'ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!
ಆಟೋ, ಬಸ್, ಕಾರು, ಹೋಟೆಲ್ ಹೀಗೆ ಎಲ್ಲೇ ಹೋದ್ರು, ಬಂದ್ರು ಅಲ್ಲಿ ಕೇಳೋದು ಒಂದೇ ಹಾಡು. ಅದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ'. ಸದ್ಯ, ಈ ಹಾಡು, ಕನ್ನಡ ಹಾಡುಗಳನ್ನ ಕೇಳದವರನ್ನ ಕೂಡ ಒಂದು ಕ್ಷಣ ಹಿಡಿದು ನಿಲ್ಲಿಸುವಷ್ಟು ಮೆಚ್ಚುಗೆ ಗಳಿಸಿಕೊಂಡಿದೆ ಅಂದ್ರೆ ನಂಬಲೇಬೇಕು.[ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!]
ಇನ್ನು ಯ್ಯೂಟ್ಯೂಬ್ 'ಬೊಂಬೆ ಹೇಳುತೈತೆ' ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಹಾಡನ್ನ ನೋಡಿದವರ ಸಂಖ್ಯೆ 1 ಕೋಟಿ ದಾಟಿದೆ. ಕನ್ನಡದ ಮಟ್ಟಿಗೆ ಇದು ದಾಖಲೆಯೇ ಸರಿ. 'ರಾಜಕುಮಾರ' ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ವತಃ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಅವರ ಸುಮಧುರ ಕಂಠದಲ್ಲಿ ಈ ಅದ್ಭುತ ಹಾಡು ಮೂಡಿಬಂದಿದೆ.[ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!]
ಇದೀಗ, ಈ ಹಾಡಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸ್ಟೈಲ್ ನಲ್ಲಿ ಈ ಹಾಡು ಹೇಗಿರಲಿದೆ ಎಂಬುದನ್ನ ನೋಡಬಹುದು. 'ಬೊಂಬೆ ಹೇಳುತೈತೆ' ಹಾಡನ್ನ ಹರಿಕೃಷ್ಣ ಹೇಗೆ ಕಂಪೋಸ್ ಮಾಡಿದ್ದರು ಎಂಬ ವಿಡಿಯೋ ಈಗ ಬಿಡುಗಡೆಯಾಗಿದೆ. ನೋಡಿ ಎಂಜಾಯ್ ಮಾಡಿ..


Click it and Unblock the Notifications











