»   » ಹಾಸ್ಯ: ನಮ್ದುಕೆ ತಂಡದಿಂದ ಬ್ಯಾಚುಲರ್ಸ್ ಹಾಡು ಪಾಡು

ಹಾಸ್ಯ: ನಮ್ದುಕೆ ತಂಡದಿಂದ ಬ್ಯಾಚುಲರ್ಸ್ ಹಾಡು ಪಾಡು

Posted By:
Subscribe to Filmibeat Kannada

ನವೆಂಬರ್ ಒಂದು, ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಕನ್ನಡ ರಾಜ್ಯೋತ್ಸವ. ಹಾಗೆಯೇ ನವೆಂಬರ್ ತಿಂಗಳಿನಲ್ಲಿ ಕನ್ನಡ ಕನ್ನಡ ಎಂದು ಎಲ್ಲೆಲ್ಲೂ ಕೇಳಿ ಬರುವ ಧ್ವನಿ.

ಆದರೆ, ಇಡಿಯ ವರ್ಷವೇ ಕನ್ನಡಮಾಯವಾಗಿದ್ದರೆ ಎಂತಹ ಆನಂದ ಅಲ್ಲವೇ ಎನ್ನುತ್ತದೆ ನಮ್ದುಕೆ ತಂಡ. ಹೊಸವರ್ಷದ ಉಡುಗೊರೆಯಾಗಿ ಹಾಸ್ಯಮಯ ವಿಡಿಯೋ ತಂದಿದೆ. ಬ್ಯಾಚಲರ್ ಜೀವನದ ಕಷ್ಟಗಳನ್ನು ಹಾಸ್ಯಮಯವಾಗಿ ಚಿತ್ರಿಸಿ, ಅದಕ್ಕೆ ಸರಿ ಹೊಂದುವಂತ ಕನ್ನಡ ಚಿತ್ರಗೀತೆಗಳನ್ನು ಅಳವಡಿಸಿ ಒಂದು ಅಪರೂಪದ ವೀಡಿಯೋ ನಮ್ದುಕೆ ತಂಡದಿಂದ ಹೊರಬಂದಿದೆ.

Bachelor Bachelor Bachelor | Kannada funny vines |

ರೂಮ್ ಮೇಟ್ ಆಗಲಿ ಹೋಗುವಾಗ, ರೂಮ್ ನಲ್ಲಿ ವೈ-ಫೈ ಕೈ ಕೊಟ್ಟಾಗ, ರೂಮ್ ನಲ್ಲಿ ಒಂದೇ ಬಾತ್ ರೂಮ್ ಇದ್ದು ಪರದಾಡುವ ಸನ್ನಿವೇಶ, ಓನರ್ ರೂಮ್ ನಿಂದ ಹೊರಹಾಕುವ ಸನ್ನಿವೇಶ ಹೀಗೆ ಹಲವು ವಿಷಯಗಳನ್ನು ತಮ್ಮ ಮನೋಜ್ಞ ಹಾಸ್ಯ ಪ್ರತಿಭೆ ಇಂದ ಈ ವೀಡಿಯೋ ಚಿತ್ರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೂಪರ್ ಹಿಟ್ ಆಗಿರುವಂಥ "ಕಿರಿಕ್ ಪಾರ್ಟಿ" ಚಿತ್ರದ ಎರಡು ಗೀತೆಗಳನ್ನು ನೀವಿಲ್ಲಿ ಕೇಳಬಹುದು.

Bachelor Bachelor Bachelor | Kannada funny vines |

ಹಾಸ್ಯ, ಸಾಮಾಜಿಕ, ಮಾತೃ ಭಾಷೆಯ ಸಿರಿಮೆ, ಕನ್ನಡ ವೈನ್ಸ್, ಹೀಗೆ ನಾನಾ ಪ್ರಕಾರಗಳ ಕಲಾಸೇವೆಯನ್ನು ತಮ್ಮದೇ ವಿಭಿನ್ನ ಶೈಲಿಯಲ್ಲಿ ಮಾಡಿಕೊಂಡು ಬಂದಿರುವ ನಮ್ದುಕೆ ತಂಡ ಈ ವೀಡಿಯೋ ಮೂಲಕ ತಮ್ಮೆಲ್ಲರ ಕನ್ನಡಾಭಿಮಾನ ಸಂವತ್ಸರಾದ್ಯಂತ ಜೀವಂತವಾಗಿರಲು ನವ ಚೈತನ್ಯ ತುಂಬುತ್ತದೆ.

ಅನುಷಾ ವಿಶ್ವನಾಥ್, ಸಚಿನ್ ಕುನಬೇವ, ಹಾಲೇಶ್ ಡಿ ಪಿ, ವೀರೇಶ್ ಟಿ ಇ, ಅರ್ಜುನ್ ಎ ಆರ್, ಸಂದೀಪ್ ಟಿ ಸೀ, ಗೌತಮ್ ಅನೀಶ್, ಶ್ರವಣ್ ನಾರಾಯಣ್, ಭಾರದ್ವಾಜ್ ಡಿ ಜೆ ಪಾತ್ರವರ್ಗವನ್ನು ಒಳಗೊಂಡಿರುವ ಈ ಚಿತ್ರಕ್ಕೆ ರಾಕೇಶ್ ಮಯ್ಯ ಅವರ ಛಾಯಾಗ್ರಹಣ, ಕಾರ್ತಿಕ್ ಗಾಯಕ್ವಾಡ್ ಅವರ ವಿ ಎಫ್ ಎಕ್ಸ್, ಹಾಗೂ ಶ್ರವಣ್ ನಾರಾಯಣ್ ಅವರ ನಿರ್ದೇಶನವಿದೆ. ಎಂದಿನಂತೆ ನಮ್ದುಕೆ ತಂಡ ನಿಮ್ಮನ್ನು ನಕ್ಕು ನಗಿಸುವುದು ಖಚಿತ.

English summary
Namdu K Presents a new vine "Bachelor,bachelor,bachelor" which has used Kirik Party latest songs and variety of Kannada songs which suits the situation.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada