For Quick Alerts
  ALLOW NOTIFICATIONS  
  For Daily Alerts

  ಅಂಜನಾ ಈಗ ಇಂಡಿಯನ್ ಐಡಲ್ ಜ್ಯೂನಿಯರ್

  By Mahesh
  |

  ಹಿಂದಿ ಭಾಷೆ ಅರಿಯದಿದ್ದರೂ ದೇಶದಲ್ಲೇ ಈ ಪುಟ್ಟ ಹುಡುಗಿಯಷ್ಟು ಸ್ಪಷ್ಟವಾಗಿ ಸರಾಗವಾಗಿ, ಶೃತಿ ಬದ್ಧವಾಗಿ ಹಾಡಿದ ಮತ್ತೊಬ್ಬ ಗಾಯಕಿ ಇಲ್ಲ. ಬೆಂಗಳೂರಿನ 10 ವರ್ಷದ ಬಾಲಕಿ ಅಂಜನಾ ಪದ್ಮನಾಭನ್ ಈಗ ಇಂಡಿಯನ್ ಐಡಲ್ ಜ್ಯೂನಿಯರ್.

  ದೇಶದ ನಾಲ್ಕು ವಲಯಗಳಿಂದ ನಾಲ್ಕು ಸ್ಪರ್ಧಿಗಳು ಪ್ರಶಸ್ತಿ ಸುತ್ತಿನಲ್ಲಿದ್ದಾರೆ. ಉತ್ತರ ವಲಯದಿಂದ ಜಮ್ಮು ಮತ್ತು ಕಾಶ್ಮೀರ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನ ಅಂಜನಾ ಪದ್ಮನಾಭನ್, ಪೂರ್ವ ವಲಯದಿಂದ ಪಶ್ಚಿಮ ಬಂಗಾಳದ ದೇಬಾಂಜನಾ ಕರ್ಮಾಕರ್ ಹಾಗೂ ಪಶ್ಚಿಮ ವಲಯದಿಂದ ಅಹಮದಾಬಾದಿನ ನಿರ್ವೇಶ್ ಡೇವ್ ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಪ್ರೇಕ್ಷಕರು ಹಾಗೂ ಜಡ್ಜ್ ಗಳ ಅಭಿಮತ ಅಂಜನಾ ಪರವಾಗಿ ಬಂದು ಅಂಜನಾ ಎಲ್ಲರ ಮನಗೆದ್ದ ಗಾಯಕಿಯಾಗಿ ಹೊರಹೊಮ್ಮಿದಳು.

  'ನಾನು ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ, ಫಲಿತಾಂಶದಿಂದ ನನಗೆ ಖುಷಿಯಾಗಿದೆ' ಎಂದು ಅಂಜನಾ ಪ್ರತಿಕ್ರಿಯಿಸಿದ್ದಾರೆ. ಅಂಜನಾಳಿಗೆ ಪ್ರಶಸ್ತಿ ಟ್ರೋಫಿ ಜತೆಗೆ 25 ಲಕ್ಷ ನಗದು ಬಹುಮಾನ, ನಿಸ್ಸಾನ್ ಮೈಕ್ರಾ ಕಾರು, ಕೋಟಕ್ ಮಹೀಂದ್ರಾ ಸಂಸ್ಥೆಯಿಂದ 500,000 ರು ಹಾಗೂ ಹಾರ್ಲಿಕ್ಸ್ ನಿಂದ 200,000 ಚೆಕ್ ಲಭಿಸಿದೆ. ಬಿಗ್ ಬಿ ಅಮಿತಾಬ್ ಅವರು ಅಂಜನಾಳಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರು. ನಾಲ್ವರು ಫೈನಲಿಸ್ಟ್ ಜತೆಗೆ 'ಮೇರೆ ಸಾಥ್ ಆವೋ ಮೇರೆ ದೋಸ್ತೊ' ಗೀತೆಯನ್ನು ಬಿಗ್ ಬಿ ಹಾಡಿದ್ದು ವಿಶೇಷವಾಗಿತ್ತು. ಅಂಜನಾ ಪದ್ಮನಾಭನ್ ರಾಷ್ಟ್ರಮಟ್ಟದ ಗಾಯಕಿಯಾದ ಸುದ್ದಿಯ ಇನ್ನಷ್ಟು ವಿವರಗಳು ಮುಂದೆ ಓದಿ...

  ಜನಪ್ರಿಯ ಗಾಯಕಿ ಅಂಜನಾ

  ಜನಪ್ರಿಯ ಗಾಯಕಿ ಅಂಜನಾ

  ನಮ್ಮ ಬೆಂಗಳೂರಿನ ಸ್ಪರ್ಧಿ ಅಂಜನಾ ಜನಪ್ರಿಯತೆಯ ಅಳತೆಗೋಲಿನಲ್ಲೂ ಮುಂದಿದ್ದಳು. ಅಂಜನಾ ಸುಶ್ರಾವ್ಯವಾಗಿ ಹಾಡಿದ ಹಿಂದಿಯ 'ಕಿನಾರಾ' ಚಿತ್ರದ 'ಮೆರಿ ಆವಾಜ್ ಹಿ ಪೆಹೆಚಾನ ಹೈ' ಹಾಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು.

  ಕುತೂಹಲದ ಸಂಗತಿಯೆಂದರೆ ಅಂಜನಾಳಿಗೆ ನಿರರ್ಗಳವಾಗಿ ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ. ಹರಕು ಮುರುಕು ಭಾಷೆ ಮಾತನಾಡಬಲ್ಲಳು ಅಷ್ಟೇ. ಆದರೆ, ಭಾಷೆಯ ಎಲ್ಲೆ ಮೀರಿ ತನ್ನ ಗಾಯನದ ಮೂಲಕ ಎಲ್ಲರನ್ನು ಮೋಡಿ ಮಾಡಿದ್ದಾಳೆ.

  ಫೇಸ್ ಬುಕ್, ಯೂಟ್ಯೂಬ್ ಹಾಗೂ ಸೋನಿ ಟಿವಿಯ ಅಧಿಕೃತ ವೆಬ್ ತಾಣದ ಜನಪ್ರಿಯತೆ ಮೀಟರ್ ನಲ್ಲಿ ಅಂಜನಾ ಎಲ್ಲರ ಮನ ಗೆದ್ದಿದ್ದಳು, ಜಡ್ಜ್ ಗಳಂತೂ ಅನೇಕ ಬಾರಿ ಎದ್ದು ನಿಂತು ಪ್ರತಿಭಾವಂತ ಗಾಯಕಿಗೆ ಶುಭ ಹಾರೈಸಿದ್ದರು. ಜನರ ವೋಟಿಂಗ್ ನಲ್ಲೂ ಗೆದ್ದಿದ್ದು ಅಂಜನಾಗೆ ವರವಾಯಿತು.

  ಪ್ರತಿಭೆಗೆ ಸೂಕ್ತ ಮನ್ನಣೆ

  ಪ್ರತಿಭೆಗೆ ಸೂಕ್ತ ಮನ್ನಣೆ

  ಜೂ.1 ರಿಂದ ಸೋನಿ ಟಿವಿಯಲ್ಲಿ ಪ್ರಸಾರವಾದ ಇಂಡಿಯನ್ ಐಡಲ್ ಜ್ಯೂನಿಯರ್ ನ ಅಂತಿಮ ಸುತ್ತಿನ ಶೋನಲ್ಲಿ ಶಹೀದ್ ಕಪೂರ್, ರಾಮ್ ಚರಣ್, ಪ್ರಿಯಾಂಕಾ ಛೋಪ್ರಾ ಹಾಗೂ ಅಮಿತಾಬ್ ಬಚ್ಚನ್ ಪಾಲ್ಗೊಂಡಿದ್ದರು. ಶ್ರೇಯಾ ಘೋಷಾಲ್, ವಿಶಾಲ್ ಹಾಗೂ ಶೇಖರ್ ಜಡ್ಜ್ ಆಗಿದ್ದರೆ, ಕರಣ್ ವಾಹಿ ಹಾಗೂ ಮಂದಿರಾ ಬೇಡಿ ನಿರೂಪಕರಾಗಿದ್ದರು.

  ಈ ಸ್ಪರ್ಧೆಯಲ್ಲಿ ವಿಜೇತರಾದ ಗಾಯಕ/ಕಿಯರಿಗೆ ನಗದು ಬಹುಮಾನ, ಪ್ರಶಸ್ತಿ ಜತೆಗೆ ಖ್ಯಾತ ಸಂಗೀತಗಾರರಿಂದ ಹೆಚ್ಚಿನ ತರಬೇತಿ ಪಡೆಯುವ ಅವಕಾಶವನ್ನು ಇಂಡಿಯನ್ ಐಡಲ್ ಅಕಾಡೆಮಿ ನೀಡುತ್ತಿದೆ.

  ಅಂಜಾನಾ-ಅಂಜಾನಿ

  ಅಂಜಾನಾ-ಅಂಜಾನಿ

  ಅಂಜಾನಾ-ಅಂಜಾನಿ ಚಿತ್ರದ ಹಾಡು ಹಾಡಿ ನೃತ್ಯ ಮಾಡಿದ ಅಂಜನಾಗೆ ಜಡ್ಜ್ ಶೇಖರ್ ಶಾಕ್ ನೀಡಿದರು. ನೀನು ನಿಜವಾಗಿಯೂ ಹಾಡಿದ್ಯಾ? ಎಂದು ಪ್ರಶ್ನೆ ಎಸೆದರು. ಇದರಿಂದ ಕೆಲಕಾಲ ಅಂಜನಾ ಕಕ್ಕಾಬಿಕ್ಕಿಯಾದರು.

  ನಂತರ ಶೇಖರ್ ನಗುತ್ತಾ, ಗಾಬರಿಯಾಗಬೇಡ. ನಿನ್ನ ಹಾಡು ಕೇಳುತ್ತಿದ್ದರೆ ಒರಿಜಿನಲ್ ಹಾಡು ಕೇಳಿದಂತೆ ಇದೆ. ಈಗ ಹಾಡಿದಂತೆ ಇಲ್ಲ ಎಂದು ಪ್ರಶಂಸಿದರು. 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಚಿತ್ರ ಪ್ರಚಾರ ಮಾಡಿದ ಶಹೀದ್ ಕಪೂರ್ ಕೂಡಾ ಅಂಜನಾ ಹಾಡುಗಾರಿಕೆ ಫುಲ್ ಮಾರ್ಕ್ಸ್ ನೀಡಿದರು.

  ಜಂಜೀರ್ ತಾರೆಯರ ಮೆಚ್ಚುಗೆ

  ಜಂಜೀರ್ ತಾರೆಯರ ಮೆಚ್ಚುಗೆ

  ಜಂಜೀರ್ ಚಿತ್ರದ ಪ್ರಿಯಾಂಕಾ ಛೋಪ್ರಾ ಹಾಗೂ ರಾಮ್ ಚರಣ್ ತೇಜಾ ಅವರು ಕೂಡಾ ಅಂಜನಾ ಹಾಡಿಗೆ ತಲೆದೂಗಿದರು. ಪ್ರಿಯಾಂಕಾ ಇದಕ್ಕೂ ಮುನ್ನ ಬಿಹು ನೃತ್ಯ ಮಾಡಿ ಗಮನ ಸೆಳೆದರು.

  ಅಂಜನಾ ಪೋಷಕರು ಖುಷ್

  ಅಂಜನಾ ಪೋಷಕರು ಖುಷ್

  ಅಂಜನಾ ಅವರ ತಂದೆ ದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಚಾರ್ಟೆಡ್ ಅಕೌಂಟೆಡ್, ತಾಯಿ ಗೃಹಿಣಿಯಾಗಿದ್ದು ಮಗಳ ಪ್ರತಿಭೆ ಗುರುತಿಸಿ ಸೂಕ್ತ ತಯಾರಿ ನೀಡಿದ್ದಾರೆ.

  ಕಳೆದ ವರ್ಷದಿಂದ ಅಖಿಲಾ ಅವರಿಂದ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ಅಂಜನಾ, ಹಿಂದೂಸ್ತಾನಿ ಗಾಯನವನ್ನು ಪಂಡಿತ್ ಹೆಗ್ಡೆ ಅವರಿಂದ ಹೇಳಿಸಿಕೊಳ್ಳುತ್ತಿದ್ದಾಳೆ, ಬಾಲಿವುಡ್ ಇನ್ನಿತರ ಚಿತ್ರಗೀತೆಗಳ ಗಾಯನಕ್ಕೆ ಅಪ್ಪನೇ ಗುರು

  ಸಂತಸದ ಕ್ಷಣ

  ಸಂತಸದ ಕ್ಷಣ

  ಬಾಲಿವುಡ್ ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಂದ ಇಂಡಿಯನ್ ಐಡಲ್ ಜ್ಯೂನಿಯರ್ ಪ್ರಶಸ್ತಿ ಸ್ವೀಕರಿಸಿದ ಅಂಜನಾ ಪದ್ಮನಾಭನ್

  English summary
  Bangalore girl Anjana Padmanabhan wins first 'Indian Idol Junior'. A 10-year-old Anjana Padmanabhan win the audiences’ hearts, and thus, the first “Indian Idol Junior” title at the star-studded grand finale of the singing reality show here in Mumbai on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X