Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿನಯ್ ರಾಜಕುಮಾರ್ ನಟನೆಯ ’ ಸಿದ್ದಾರ್ಥ’ ಆಡಿಯೋ ವಿಮರ್ಶೆ
ಈಗ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ, ಮೊಮ್ಮಗ ವಿನಯ್ ರಾಜಕುಮಾರ್ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಚೊಚ್ಚಲ ಅಭಿನಯದ 'ಸಿದ್ದಾರ್ಥ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. (ಅಜ್ಜಿಗೆ ಮೊಮ್ಮಗನ ಪ್ರೀತಿಯ ಉಡುಗೊರೆ)
ರಾಜ್ ಸ್ವಂತ ಬ್ಯಾನರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಎಲ್ಲಾ ಹಾಡಿಗೆ ಸಾಹಿತ್ಯ ನೀಡಿದವರು ಜಯಂತ್ ಕಾಯ್ಕಿಣಿ. ಸಂದರ್ಭಕ್ಕೆ ತಕ್ಕಂತೆ, ಯುವಕರು ಮತ್ತು ಪ್ರೇಮಿಗಳು ಒಪ್ಪುವಂತಹ ಸಾಹಿತ್ಯ ನೀಡುವಲ್ಲಿ ಸೈ ಎನಿಸಿಕೊಂಡಿರುವ ಕಾಯ್ಕಿಣಿ ಸಾಹೇಬ್ರು ತನ್ನ ಪೆನ್ನಿನ ಮೊನಚನ್ನು ಮತ್ತೊಮ್ಮೆ ಕೇಳುಗರ ಮುಂದಿಟ್ಟಿದ್ದಾರೆ. (ಸಿದ್ದಾರ್ಥ ಆಡಿಯೋ ಬಿಡುಗಡೆ ಸಮಾರಂಭದ ಚಿತ್ರಗಳು)
ಮಿಲನ, ವಂಶಿ ಖ್ಯಾತಿಯ ಪ್ರಕಾಶ್ ಜಯರಾಮ್ ನಿರ್ದೇಶನದ ಈ ಚಿತ್ರಕ್ಕೆ ಸಂಗೀತ ನೀಡಿದವರು ವಿ ಹರಿಕೃಷ್ಣ. ವಿನಯ್ ರಾಜಕುಮಾರ್, ಅಪೂರ್ವ ಅರೋರ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಆಲ್ಬಂನಲ್ಲಿ ಒಟ್ಟು ಆರು ಹಾಡುಗಳಿವೆ. ಚಿತ್ರದ ಹಾಡುಗಳು ಹೀಗಿವೆ, ಒಂದು ಕ್ವಿಕ್ ಝಲಕ್.. ಹೀಗಿದೆ.. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಫ್ರೀ ಇದೆ, ಮುಖದಲ್ಲಿ ಮಂದಹಾಸ
ಹಾಡಿರುವವರು : ಅರ್ಮ ಮಲ್ಲಿಕ್
ಆಕಾಶದಲ್ಲಿ ಬೇಕಿದ್ದರೆ ಚಂದ್ರ ಫ್ರೀನೇ, ನಾ ಹಾಡುವೆ ಮೂರು ಬಿಟ್ಟು ಹಾಡುವೆ ಹೀಗೆ ಸಾಗುತ್ತದೆ ಆಲ್ಬಂನ ಮೊದಲ ಹಾಡು. ಪ್ರೀತಿ, ಪ್ರೇಮದ ಬಗ್ಗೆ ಲವಲವಿಕೆಯಿಂದ ಸಾಗುವ ಹಾಡು. ಈ ಹಾಡಿನ ಸಾಹಿತ್ಯ ಯುವ ಪೀಳಿಗೆಗೆ ಇಷ್ಟವಾಗಬಹುದು.

ಜಾದೂ ಮಾಡಿದಂತೆ
ಜಾದೂ ಮಾಡಿದಂತೆ
ಹಾಡಿರುವವರು : ಅರ್ಮ ಮಲ್ಲಿಕ್
ಜಾದೂ ಮಾಡಿದಂತೆ, ಪಿಸುಮಾತು ಮಾಡಿದಂತೆ, ರೂಪಸಿಯೇ ನೀನೀಗ ರೂಪಿಸುವೇ ನನ್ನನ್ನೇ, ನಗುವೆಂದೇ ಉತ್ತರ ಎಂದು ಅಷ್ಟೇನೂ ಹಿನ್ನಲೆ ಸಂಗೀತದ ಅಬ್ಬರವಿಲ್ಲದೇ ಸಾಗುವ ಉತ್ತಮವಾಗಿ ಸಂಯೋಜಿಸಿರುವ ಹಾಡು.

ಅಚ್ಚಾಗಿದೆ, ಪೆಟ್ಟಾಗಿದೆ
ಅಚ್ಚಾಗಿದೆ, ಪೆಟ್ಟಾಗಿದೆ
ಹಾಡಿರುವವರು : ಅರ್ಮ ಮಲ್ಲಿಕ್, ಅರ್ಚನ ರವಿ
ಎದೆಯಲಿ ಹಸಿಬಿಸಿ ಸಂದೇಶ, ಮಳೆಯಲಿ ಒಬ್ಬನೇ ಅಲೆಯುವ ಹವ್ಯಾಸ ಹೀಗೆ ತನ್ನ ಪ್ರೀತಿಯನ್ನು ಇಬ್ಬರೂ ವ್ಯಕ್ತ ಪಡಿಸುವ ಡ್ಯೂಯಟ್ ಸಾಂಗ್. ಸ್ಲೋಬೀಟ್ ನಿಂದ ಆರಂಭವಾಗುವ ಸಾಗುವ ಹಾಡಿಗೆ ಹರಿಕೃಷ್ಣ ಅಬ್ಬರದ ಸಂಗೀತ ನೀಡದೇ ಮತ್ತೊಂದು ಇಂಪಾದ ಸಂಗೀತ ನೀಡಿದ್ದಾರೆ.

ನಿನ್ನಿಂದ ದೂರವಾಗಿ ಇರಲಾರೆನು
ನಿನ್ನಿಂದ ದೂರವಾಗಿ ಇರಲಾರೆನು
ಹಾಡಿರುವವರು : ರಘು ದೀಕ್ಷಿತ್
ಸೈಕೋ ಚಿತ್ರ ಖ್ಯಾತಿಯ ರಘು ದೀಕ್ಷಿತ್ ತನ್ನ ಎಂದಿನ ಶೈಲಿಯಲ್ಲಿ ಹಾಡಿರುವ ಮತ್ತು ಹಿನ್ನಲೆ ಸಂಗೀತಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿರುವ ಹಾಡು. ತನ್ನದೇ ಧಾಟಿಯಲ್ಲಿ ಹಾಡುವ ರಘು ದೀಕ್ಷಿತ್ ಕಂಠದಿಂದ ಮೂಡಿ ಬರುವ ಈ ಹಾಡು ಆಲ್ಬಂನ ಮತ್ತೊಂದು ಉತ್ತಮ ಚಾಯ್ಸ್.

ನಿನ್ನಾ ನೆನಪೇ ನನ್ನ ಚಲಿಸುವ
ನಿನ್ನಾ ನೆನಪೇ ನನ್ನ ಚಲಿಸುವ
ಹಾಡಿರುವವರು : ಸೋನು ನಿಗಂ
ನಿನ್ನ ಹೆಸರೇ, ನನ್ನ ದಿನಚರಿ ಪುಟತುಂಬ ಅದು ಮನಸಿನ ಪ್ರತಿಬಿಂಬ. ಜಯಂತ್ ಕಾಯ್ಕಿಣಿ ಸಾಹಿತ್ಯವನ್ನು ಸ್ವರದ ಮೂಲಕ ಪಸರಿಸುವ ರಾಯಭಾರಿಯಂತಿರುವ ಸೋನು ನಿಗಂ ಹಾಡಿರುವ ಶೋಕಭರಿತ ಗೀತೆ. ಕನ್ನಡದಲ್ಲಿ ಇಷ್ಟು ಹಾಡು ಹಾಡಿದ್ದರೂ, ಸೋನು ನಿಗಂ ಅದ್ಯಾವಾಗ ಕನ್ನಡ ಉಚ್ಚಾರಣೆ ಕಲಿತಾರೋ, ಆದರೂ ಇಂಪಾಗಿ ಹಾಡು ಕಂಪೋಸ್ ಮಾಡಿದ ಸಂಗೀತ ನಿರ್ದೇಶಕರಿಗೂ, ಅರ್ಥಬರಿತ ಸಾಹಿತ್ಯ ನೀಡಿದ ಕಾಯ್ಕಿಣಿಯವರಿಗೂ ಅಭಿನಂದನೆಗಳು

ಗೋವಾ ತೀರದಲ್ಲಿ
ಗೋವಾ ತೀರದಲ್ಲಿ
ಹಾಡಿರುವವರು : ಸಂತೋಷ್ ವೆಂಕಿ
ಹಿನ್ನಲೆ ಸಂಗೀತಕ್ಕೆ ಬಳಸಿಕೊಂಡ ಟ್ಯೂನ್ ಈ ಹಿಂದೆ ಎಲ್ಲೋ ಗುನುಗುವಂತಿದೆ. ಇದು ಗೋವಾ ಕಿನಾರೆಯಲ್ಲಿನ ಜಾಲಿ ಹಾಡು. ಚಿತ್ರದ ಹಾಡುಗಳನ್ನು ಸಂಯೋಜಿಸಿದ ರೀತಿ ಚೆನ್ನಾಗಿದ್ದು ಅದನ್ನು ಮೀರಿ ನಿಲ್ಲುವುದು ಸಾಹಿತ್ಯ. ಲಹರಿ ಸಂಸ್ಥೆ ಹೊರತಂದಿರುವ ಸಿದ್ದಾರ್ಥ ಚಿತ್ರದ ಆಡಿಯೋವನ್ನು ನಲವತ್ತು ರೂಪಾಯಿ ಕೊಟ್ಟು ಖರೀದಿಸುವುದಕ್ಕೆ ಏನೂ ತೊಂದರೆಯಿಲ್ಲ.