ವಿಷ್ಣುವರ್ಧನ್ ಹಾಡಿಗೆ ದನಿಗೂಡಿಸಿದ ನಟ ಉಪೇಂದ್ರ-ಅನಿರುದ್ಧ್
ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಎವರ್‌ಗ್ರೀನ್ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ದನಿಗೂಡಿಸಿದ್ದಾರೆ. ವಿಷ್ಣು ನಟನೆಯಲ್ಲಿ ಮೂಡಿ ಬಂದಿದ್ದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು...' ಹಾಡನ್ನು ಉಪ್ಪಿ ಹಾಡಿದ್ದಾರೆ.
ನಟ ಉಪೇಂದ್ರ, ಅನಿರುದ್ಧ್, ವಿಜಯ್ ರಾಘವೇಂದ್ರ ಮೂವರು ಸೇರಿ ಈ ಹಾಡಿಗೆ ದನಿಗೂಡಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಅನಿರುದ್ಧ್ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದು ಯಾವ ಸಂದರ್ಭ, ಎಲ್ಲಿ ಮತ್ತು ಯಾವಾಗ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಈ ಎಲ್ಲರ ಒಟ್ಟಿಗೆ ಸೇರಿದ ಸಮಯದಲ್ಲಿ ಈ ಹಾಡನ್ನು ಅನಿರುದ್ಧ್ ಹಾಡಿದ್ದಾರೆ. ಜೊತೆಯಲ್ಲಿ ಉಪೇಂದ್ರ ಮತ್ತು ವಿಜಯ ರಾಘವೇಂದ್ರ ಅವರು ದನಿಗೂಡಿಸಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕನ್ನಡ ಚಿತ್ರರಂಗದ ಮೂವರು ಜಂಟಲ್‌ಮ್ಯಾನ್ ಒಂದೇ ಕಡೆ ಹಾಗೂ ವಿಷ್ಣು ದಾದಾ ಹಾಡನ್ನು ಹಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಅಂದ್ಹಾಗೆ, ಉಪೇಂದ್ರ-ಅನಿರುದ್ಧ್-ವಿಜಯರಾಘವೇಂದ್ರ ಅವರು ಹಾಡಿರುವ ಹಾಡು ಹೊಂಬಿಸಿಲು ಚಿತ್ರದ 'ನೀರಬಿಟ್ಟು ನೆಲದ ಮೇಲೆ ದೋಣಿ ಸಾಗದು........'.
ಗೀತಪ್ರಿಯ ಅವರು ಸಾಹಿತ್ಯ ರಚಿಸಿದ್ದ ಈ ಹಾಡಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದರು. ವಿಷ್ಣುವರ್ಧನ್ ಮತ್ತು ಆರತಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











