For Quick Alerts
ALLOW NOTIFICATIONS  
For Daily Alerts

'ವೆರೈಟಿ ಸಂಗೀತಗಾರ' ಅರ್ಜುನ್ ಜನ್ಯಾ ಬರ್ಥ್ ಡೇ ಸ್ಪೆಷಲ್

By ಜೇಮ್ಸ್ ಮಾರ್ಟಿನ್
|

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಸಂಗೀತಧಾರೆ ಹರಿಸುವ ಮೂಲಕ ಮನೆ ಮಾತಾಗಿರುವ ಅಭಿನವ ಎ.ಆರ್ ರೆಹಮಾನ್ ಎಂದೇ ಜನಪ್ರಿಯರಾಗಿರುವ ಅರ್ಜುನ್ ಜನ್ಯಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

2006ರಲ್ಲಿ ಆಟೋಗ್ರಾಫ್ ಪ್ಲೀಸ್ ಚಿತ್ರದಲ್ಲಿ ನಿನ್ನ ನೋಡಿದ್ರೆ ಭೂಕಂಪ ಕಣೆ ಎನ್ನುತ್ತಾ ಟ್ಯೂನ್ ಹೊಸೆಯಲು ಶುರು ಮಾಡಿದ ಅರ್ಜುನ್ ಜನ್ಯಾ ರಾಕ್, ಪಾಪ್, ಹಿಪ್ ಹಾಪ್, ಪೆಪ್ಪಿ ನಂಬರ್, ಕ್ಲಾಸಿಕಲ್ ಮೆಲೋಡಿ ಯಾವುದೇ ವೆರೈಟಿ ಕೇಳಿದರೂ ನೀಡಬಲ್ಲ ಅನುಭವ, ಸಾಮರ್ಥ್ಯ, ಪ್ರತಿಭೆ ಹೊಂದಿದ್ದಾರೆ.

ಸೈಮಾ, ಫಿಲಂಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಜುನ್ ಹುಡುಕಿಕೊಂಡು ಬಂದಿವೆ. ಶಿವಣ್ಣ, ಕಿಚ್ಚ ಸುದೀಪ್ ಸೇರಿದಂತೆ ಅನೇಕ ತಾರೆಗಳ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.

ಅರ್ಜುನ್ ಆಗಿ ಹುಟ್ಟಿನಿಂದ ಬಂದ ಹೆಸರನ್ನು ಜ್ಯೋತಿಷಿಯೊಬ್ಬರು ಹಾಗೂ ಸುದೀಪ್ ಸಲಹೆಯಂತೆ ಅರ್ಜುನ್ ಜನ್ಯ ಎಂದು ಬದಲಿಸಿಕೊಂಡ ಮೇಲೆ ಅರ್ಜುನ್ ಲಕ್ ತಿರುಗಿದೆಯಂತೆ. ಅರ್ಜುನ್ ಇನ್ನಷ್ಟು ಹೊಸ ಸ್ವರ ಸಂಯೋಜನೆ ಮೂಲಕ ಸಿನಿ ರಸಿಕರನ್ನು ಹೀಗೆ ರಂಜಿಸುತ್ತಿರಲಿ. ಫಿಲ್ಮಿಬೀಟ್ ತಂಡದಿಂದ ಹುಟ್ಟುಹಬ್ಬದ ಶುಭಹಾರೈಕೆಗಳು.

2006ರಲ್ಲಿ ತೆರೆ ಕಂಡ ಆಟೋಗ್ರಾಫ್ ಪ್ಲೀಸ್

2006ರಲ್ಲಿ ತೆರೆ ಕಂಡ ಆಟೋಗ್ರಾಫ್ ಪ್ಲೀಸ್

2006ರಲ್ಲಿ ತೆರೆ ಕಂಡ ಆಟೋಗ್ರಾಫ್ ಪ್ಲೀಸ್ ಚಿತ್ರದ ಸಂಗೀತ ಅರ್ಜುನ್ ಅವರತ್ತ ತಿರುಗಿ ನೋಡುವಂತೆ ಮಾಡಿತು. ಹಂತ ಹಂತವಾಗಿ ಮೇಲಕ್ಕೆ ಬಂದ ಅರ್ಜುನ್ ಇಂಡಸ್ಟ್ರಿಯಲ್ಲಿ ಉಳಿಯಲು ಬೆಳೆಯಲು ಅವರ ವೈವಿಧ್ಯಮಯ ಸಂಗೀತವೇ ಕಾರಣ.

ಬಿರುಗಾಳಿಯಲ್ಲಿ ಮಿಂಚಿದ ಸಂಗೀತ

ಬಿರುಗಾಳಿಯಲ್ಲಿ ಮಿಂಚಿದ ಸಂಗೀತ

2006 ರಿಂದ 2009 ತನಕ ಬಾಬಾ, ಯುಗ (ಟೈಟಲ್ ಟ್ರ್ಯಾಕ್ ಸೂಪರ್), ಪಟ್ರೇ ಲವ್ಸ್ ಪದ್ಮಾ (ಪ್ಯಾಥೋ ಸಾಂಗ್ಸ್ ಗುಡ್), ಧಿಮಾಕು, ಧೀನ, ಮಚ್ಚ ಚಿತ್ರಗಳಿಗೆ ವರ್ಕ್ ಮಾಡಿದ್ದರು. ಸ್ಲಂ ಬಾಲ ಹಾಡುಗಳು ನೆನಪಾಗುವುದು ಬಿಟ್ಟರೆ ಮಿಕ್ಕ ಆಲ್ಬಂಗಳು ಹೆಸರು ತಂದುಕೊಂಡಲಿಲ್ಲ. ಬಿರುಗಾಳಿ ಚಿತ್ರದ ಮೂಲಕ ಮತ್ತೊಮ್ಮೆ ಗಮನ ಸೆಳೆದರು.

ಕೆಂಪೇಗೌಡ ಅದೃಷ್ಟ ಬದಲಾಯಿಸಿತು

ಕೆಂಪೇಗೌಡ ಅದೃಷ್ಟ ಬದಲಾಯಿಸಿತು

ನಂತರ ಜುಗಾರಿಯಲ್ಲಿ ಹಾಡೊಂದು (ನಿನ್ನ ನಾನು ನೋಡೊವರೆಗೂ) ಹಿಟ್ ಆಯಿತು. ಸಂಚಾರಿ, ನಮ್ ಏರಿಯಾಲ್ಲೊಂದಿನ, ಗುಬ್ಬಿ ನೆನಪಲ್ಲಿ ಉಳಿಯಲಿಲ್ಲ.

ಮತ್ತೆ ಮಿಂಚಿದ್ದು ಕೆಂಪೇಗೌಡ ಚಿತ್ರದ ಮೂಲಕ ಚಿತ್ರದ ಸಂಗೀತಕ್ಕಾಗಿ ಒಂದೆರಡು ಪ್ರಶಸ್ತಿ ಬಾಚಿದರಲ್ಲದೆ, ಅನೇಕ ಆಫರ್ ಗಳು ಬರತೊಡಗಿತು.

ಅಲೆಮಾರಿ ಚಿತ್ರದ ಗಾಯಕ

ಅಲೆಮಾರಿ ಚಿತ್ರದ ಗಾಯಕ

ಅಲೆಮಾರಿ ಚಿತ್ರಕ್ಕೆ ಸಂಗೀತ ನೀಡಿದ ಅರ್ಜುನ್ ಜನ್ಯಾ ಪ್ರಶಸ್ತಿ ಬಾಚಿಕೊಂಡರು. ಈ ನಡುವೆ ಯಶ್ ಅವರ ರಾಜಧಾನಿ ಹಾಗೂ ದುನಿಯಾ ವಿಜಯ್ ಜರಾಸಂಧದ ಒಂದೆರಡು ಹಾಡುಗಳು ಗುನುಗುವಂತೆ ಮಾಡಿದವು.

ವರದ ನಾಯಕನ ಜೊತೆ ಜನ್ಯಾ

ವರದ ನಾಯಕನ ಜೊತೆ ಜನ್ಯಾ

ಸುದೀಪ್ ಹಾಗೂ ಚಿರಂಜೀವಿ ಸರ್ಜಾ ಅಭಿನಯದ ವರದನಾಯಕ ಮೂಲಕ ಮತ್ತೊಮ್ಮೆ ತಮ್ಮ ವೈವಿಧ್ಯತೆ ಮೆರೆದ ಜನ್ಯಾ ಫಾರ್ಮ್ ಗೆ ಬಂದರು. ಇದಕ್ಕೂ ಮುನ್ನ ಶರಣ್ ಚಿತ್ರ Ramboಗೂ ಉತ್ತಮ ಸ್ವರ ಸಂಯೋಜನೆ ಮಾಡಿದ್ದರು.

ಶರಣ್ ವಿಕ್ಟರಿ ಜನ್ಯಾಗೆ ತಂದ ಜಯ

ಶರಣ್ ವಿಕ್ಟರಿ ಜನ್ಯಾಗೆ ತಂದ ಜಯ

'ಖಾಲಿ ಕ್ವಾರ್ಟರ್' ಹಾಡಿನ ಮೂಲಕ ಜನ್ಯಾ ಮನೆ ಮಾತಾದರು. ವಿಕ್ಟರಿ ಜನ್ಯಾಗೆ ಹೊಸ ಜಯ ತಂದು ಕೊಟ್ಟಿತು. ವಿಕ್ಟರಿ ಚಿತ್ರದ ಎಲ್ಲಾ ಹಾಡುಗಳು ಜನರ ಬಾಯಲ್ಲಿ ನಲಿದಾಡಿದವು.

ಮಾಣಿಕ್ಯನ ಜೊತೆ ಜನ್ಯಾ

ಮಾಣಿಕ್ಯನ ಜೊತೆ ಜನ್ಯಾ

ಸುದೀಪ್ ಜೊತೆ ಮತ್ತೊಮ್ಮೆ ಕಾರ್ಯ ನಿರ್ವಹಿಸಿದ ಜನ್ಯಾ, ಕಲ್ಯಾಣ್ ಸಾಹಿತ್ಯ ನೀಡಿರುವ ಜೀವ ಜೀವ ನಮ್ಮ ಜೀವ ಹಾಡಿಗೆ ಉತ್ತಮ ಟ್ಯೂನ್ ಹಾಕಿ ಸೈ ಎನಿಸಿಕೊಂಡರು.

ಕೈ ಹಿಡಿದ ಅಧ್ಯಕ್ಷ ಶರಣ್

ಕೈ ಹಿಡಿದ ಅಧ್ಯಕ್ಷ ಶರಣ್

ವಿಕ್ಟರಿ ಮೂಲಕ ಶರಣ್ ಜೊತೆಗಿನ ಗೆಳೆತನ ಅಧ್ಯಕ್ಷದಲ್ಲೂ ಮುಂದುವರೆಯಿತು. ಪುನೀತ್ ಹಾಡಿದ ಟೈಟಲ್ ಟ್ರ್ಯಾಕ್ ಪಡ್ಡೆಗಳನ್ನು ಕುಣಿಯುವಂತೆ ಮಾಡಿತು.

ಭಜರಂಗಿ ಹರ್ಷ- ಶಿವಣ್ಣ ಜೋಡಿ

ಭಜರಂಗಿ ಹರ್ಷ- ಶಿವಣ್ಣ ಜೋಡಿ

ಹರ್ಷ- ಶಿವಣ್ಣ ಜೋಡಿಯ ಭಜರಂಗಿ ಚಿತ್ರದ ಭಕ್ತಿ ಪ್ರಧಾನ ಗೀತೆಗೆ ಸಂಯೋಜನೆ ಮಾಡಿದ್ದು ದೊಡ್ಡ ಚಾಲೆಂಜಿಂಗ್ ಎಂದು ಜನ್ಯಾ ಹೇಳುತ್ತಾರೆ. ಭಜರಂಗಿ ಕೂಡಾ ಹಿಟ್ ಆಲ್ಬಂ. ಈಗ ಇದೇ ಕಾಂಬಿನೇಷನ್ ವಜ್ರಕಾಯ ಚಿತ್ರದಲ್ಲೂ ಮುಂದುವರೆದಿದೆ.

ದಕ್ಷಿಣ ಭಾರತದಲ್ಲಿ ಜನ್ಯಾ ಹೆಸರು ಜನಜನಿತ

ದಕ್ಷಿಣ ಭಾರತದಲ್ಲಿ ಜನ್ಯಾ ಹೆಸರು ಜನಜನಿತ

ದಕ್ಷಿಣ ಭಾರತದಲ್ಲಿ ಜನ್ಯಾ ಹೆಸರು ಜನಜನಿತವಾಗುತ್ತಿದೆ. ಜೈ ಹಿಂದ್ ಭಾಗ 2 ಬಹುಭಾಷಾ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಇತರೆ ಚಿತ್ರರಂಗದವರ ಗಮನ ಸೆಳೆದರು.

ರೋಮಿಯೋ, ಲಕ್ಕಿ ಹಾಗೂ ವಿಕ್ಟರಿ ಚಿತ್ರದಲ್ಲಿ ಗಾಯಕರಾಗಿ ಮೆಚ್ಚುಗೆ ಪಡೆದಿರುವ ಅರ್ಜುನ್ ಜನ್ಯಾ ಅವರ ಕೈಲಿ ವಜ್ರಕಾಯ, ಡಿಕೆ, ಆರ್ ದಿ ಕಿಂಗ್ ಚಿತ್ರಗಳಿವೆ.

English summary
In the recent times, Arjun Janya has over taken all the musicians of Kannada film industry. The young and popularly called as magical musician has set a new trend down south. Arjun Janya predominantly works for Sandalwood.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more