Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ : 'ಅಮರ್' ಚಿತ್ರಕ್ಕೆ ಹಾಡಿದ ವಿಜಯ ಪ್ರಕಾಶ್
ಗಾಯಕ ವಿಜಯ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾಂಬಿನೇಶನ್ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದೆ. ಈ ಜೋಡಿಯ ಮ್ಯಾಜಿಕ್ 'ಅಮರ್' ಸಿನಿಮಾದಲ್ಲಿಯೂ ಮುಂದುವರೆದಿದೆ.
ವಿಜಯ ಪ್ರಕಾಶ್ ಹಾಡಿರುವ 'ಅಮರ್' ಸಿನಿಮಾದ ಹಾಡು ನಿನ್ನೆ (ಬುದವಾರ) ಬಿಡುಗಡೆಯಾಗಿದೆ. ಆನಂದ್ ಆಡಿಯೋದಲ್ಲಿ ಹಾಡು ರಿಲೀಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
'ಅಮರ್' ಚಿತ್ರಕ್ಕೆ ಮನಸಾರೆ ಶುಭ ಹಾರೈಸಿದ ರಜನಿಕಾಂತ್
'ಅಮರ್' ಸಿನಿಮಾದ ಐದನೇ ಹಾಡು ಇದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಿಟ್ ಆಗಿದೆ. 'ಖಾಲಿ ಖಾಲಿ..' ಹಾಡು ಕೂಡ ಕೇಳುಗರ ಗಮನ ಸೆಳೆದಿದೆ.
ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಚಿತ್ರದ ಕೊಡವ ಹಾಡನ್ನು ಬಿಟ್ಟು ಎಲ್ಲ ಹಾಡಿಗೆ ಕವಿ ಸಾಹಿತ್ಯ ಇದೆ. ನಾಗಶೇಖರ್ ಮತ್ತು ಕವಿರಾಜ್ ಜೋಡಿ ಮತ್ತೆ ಹಿಟ್ ಹಾಡುಗಳನ್ನು ನೀಡಿದೆ.
ಕೊಡವರಿಗೆ ದರ್ಶನ್-ಅಭಿಷೇಕ್ ಕೊಟ್ಟ ಗಿಫ್ಟ್ ಇದು
'ಅಮರ್' ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆಯಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾಗೆ ಶುಭ ಹಾರೈಸಿದ್ದಾರೆ. ತಾನ್ಯ ಹೂಪ್ ಚಿತ್ರದ ನಾಯಕಿಯಾಗಿದ್ದಾರೆ. ನಟ ದರ್ಶನ್ ಹಾಗೂ ರಚಿತಾ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಮತ್ತೊಂದು ವಿಶೇಷ ಅಂದರೆ, ನಟ ನಿಖಿಲ್ ಕುಮಾರ್ ಸಹ ಸಿನಿಮಾ ಯಶಸ್ಸು ಕಾಣಲಿ ಎಂದು ವಿಶ್ ಮಾಡಿದ್ದಾರೆ. ಚುನಾವಣಾ ಸಮಯದ ಅಸಮಾದಾನ ಮರೆತು ಅಭಿಷೇಕ್ ಗೆ ಸಹೋದರ ಎಂದು ಕರೆದಿದ್ದಾರೆ.