Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಲ್ಯದ ನೆನಪುಗಳನ್ನ ಹೊತ್ತು ತರುವ 'ಟಿಂಗ ಲಿಂಗ' ಹಾಡು.!
ಹಳ್ಳಿ ಮಕ್ಕಳ ಆಟಗಳು ಸಿಕ್ಕಾಪಟ್ಟೆ ಮಜಾ ಇರುತ್ತದೆ. ಆದರೆ ಈಗ ಮಕ್ಕಳು ಅದೆಷ್ಟೋ ಹಳ್ಳಿ ಆಟಗಳನ್ನೆ ಮರೆತಿದ್ದಾರೆ. ವಿಡಿಯೋ ಗೇಮ್ ಹಿಡಿದು ಕೂರುವ ಮಕ್ಕಳ ಕಾಲದಲ್ಲಿ ಮತ್ತೆ ಹಳೆ ಆಟಗಳನ್ನು ನೆನಪು ಮಾಡಲು ಒಂದು ಹಾಡು ಬಂದಿದೆ.
'ಅಸತೋಮ ಸದ್ಗಮಯ' ಟ್ರೈಲರ್-ಸಾಂಗ್ಸ್ ಹಿಟ್ ಈಗ ಸಿನಿಮಾ ಟೈಮ್
ಕನ್ನಡದ 'ಅಸತೋಮ ಸದ್ಗಮಯ' ಸಿನಿಮಾದ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಆ ಪೈಕಿ ಚಿತ್ರದ ಮಕ್ಕಳ ಹಾಡು ಕೇಳುಗರಿಗೆ ಬಹಳ ಇಷ್ಟ ಆಗಿದೆ. 'ಟಿಂಗ ಲಿಂಗ..' ಎಂಬ ಹಾಡನ್ನು ಯೂ ಟ್ಯೂಬ್ ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ಹಾಡಿನ ಮೂಲಕ ಹಳ್ಳಿ ಮಕ್ಕಳ ತರ್ಲೆ ತಮಾಷೆ ಅವರ ಆಟದ ಸೊಗಸನ್ನು ತೋರಿದ್ದಾರೆ. ಈ ಹಾಡು ನೋಡುತ್ತಿದ್ದ ಎಲ್ಲರಿಗೂ ಅವರ ಬಾಲ್ಯ ನೆನಪಾಗುತ್ತದೆ.
ಅಂದಹಾಗೆ, ಐಕೇರ್ ಮೂವೀಸ್ ಲಾಂಛನದಡಿಯಲ್ಲಿ, ಅಶ್ವಿನ್ ಪಿರೇರಾರವರು ನಿರ್ಮಿಸಿ, ರಾಜೇಶ್ ವೇಣೂರ್ ನಿರ್ದೇಶನ ಮಾಡಿರುವ ಈ ಚಿತ್ರ ಸಸ್ಪೆನ್ಸ್, ಕಾಮಿಡಿ, ಆಕ್ಷನ್, ಮೆಸೆಜ್ ಹೀಗೆ ಎಲ್ಲಾ ಅಂಶಗಳ ಮೂಲಕ ಗಮನ ಸೆಳೆದಿದೆ. ವಹಾಬ್ ಸಲೀಂ ಸಾಹಿತ್ಯದ ಜೊತೆ ಚಿತ್ರಕ್ಕೆ ಸಂಗೀತ ನೀಡಿದ್ದು, ಒಂದಕ್ಕಿಂತ ಒಂದು ಹಾಡುಗಳು ಮೋಡಿ ಮಾಡುತ್ತಿದೆ. ವೈಷ್ಣವಿ ಮತ್ತು ಪದ್ಮಲತಾ ಹಾಡನ್ನು ಹಾಡಿದ್ದಾರೆ.
'ರಂಗಿತರಂಗ' ಖ್ಯಾತಿಯ ನಟಿ ರಾಧಿಕಾ ಚೇತನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎನ್.ಆರ್.ಐ ಪಾತ್ರವನ್ನ ನಿರ್ವಹಿಸಿದ್ದಾರೆ. 'ಮಾರ್ಚ್ 22' ಚಿತ್ರದಲ್ಲಿ ನಟಿಸಿದ್ದ ಕಿರಣ್ ರಾಜ್ ಈ ಚಿತ್ರದ ನಾಯಕನಾಗಿದ್ದು, ಇದು ಅವರಿಗೆ ಎರಡನೇ ಸಿನಿಮಾ. 'ಬಿಗ್ ಬಾಸ್' ಖ್ಯಾತಿ ಲಾಸ್ಯ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದಾರೆ. 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಚಿತ್ರಾಲಿ ಕೂಡ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದಾರೆ.
ಇನ್ನು ಚಿತ್ರದ ಕಥೆ ಬಗ್ಗೆ ಹೇಳುವುದಾರೇ, 'ಅಸತೋಮ ಸದ್ಗಮಯ' ಸಂಬಂಧಗಳ ಮೌಲ್ಯವನ್ನ ಎತ್ತು ಹಿಡಿಯುತ್ತೆ. ಶಿಕ್ಷಣ ವ್ಯವಸ್ಥೆಯ ಬಗ್ಗೆ ಸೂಕ್ಷ್ಮವಾಗಿ ಗಮನ ಹರಿಸಿರುವ ಚಿತ್ರತಂಡ ಮನರಂಜನೆಯ ಜೊತೆಗೆ ಒಂದೊಳ್ಳೆ ಸಂದೇಶ ನೀಡುವ ಪ್ರಯತ್ನ ಮಾಡಿದೆ. ಅಂದಹಾಗೆ, ಈ ಸಿನಿಮಾ ಜುಲೈ6 ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.