ವಿಡಿಯೋ : 'ಅಮರ್' ಚಿತ್ರದ ಅರ್ಮಾನ್ - ಶ್ರೇಯಾ ಹಾಡು ರಿಲೀಸ್
'ಅಮರ್' ಸಿನಿಮಾದ ಎರಡು ಹಾಡುಗಳು ಹಿಟ್ ಆಗಿವೆ. ಇಂದು (ಮೇ 5) ಮೂರನೇ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ಅರ್ಮಾನ್ ಮಲ್ಲಿಕ್ ಹಾಗೂ ಶ್ರೇಯಾ ಘೋಷಲ್ ಹಾಡಿದ್ದಾರೆ.
ಈ ಹಾಡು ಇಷ್ಟ ಆಗಲು ಅರ್ಮಾನ್ ಮಲ್ಲಿಕ್ ಹಾಗೂ ಶ್ರೇಯಾ ಘೋಷಲ್ ಮೊದಲ ಕಾರಣವಾಗಿದೆ. ಅರ್ಜುನ್ ಜನ್ಯ ಮತ್ತೆ ಅರ್ಮಾನ್ ಮಲ್ಲಿಕ್ ರಿಂದ ಮತ್ತೊಂದು ಸುಂದರ ಹಾಡನ್ನು ಹಾಡಿಸಿದ್ದಾರೆ.
''ಒಂದೇ ಏಟಿಗೆ..ಕೊಂದೆ ಬಿಟ್ಟಳು..'' ಎಂಬ ಹಾಡು ತುಂಬ ಚೆನ್ನಾಗಿದೆ. ಹಾಡನ್ನು ಅಷ್ಟೇ ಚೆನ್ನಾಗಿ ಚಿತ್ರೀಕರಣ ಮಾಡಲಾಗಿದೆ. ಅಭಿಷೇಕ್ ಹಾಗೂ ತಾನ್ಯ ತುಂಬ ಮುದ್ದಾಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಈ ಮೂರನೇ ಹಾಡನ್ನೂ ಸಹ ಕವಿರಾಜ್ ಬರೆದಿದ್ದಾರೆ.

ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಂದಹಾಗೆ, ನಾಗಶೇಖರ್ ಈ ಸಿನಿಮಾದ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ.
ನಟ ದರ್ಶನ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಮೇ 31 ಎಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.
English summary
Actor Abhishek Ambareesh's 'Amar' kannada movie onde aetige song out. Arjun Janya composed music for 'Amar'.


Click it and Unblock the Notifications