Don't Miss!
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಈ ಭಾರತೀಯ ತಾನು ಎದುರಿಸಿದ 'ಅತ್ಯಂತ ಅಪಾಯಕಾರಿ ಬೌಲರ್' ಎಂದ ಜೋಸ್ ಬಟ್ಲರ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ' ಚಿತ್ರದ 'ಬೊಂಬೆ ಬೊಂಬೆ' ಕ್ರೇಜ್: 'ಬೊಂಬೆ'ಯಂತೆ ಕುಣಿದ ತಮಿಳು ನಟಿ ಸ್ನೇಹಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಚಿತ್ರದ ಆಲ್ಬಮ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಚಿತ್ರದ 'ಬೊಂಬೊ ಬೊಂಬೊ' ಸಾಂಗ್‌ಗೆ ತಮಿಳು ನಟಿ ಸ್ನೇಹಾ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ವಿ. ಹರಿಕೃಷ್ಣ ಟ್ಯೂನ್ ಹಾಕಿದ್ದಾರೆ. ಮೈಸೂರು, ಹೊಸಪೇಟೆ ಹಾಗೂ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡುಗಳನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಥೀಮ್ ಸಾಂಗ್, ಮೆಲೋಡಿ ಟ್ರ್ಯಾಕ್, ಡ್ಯಾನ್ಸ್ ನಂಬರ್ ಹೀಗೆ 3 ವಿಭಿನ್ನ ಹಾಡುಗಳು ಸಿನಿರಸಿಕರ ಗಮನ ಸೆಳೆದಿದೆ. 'ಬೊಂಬೊ ಬೊಂಬೊ' ಹೊಸಪೇಟೆಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಿಲೀಸ್ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್ ಸೇರಿದಂತೆ ಚಿತ್ರತಂಡದವರು ಸಾಂಗ್ ರಿಲೀಸ್‌ಗೆ ಹೋಗಿದ್ದರು.
ದರ್ಶನ್,
ಸುದೀಪ್,
ರವಿಚಂದ್ರನ್
ಸೆಲ್ಫಿ
ನಕಲಿ;
ದರ್ಶನ್
ಜಾಗದಲ್ಲಿ
ಅಸಲಿಗೆ
ಇದ್ದದ್ದು
ಯಾರು?
ಇತ್ತೀಚೆಗೆ ಹಿಟ್ ಸಾಂಗ್‌ಗಳ ರೀಲ್ಸ್ ಮಾಡೋದು ಕಾಮನ್ ಆಗ್ಬಿಟ್ಟಿದೆ. 'ಕ್ರಾಂತಿ' ಚಿತ್ರದ 'ಪುಷ್ಪವತಿ' ಹಾಗೂ 'ಬೊಂಬೊ ಬೊಂಬೆ' ಸಾಂಗ್‌ಗಳ ಇನ್‌ಸ್ಟಾ ರೀಲ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಯೋಗರಾಜ್ ಭಟ್ ಸಾಹಿತ್ಯದ 'ಬೊಂಬೊ ಬೊಂಬೆ' ಹಾಡನ್ನು ಸೋನು ನಿಗಮ್ ಹಾಡಿದ್ದಾರೆ.
ಬೊಂಬೆಯಂತೆ ಕುಣಿದ ಸ್ನೇಹ
'ಕ್ರಾಂತಿ' ಚಿತ್ರದ 'ಬೊಂಬೊ ಬೊಂಬೆ' ರೊಮ್ಯಾಂಟಿಕ್ ಸಾಂಗ್ ಸಖತ್ ಸದ್ದು ಮಾಡಿದ್ದು ಗೊತ್ತೇಯಿದೆ. ಈ ಸಾಂಗ್‌ನ ಹುಕ್‌ಸ್ಟೆಪ್‌ಗೆ ಅಭಿಮಾನಿಗಳು ಡ್ಯಾನ್ಸ್ ಮಾಡಿ ರೀಲ್ಸ್ ಶೇರ್ ಮಾಡುತ್ತಿದ್ದಾರೆ. ಇದೀಗ ಬಹುಭಾಷಾ ನಟಿ ಸ್ನೇಹಾ ಕೂಡ ಹಾಡಿಗೆ ಬೊಂಬೆಯಾಗಿ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಸ್ಟರ್ ಸಂದೀಪ್ ಜೊತೆ ಸೇರಿ 'ಬೊಂಬೊ ಬೊಂಬೆ' ಎಂದು ಕುಣಿದಿದ್ದಾರೆ. ನಗುಮೊಗದ ಚೆಲುವೆಯ ಬಹಳ ಸೊಗಸಾಗಿ ಹಾಡನ್ನು ಎಂಜಾಯ್ ಮಾಡುತ್ತಾ ಕುಣಿದು ನಕ್ಕಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಾ ಶೇರ್ ಮಾಡಿರುವ ಡ್ಯಾನ್ಸ್ ರೀಲ್ ವಿಡಿಯೋ ಸಖತ್ ವೈರಲ್ ಆಗಿದೆ.

'ಬೊಂಬೆ ಬೊಂಬೆ'ಗೆ 1 ಕೋಟಿ ವೀವ್ಸ್
ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವ 'ಬೊಂಬೆ ಬೊಂಬೆ' ಸಾಂಗ್ ಈಗಾಗಲೇ 1 ಕೋಟಿಗೂ ಅಧಿಕ ವೀವ್ಸ್, 3 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡು ಸದ್ದು ಮಾಡ್ತಿದೆ. ಹಾಡಿನಲ್ಲಿ ದರ್ಶನ್- ರಚಿತಾ ರಾಮ್ ಕೆಮೆಸ್ಟ್ರಿ ಸಖತ್ ಮಜವಾಗಿದೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ದರ್ಶನ್- ರಚ್ಚು ಸಿಂಪಲ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಸೀರೆಯಲ್ಲಿ ರಚಿತಾ, ಸ್ಟೈಲಿಶ್ ಕಾಸ್ಟ್ಯೂಮ್‌ನಲ್ಲಿ ದರ್ಶನ್ ಹಾಡಿಗೆ ಕುಣಿದಿದ್ದಾರೆ. ಕಲರ್‌ಫುಲ್ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಕಟ್ಟಿಕೊಡಲಾಗಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ಸ್ನೇಹಾ ನಟನೆ
ತಮಿಳು
ನಟಿ
ಸ್ನೇಹಾ
ಕನ್ನಡ
ಸಿನಿರಸಿಕರಿಗೂ
ಚಿರಪರಿಚಿತ.
ಕ್ರೇಜಿಸ್ಟಾರ್
ರವಿಚಂದ್ರನ್
ನಟನೆಯ
'ರವಿಶಾಸ್ತ್ರಿ'
ಚಿತ್ರಕ್ಕೆ
ಬಣ್ಣ
ಹಚ್ಚುವ
ಮೂಲಕ
15
ವರ್ಷಗಳ
ಹಿಂದೆ
ಸ್ಯಾಂಡಲ್‌ವುಡ್
ಬಂದಿದ್ದರು.
ನಂತರ
'ಒಗ್ಗರಣೆ',
'ಕುರುಕ್ಷೇತ್ರ'
ಸಿನಿಮಾಗಳಲ್ಲೂ
ನಟಿಸಿ
ಗಮನ
ಸೆಳೆದರು.
ಬಹುತಾರಾಗಣದ
'ಕುರುಕ್ಷೇತ್ರ'
ಚಿತ್ರದಲ್ಲಿ
ದ್ರೌಪದಿ
ಪಾತ್ರದಲ್ಲಿ
ನಟಿ
ಸ್ನೇಹಾ
ಕಾಣಿಸಿಕೊಂಡಿದ್ದರು.
ದರ್ಶನ್
ದುರ್ಯೋಧನನಾಗಿ
ಅಬ್ಬರಿಸಿದ್ದರು.
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ಸಿನಿಮಾ
ಪ್ರೇಕ್ಷಕರ
ಮುಂದೆ
ಬಂದಿತ್ತು.

ಜನವರಿ 26ಕ್ಕೆ 'ಕ್ರಾಂತಿ' ರಿಲೀಸ್
ಸದ್ಯ 'ಕ್ರಾಂತಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಚಿತ್ರದಲ್ಲಿ ಕ್ರಾಂತಿ ರಾಯಣ್ಣ ಆಗಿ ದರ್ಶನ್ ಮಿಂಚಿದ್ದಾರೆ. ಶೈಲಜಾ ನಾಗ್ ಹಾಗೂ ಬಿ ಸುರೇಶ ದಂಪತಿ ನಿರ್ಮಾಣದ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಜನವರಿ 26ಕ್ಕೆ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆಯನ್ನು ಹೇಳಲಾಗಿದೆ. ಜಬರ್ದರ್ಸ್ ಆಕ್ಷನ್, ಡೈಲಾಗ್ಸ್‌ನಿಂದ ಟ್ರೈಲರ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ.