For Quick Alerts
  ALLOW NOTIFICATIONS  
  For Daily Alerts

  ಆಶಾ ಭಟ್ ಗಾಯನಕ್ಕೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಫಿದಾ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ರಾಬರ್ಟ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಆಶಾ ಭಟ್, ಚೊಚ್ಚಲ ಚಿತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದರು. ಸದ್ಯಕ್ಕೆ ರಾಬರ್ಟ್ ರಾಣಿಯ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಕಾಡ್ತಿದೆ.

  ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಕಬ್ಜ' ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಚರ್ಚೆಯಾದವು. ಆದರೆ ನಿರ್ದೇಶಕ ಆರ್ ಚಂದ್ರು ''ನಾವು ಇನ್ನು ನಾಯಕಿಯನ್ನು ಆಯ್ಕೆ ಮಾಡಿಲ್ಲ, ಇದು ಸುಳ್ಳು ಸುದ್ದಿ'' ಎಂದು ಸ್ಪಷ್ಟನೆ ನೀಡಿದ್ದರು.

  ಆಶಾ ಭಟ್ ಅದ್ಭುತ ಡ್ಯಾನ್ಸರ್ ಎನ್ನುವುದು ಈಗಾಗಲೇ ಗೊತ್ತಿದೆ. ಸಿನಿಮಾ, ಸ್ಟೇಜ್ ಕಾರ್ಯಕ್ರಮಗಳಲ್ಲಿ ಆಶಾ ಸಾಬೀತು ಪಡಿಸಿದ್ದಾರೆ. ಇದೀಗ, ರಾಬರ್ಟ್ ನಟಿ ಒಳ್ಳೆಯ ಗಾಯಕಿ ಎಂದು ತೋರಿಸಿದ್ದಾರೆ.

  ಹೌದು, ಆಶಾ ಭಟ್ 'ಮಿಲನ' ಸಿನಿಮಾದ 'ಮಳೆ ನಿಂತು ಹೋದ ಮೇಲೆ .....' ಹಾಡು ಹಾಡಿದ್ದು, ಆ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶೇಷವಾಗಿ ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಹಾಡು ಹಾಡಿದ್ದಕ್ಕೆ ಸಖತ್ ಖುಷಿಯಾಗಿದ್ದಾರೆ.

  ಅಂದ್ಹಾಗೆ, ಆಶಾ ಭಟ್ ನಟಿಯಾಗುವುದಕ್ಕೂ ಮುಂಚೆ ಮಾಡಲ್ ಆಗಿದ್ದರು. 2014ರ 'ಮಿಸ್ ಸುಪ್ರಾನ್ಯಾಷನಲ್' ವಿಜೇತೆಯೂ ಹೌದು. 2019ರಲ್ಲಿ ಹಿಂದಿ ಸಿನಿಮಾ ಜಂಗ್ಲಿ ಮೂಲಕ ಸಿನಿಮಾ ಜರ್ನಿ ಆರಂಭಿಸಿದರು. ದರ್ಶನ್ ಜೊತೆ ನಟಿಸಿದ 'ರಾಬರ್ಟ್' ಎರಡನೇ ಚಿತ್ರ.

  English summary
  Robert film heroine Asha bhat has sings puneeth rajkumar's movie song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X