»   » 2015: ಈ ಹನ್ನೊಂದು ಸಂಗೀತ ನಿರ್ದೇಶಕರ ಪೈಕಿ ಅತ್ಯುತ್ತಮರು ಯಾರು?

2015: ಈ ಹನ್ನೊಂದು ಸಂಗೀತ ನಿರ್ದೇಶಕರ ಪೈಕಿ ಅತ್ಯುತ್ತಮರು ಯಾರು?

Posted By:
Subscribe to Filmibeat Kannada

ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಚಿತ್ರದ ಸಂಗೀತದಿಂದಲೇ ಸಿನಿಮಾ ಗೆದ್ದ ಉದಾಹರಣೆಗಳಿದ್ದವು. ರಾಜ್, ವಿಷ್ಣು, ಅನಂತನಾಗ್ ಮುಂತಾದ ಘಟಾನುಗಟಿಗಳ ಸಿನಿಮಾಗಳಲ್ಲಿ ಕಥೆಗೆ ಎಷ್ಟು ಪ್ರಾಮುಖ್ಯತೆ ಇತ್ತೋ, ಸಂಗೀತಕ್ಕೂ ಅಷ್ಟೇ ಪ್ರಾತಿನಿಧ್ಯತೆ ನೀಡಲಾಗುತ್ತಿತ್ತು.

2015 ಕಳೆದು 2016ಕ್ಕೆ ಕಾಲಿಟ್ಟಿದ್ದೇವೆ. ಕಳೆದ ವರ್ಷ 110ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಗೊಂಡಿದ್ದವು. ಅದರಲ್ಲಿ ಗೆದ್ದದ್ದು ಒಂದಷ್ಟು, ಎವರೇಜ್ ಹಿಟ್ ಆದ ಚಿತ್ರಗಳು ಮತ್ತಷ್ಟು, ತೋಪೆದ್ದು ಹೋದ ಚಿತ್ರಗಳು ಬಹಳಷ್ಟು. (2015ರ ಅತ್ತ್ಯುತ್ತಮ ಕನ್ನಡ ನಟ ಯಾರು)

ಗೆದ್ದ ಸಿನಿಮಾಗಳಲ್ಲಿ ಸಂಗೀತದಿಂದಲೇ ಗೆದ್ದ ಚಿತ್ರ ಯಾವುದು ಎನ್ನುವುದನ್ನು ಭೂತಗನ್ನಡಿ ಹಾಕಿ ಹುಡುಕಿದರೂ ಸಿಗುವುದಿಲ್ಲ, ಇತ್ತೀಚಿಗೆ ಬರುವ ಹಾಡುಗಳು ನೆನಪಿನಲ್ಲೂ ಉಳಿಯುವುದಿಲ್ಲ (ಬೆಂಕಿಪಟ್ಣ, ರಾಟೆ ಮುಂತಾದ ಕೆಲವು ಚಿತ್ರಗಳ ಹಾಡು ಹೊರತಾಗಿ)

ಚಿತ್ರ ಬಿಡುಗಡೆಯ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಕೆಲವೊಂದು ಹಾಡುಗಳು ಜನಪ್ರಿಯತೆ ಪಡೆದಿದ್ದನ್ನು ಬಿಟ್ಟರೆ, ಚಿರಸ್ಥಾಯಿಯಾಗಿ ಮನದಲ್ಲುಳಿಯುವ ಹಾಡುಗಳು ಈಗಿನ ಸಿನಿಮಾಗಳಲ್ಲಿ ಬರುವುದು ತೀರಾ ಅಪರೂಪವಾಗಿದೆ.

ಹೋದ ವರ್ಷ ಬಿಡುಗಡೆಯಾದ ಸಿನಿಮಾಗಳ ಪೈಕಿ, ನಿಮ್ಮ ಮೆಚ್ಚಿನ ಸಂಗೀತ ನಿರ್ದೇಶಕರಾರು ಎನ್ನುವುದನ್ನು ಕಾಮೆಂಟ್ ಬಾಕ್ಸಿನಲ್ಲಿ ತಿಳಿಸಿ. ಆಯ್ಕೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ವಿ ಹರಿಕೃಷ್ಣ

ವಿನಯ್ ರಾಜಕುಮಾರ್ ಅಭಿನಯದ - ಸಿದ್ದಾರ್ಥ
ಚಿರಂಜೀವಿ ಸರ್ಜಾ ಅಭಿನಯದ - ರುದ್ರತಾಂಡವ
ಧನಂಜಯ್ ಅಭಿನಯದ - ರಾಟೆ
ಜಗ್ಗೇಶ್, ರಕ್ಷಿತ್ ಶೆಟ್ಟಿ ಅಭಿನಯದ - ವಾಸ್ತುಪ್ರಕಾರ
ಪುನೀತ್ ಅಭಿನಯದ - ರಣವಿಕ್ರಮ
ಸುದೀಪ್ ಅಭಿನಯದ - ರನ್ನ
ದುನಿಯಾ ಸೂರಿ ನಿರ್ದೇಶನದ - ಕೆಂಡಸಂಪಿಗೆ
ದರ್ಶನ್ ಅಭಿನಯದ - ಐರಾವತ
ಧನಂಜಯ್ ಅಭಿನಯದ - ಬಾಕ್ಸರ್
ಯಶ್ ಅಭಿನಯದ - ಮಾಸ್ಟರ್ ಪೀಸ್

ಅರ್ಜುನ್ ಜನ್ಯ

ದುನಿಯಾ ವಿಜಯ್ ಅಭಿನಯದ - ಜ್ಯಾಕ್ಸನ್
ಶರಣ್ ಅಭಿನಯದ - ರಾಜ ರಾಜೇಂದ್ರ
ಜೋಗಿ ಪ್ರೇಮ್ ಅಭಿನಯದ - ಡಿಕೆ
ಶಿವಣ್ಣ ಅಭಿನಯದ - ವಜ್ರಕಾಯ
ಶರಣ್ ಅಭಿನಯದ - ಬುಲೆಟ್ ಬಸ್ಯಾ
ದುನಿಯಾ ವಿಜಯ್ ಅಭಿನಯದ - ಆರ್ ಎಕ್ಸ್ ಸೂರಿ

ಇಳಯರಾಜ

ಪುನೀತ್, ಮೋಹನ್ ಲಾಲ್ ಅಭಿನಯದ - ಮೈತ್ರಿ

ಸ್ಟೀವ್ ಕೌಶಿಕ್

ಪ್ರತಾಪ್ ನಾರಾಯಣ್, ಅನುಶ್ರೀ ಅಭಿನಯದ - ಬೆಂಕಿಪಟ್ಣ

ಶ್ರೀಧರ್ ಸಂಭ್ರಮ್

ಅಜೇಯ್ ರಾವ್ ಅಭಿನಯದ - ಕೃಷ್ಣಲೀಲಾ (ಎಡದಿಂದ ಮೊದಲಿನವರು)

ಅನೂಪ್ ಭಂಡಾರಿ

ನಿರೂಪ್ ಭಂಡಾರಿ ಅಭಿನಯದ - ರಂಗಿತರಂಗ

ಗುರುಕಿರಣ್

ಉಪೇಂದ್ರ ಅಭಿನಯದ - ಉಪ್ಪಿ2

ಅನೂಪ್ ಸೀಳನ್

ಚಿರಂಜೀವಿ ಸರ್ಜಾ ಅಭಿನಯದ - ಆಟಗಾರ
ಸಂಚಾರಿ ವಿಜಯ್ ಅಭಿನಯದ - ನಾನು ಅವನಲ್ಲ.. ಅವಳು

ಕಿರಣ್ ರವೀಂದ್ರನಾಥ್

ಗುರುನಂದನ್ ಅಭಿನಯದ - ಫಸ್ಟ್ ರ್ಯಾಂಕ್ ರಾಜು

ಪೂರ್ಣಚಂದ್ರ ತೇಜಸ್ವಿ

ನೀನಾಸಂ ಸತೀಶ್ ಅಭಿನಯದ - ರಾಕೆಟ್

ಧರ್ಮಾ ವಿಶ್

ಶ್ರೀಮುರುಳಿ ಅಭಿನಯದ - ರಥಾವರ

English summary
Sandalwood : Best music director for the year 2015. Eleven Music Director's name has been given in the article.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada