ದಾರೆ.

ಮೋಹನ್ ಮಾತ್ರ ಅಲ್ಲ, 'ಮಳೆ ನಿಲ್ಲುವವರೆಗೆ' ಚಿತ್ರದಲ್ಲಿ ಮೋಹನ್ ಪತ್ನಿ ಶ್ರೀವಿದ್ಯಾ ಕೂಡ ಹಾಡಿದ್ದಾರೆ. ''ಕಲ್ಲಿದು ಶಿಲ್ಪವ ಮಾಡೋ..ಮೋಹನ...'' ಹಾಡಲ್ಲಿ ಶ್ರೀವಿದ್ಯಾ ಗಾನಸುಧೆ ಹರಿಸಿದ್ದಾರೆ.

ಅಸಲಿಗೆ ಶ್ರೀವಿದ್ಯಾ ಮೈಕ್ ಹಿಡಿದಿರುವುದು ಇದು ಮೊದಲೇನಲ್ಲ. ಚಿಕ್ಕವಯಸ್ಸಿಂದಲೂ ಸಂಗೀತಾಭ್ಯಾಸ ಮಾಡಿರುವ ಅವರು, ಮೋಹನ್ ನಿರ್ದೇಶನದ 'ಸಚಿನ್...ತೆಂಡುಲ್ಕರ್ ಅಲ್ಲ' ಚಿತ್ರದಲ್ಲೂ ಹಾಡಿದ್ದರು.

Actor-Director Mohan's wife Sri Vidya has crooned for Male Nilluvavarege

'ಸಚಿನ್...ತೆಂಡುಲ್ಕರ್ ಅಲ್ಲ' ಚಿತ್ರದ ಹಾಡು ಕೇಳಿ, ಶ್ರೀವಿದ್ಯಾ ದನಿಯನ್ನ ಇಷ್ಟಪಟ್ಟಿದ್ದ ಸಂಗೀತ ನಿರ್ದೇಶಕ ಲಯ ಕೋಕಿಲ ಇಲ್ಲೂ ಒಂದು ಹಾಡನ್ನ ಹಾಡಿಸಬೇಕು ಅಂತ ನಿರ್ಧರಿಸಿದ ಪ್ರತಿಫಲವೇ ''ಕಲ್ಲಿದು ಶಿಲ್ಪವ ಮಾಡೋ...ಮೋಹನ..'' ಹಾಡು.

''ಸಂಗೀತ ನಿರ್ದೇಶಕ ಲಯೇಂದ್ರ, ನನ್ನ ಹೆಂಡತಿ ವಾಯ್ಸ್ ಚೆನ್ನಾಗಿದೆ ಅಂತ ಸಜೆಸ್ಟ್ ಮಾಡಿದ್ರು. ನನ್ನ ಮುಂದೆ ಈ ರೋಮ್ಯಾಂಟಿಕ್ ಸಾಂಗ್ ಹಾಡುವುದಕ್ಕೆ ನನ್ನ ಪತ್ನಿ ತುಂಬಾ ಮುಜುಗರ ಪಟ್ಟುಕೊಂಡಿದ್ದರು. ನಾನು ಕೂಡ ತುಂಬಾ ಟಾರ್ಚರ್ ಕೊಟ್ಟಿದೆ. ಸೋ, ನನ್ನ ಮುಂದೆ ಅವರು ಹಾಡ್ಲಿಲ್ಲ. ನಾನು ಹೋದ ಮೇಲೆ ಒಂದೇ ಟೇಕ್ ಗೆ ಹಾಡಿದ್ರು.'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಮೋಹನ್ ಹೇಳಿದ್ರು. [ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ']

Actor-Director Mohan's wife Sri Vidya has crooned for Male Nilluvavarege

ಹಾಗೂ ಹೀಗೂ ರೆಕಾರ್ಡಿಂಗ್ ಮುಗೀತು. ಶೂಟಿಂಗ್ ಗೆ ಬಂದಾಗ ಸಂಕಷ್ಟ ಶುರುವಾಗಿದ್ದು ನಟ ಕಮ್ ನಿರ್ದೇಶಕ ಮೋಹನ್ ಗೆ. 'ಮಳೆ ನಿಲ್ಲುವವರೆಗೆ' ಸಿನಿಮಾದಲ್ಲಿ ''ಕಲ್ಲಿದು ಶಿಲ್ಪವ ಮಾಡೋ...ಮೋಹನ...'' ತುಂಬಾ ರೋಮ್ಯಾಂಟಿಕ್ ಸಾಂಗ್.

ಶೂಟಿಂಗ್ ಸಮಯದಲ್ಲಿ ಪತ್ನಿ ಶ್ರೀವಿದ್ಯಾ ಸ್ಪಾಟ್ ನಲ್ಲಿದ್ದರು. ಪತ್ನಿ ಮುಂದೆ ಶಾಟ್ ಓಕೆ ಮಾಡೋದು ಹೇಗೆ ಅಂತ ಮೋಹನ್ ಪೇಚಿಗೆ ಸಿಲುಕಿದ್ದರಂತೆ. ಆದ್ರೆ, ಅಷ್ಟರಲ್ಲಿ ಧೈರ್ಯ ತುಂಬಿದ ಪತ್ನಿ, ''ಇದು ಆಕ್ಟಿಂಗ್. ನಿಮ್ಮ ಕೆಲಸ. ಅಚ್ಚುಕಟ್ಟಾಗಿ ಮಾಡಿ'' ಅಂತ ಹೇಳಿದ್ರಂತೆ. [ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!]

Actor-Director Mohan's wife Sri Vidya has crooned for Male Nilluvavarege

ಪತ್ನಿ ಬಲ ತುಂಬಿದ ಮೇಲೆ ಸಾಂಗ್ ರೆಡಿಯಾಯ್ತು. ಈಗಾಗಲೇ ರಿಲೀಸ್ ಆಗಿರುವ ಈ ಹಾಡನ್ನ ನೋಡಿ ಪಡ್ಡೆ ಹುಡುಗರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗಾಗಿದೆ. ಮೋಹನ್ ಮತ್ತು ಕವಿತಾ ಬೋರಾ ಕೆಮಿಸ್ಟ್ರಿ ಕೂಡ 'ಮಳೆ ನಿಲ್ಲುವವರೆಗೆ' ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. [ಮಳೆ ನಿಲ್ಲುವವರೆಗೆ ಚಿತ್ರಗಳು]

ಹಾಲಿವುಡ್ ಸಿನಿಮಾ 'ಫೇರ್ ಗೇಮ್'ನಿಂದ ಸ್ಪೂರ್ತಿ ಪಡೆದಿರುವ ಹಾರರ್ ಸಿನಿಮಾ 'ಮಳೆ ನಿಲ್ಲುವವರೆಗೆ'. ಸದ್ಯದಲ್ಲಿ ಸಿನಿಮಾ ರಿಲೀಸ್ ಆಗಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor cum Director Mohan's wife Sri Vidya has crooned a song for 'Male Nilluvavarege'. Earlier, Sri Vidya had sung for Mohan directorial 'Sachin..Tendulkar Alla'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada