»   » 'ಅಂಜನೀಪುತ್ರ' ಆಡಿಯೋ ಕ್ವಿಕ್ ರೌಂಡ್ ಅಪ್: ಮಂಡ್ಯ, ಹುಬ್ಬಳ್ಳಿ ಫ್ಯಾನ್ಸ್ ಗಿದೆ ಸರ್ಪೈಸ್!

'ಅಂಜನೀಪುತ್ರ' ಆಡಿಯೋ ಕ್ವಿಕ್ ರೌಂಡ್ ಅಪ್: ಮಂಡ್ಯ, ಹುಬ್ಬಳ್ಳಿ ಫ್ಯಾನ್ಸ್ ಗಿದೆ ಸರ್ಪೈಸ್!

Posted By:
Subscribe to Filmibeat Kannada

'ಅಂಜನೀಪುತ್ರ'... ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ. ಸಾಕಷ್ಟು ವಿಶೇಷಗಳಿಂದ ಕೂಡಿರುವ 'ಅಂಜನೀಪುತ್ರ' ಸಿನಿಮಾದ ಹಾಡುಗಳು ಇಂದು (ನವೆಂಬರ್ 24)ರಂದು ಬಿಡುಗಡೆ ಆಗುತ್ತಿದೆ.

ಅಪ್ಪು ಅಭಿಮಾನಿಗಳಿಗಿಂದು 'ಡಬಲ್ ಧಮಾಕ'. ಒಂದ್ ಕಡೆ ಆಡಿಯೋ ಕಂಪನಿ ಮತ್ತೊಂದು ಕಡೆ 'ಅಂಜನೀಪುತ್ರ' ಹಾಡುಗಳು ಮತ್ತು 'ಟ್ರೇಲರ್' ಕೂಡ ಲಾಂಚ್ ಆಗ್ತಿದೆ. ಸಂಜೆ ಬಿಡುಗಡೆಯಾಗುವ ಹಾಡುಗಳು ಹೇಗಿವೆ.? ಸಿನಿಮಾದಲ್ಲಿ ಯಾರೆಲ್ಲಾ ಹಾಡಿದ್ದಾರೆ.? ಎನ್ನುವುದರ ಬಗ್ಗೆ ಇಲ್ಲಿದೆ ಕ್ವಿಕ್ ರೌಂಡ್ ಅಪ್... ಮುಂದೆ ಓದಿ...

ಕನಸು ನನಸಾದ ಸಮಯ

ಪ್ರತಿಯೊಬ್ಬರಿಗೂ ಆಸೆಗಳಿರುತ್ತೆ. ಅದೇ ರೀತಿ ಸಂಗೀತ ನಿರ್ದೇಶಕ 'ರವಿ ಬಸ್ರೂರ್' ರವರಿಗೂ ಪವರ್ ಸ್ಟಾರ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಬೇಕು ಎನ್ನುವ ಆಸೆಯಿತ್ತಂತೆ. ಅದು ಈಗ 'ಅಂಜನೀಪುತ್ರ' ಸಿನಿಮಾದಿಂದ ನನಸಾಗಿದೆ. ಪುನೀತ್ ರಾಜ್ ಕುಮಾರ್ ರ ಸಿನಿಮಾಗೆ ಮೊದಲ ಬಾರಿಗೆ 'ರವಿ ಬಸ್ರೂರು' ಸಂಗೀತ ನಿರ್ದೇಶನ ಮಾಡಿದ್ದಾರೆ.

'ಪವರ್ ಫುಲ್' ಹಾಡು ಹಾಡಿದ್ದಾರೆ ಅಪ್ಪು

'ಅಂಜನೀಪುತ್ರ' ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಒಂದು ಹಾಡನ್ನ ಹಾಡಿದ್ದಾರೆ. 'ರಾಜಕುಮಾರ' ಸಿನಿಮಾದ ನಂತರ ಪವರ್ ಸ್ಟಾರ್ ಅವರ ಮತ್ತೊಂದು ಹಾಡು ಸಖತ್ ವೈರಲ್ ಆಗುವ ಸೂಚನೆ ಇದೆ. 'ಒನ್ ಟು ಥ್ರೀ ಫೋರ್' ಅಂತ ಸ್ಟಾರ್ಟ್ ಆಗುವ ಈ ಹಾಡನ್ನ 'ವಿ ನಾಗೇಂದ್ರ ಪ್ರಸಾದ್' ಬರೆದಿದ್ದಾರೆ.

ಒಂಟಿ ರೋಡ್ ನಲ್ಲಿ ಪುನೀತ್ ಡುಯೆಟ್

'ಮಗರಿಯಾ ಒಂಟಿರೋಡಲ್ಲಿ' ಅನ್ನೋ ಡ್ಯುಯೆಟ್ ಸಾಂಗ್ ಅನ್ನ ಸಿನಿಮಾಟೋಗ್ರಾಪರ್ ಸಚಿನ್ ಬಸ್ರೂರ್ ಹಾಡಿದ್ದಾರೆ. ಈ ಹಾಡನ್ನ ಭರ್ಜರಿ ಸಿನಿಮಾ ನಿರ್ದೇಶಕ 'ಚೇತನ್ ಕುಮಾರ್' ಬರೆದಿದ್ದಾರೆ. ಹೊಸ ಫೀಲ್ ಇರಲಿ ಅನ್ನೋ ಉದ್ದೇಶದಿಂದ ಸಚಿನ್ ರಿಂದ ಹಾಡನ್ನ ಹಾಡಿಸಲಾಗಿದೆ.

ನಾಯಕಿಗೂ ಇದೆ ಪ್ರತ್ಯೇಕ ಹಾಡು

ಪವರ್ ಸ್ಟಾರ್ ಪುನೀತ್ ಗೆ ನಾಯಕಿಯಾಗಿರುವ ನಟಿ ರಶ್ಮಿಕಾರಿಗೂ ಒಂದು ಹಾಡನ್ನ ಬರೆಸಲಾಗಿದೆ. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿನಲ್ಲಿ ರಶ್ಮಿಕಾ ಸಖತ್ ಕ್ಯೂಟ್ ಲುಕ್ ನಲ್ಲಿ ಕಾಣಿಸಿಕೊಳ್ತಾರಂತೆ. ಈ ಹಾಡನ್ನ ಸಂಗೀತ ನಿರ್ದೇಶಕರೇ ಬರೆದಿದ್ದಾರೆ.

'ಧಾರವಾಡ-ಹುಬ್ಬಳ್ಳಿ' ಫ್ಯಾನ್ಸ್ ಗೂ ಇದೇ ಔತಣ

'ಅಂಜನೀಪುತ್ರ' ಸಿನಿಮಾದ ಆಡಿಯೋವನ್ನ ಇಂಥದ್ದೆ ಜನರಿಗೆ ರೀಚ್ ಆಗಬೇಕು ಅನ್ನೋ ಉದ್ದೇಶ ಇಲ್ಲ. ಇಡೀ ಆಲ್ಬಂ ನ ಹಾಡುಗಳು ಎಲ್ಲಾ ಜನರನ್ನ ತಲುಪುವಂತಿದ್ಯಂತೆ. 'ಬಾರಿ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ' ಅನ್ನೋ ಹಾಡು ಸಾಮಾನ್ಯ ಜನರಿಗೂ ಮಜಾ ನೀಡುತ್ತೆ ಅನ್ನೋದು ಸಂಗೀತ ನಿರ್ದೇಶಕರ ಅಭಿಪ್ರಾಯ. ಈ ಹಾಡನ್ನ ಖುದ್ದು 'ರವಿ ಬಸ್ರೂರ್' ಅವ್ರೇ ಹಾಡಿದ್ದಾರೆ. ಪ್ರಮೋದ್ ಮರವಂತೆ' ಅನ್ನೋ ಯುವ ಸಾಹಿತಿ ಹಾಡನ್ನ ಬರೆದಿದ್ದಾರೆ.

'ಕೆ ಕಲ್ಯಾಣ್' ಸಾಹಿತ್ಯದಲ್ಲಿ ಹಾಡು

'ಅಂಜನೀಪುತ್ರ' ಕಮರ್ಶಿಯಲ್ ಸಿನಿಮಾ. ಎಲ್ಲಾ ರೀತಿಯ ಎಲಿಮೆಂಟ್ಸ್ ಇರುವ ಚಿತ್ರ. ಆದ್ದರಿಂದ ಎಲ್ಲಾ ರೀತಿಯ ಹಾಡುಗಳು ಪ್ರೇಕ್ಷಕರಿಗೆ ಕೇಳಲು ಸಿಗುತ್ತೆ. ಇಡೀ ಸಿನಿಮಾದ ಸಾರಾಂಶವನ್ನ ಸಾರುವ 'ಸಾಹುಕಾರ' ಅನ್ನೋ ಹಾಡನ್ನ ಕೆ.ಕಲ್ಯಾಣ್ ಬರೆದಿದ್ದು ಸಿನಿಮಾ ನೋಡಿದ ನಂತರವೂ ಪ್ರೇಕ್ಷಕರನ್ನ ಕಾಡುವ ಹಾಡು ಇದಾಗಲಿದೆ. ಇದಷ್ಟೇ ಅಲ್ಲದೆ ಸಿನಿಮಾದಲ್ಲಿ ಹೊಸ ಗಾಯಕರಿಗೆ ಮತ್ತು ಚಿತ್ರ ಸಾಹಿತಿಗಳಿಗೆ ಅವಕಾಶವನ್ನ ನೀಡಲಾಗಿದೆ.

English summary
Puneeth Rajkumar starrer 'Anjani Putra' Audio quick round up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada