Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರೋಲ್‌ಗಳ ಒತ್ತಾಯಕ್ಕೆ ಮಣಿದ ಸಿಬಿಎಫ್‌ಸಿ: 'ಬೇಷರಮ್' ಹಾಡಿನಲ್ಲಿ ಬದಲಾವಣೆಗೆ ಸೂಚನೆ
ಶಾರುಕ್ ಖಾನ್ ನಟಿಸಿರುವ 'ಪಠಾಣ್' ಸಿನಿಮಾದ 'ಬೇಷರಮ್' ಹಾಡು ವಿವಾದಕ್ಕೆ ಕಾರಣವಾದ ಬೆನ್ನಲ್ಲೆ, ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸಿಬಿಎಫ್‌ಸಿ ಸೂಚಿಸಿದೆ.
'ಬೇಷರಮ್' ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನರ್ತಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಹಾಡಿನಲ್ಲಿ ಕೇಸರಿ ಬಣ್ಣವನ್ನು ಅಪಮಾನಿಸಲಾಗಿದೆ ಎಂದು ಸಹ ಹೇಳಿದ್ದರು.
ಇದರ ಬೆನ್ನಲ್ಲೆ ಈಗ ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವ ಸಿಬಿಎಫ್‌ಸಿಯು 'ಬೇಷರಮ್' ಹಾಡಿನಲ್ಲಿ ಮಾತ್ರವೇ ಅಲ್ಲದೆ ಸಿನಿಮಾದ ಇನ್ನೂ ಕೆಲವು ಹಾಡುಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಸಿನಿಮಾ ತಂಡಕ್ಕೆ ಸೂಚಿಸಿದೆ.
'ಪಠಾಣ್' ಸಿನಿಮಾ ನಿರ್ಮಾಣ ಸಂಸ್ಥೆಯಾದ ಯಶ್‌ರಾಜ್ ಫಿಲಮ್ಸ್‌ಗೆ ಸಿನಿಮಾದಲ್ಲಿ ಹಾಗೂ ಸಿನಿಮಾದ ಹಾಡುಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಮತ್ತೆ ಸಿನಿಮಾವನ್ನು ಪ್ರಮಾಣ ಪತ್ರಕ್ಕೆ ಸಲ್ಲಿಸುವಂತೆ ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್ ಜೋಷಿ ಸೂಚಿಸಿದ್ದಾರೆ. ಆದರೆ ಅವರು ಯಾವ ಬದಲಾವಣೆಗಳನ್ನು ಮಾಡಲು ಹೇಳಿದ್ದಾರೆಂದು ಬಹಿರಂಗಗೊಳಿಸಿಲ್ಲ.
'''ಪಠಾಣ್' ಸಿನಿಮಾವನ್ನು ಇತ್ತೀಚೆಗೆ ಪ್ರಮಾಣೀಕರಣಕ್ಕಾಗಿ CBFC ಸಮಿತಿಯ ಮುಂದೆ ಸಲ್ಲಿಸಲಾಗಿತ್ತು. CBFC ಮಾರ್ಗಸೂಚಿಗಳ ಪ್ರಕಾರ ಚಿತ್ರವನ್ನು ಕೂಲಂಕುಶವಾಗಿ ಗಮನಿಸಲಾಯಿತು. ಹಾಡುಗಳನ್ನು ಒಳಗೊಂಡಂತೆ ಚಿತ್ರದಲ್ಲಿ ಸಲಹೆ ಬದಲಾವಣೆಗಳನ್ನು ಮಾಡಲು ಮತ್ತು ಸಿನಿಮಾ ಬಿಡುಗಡೆಗೆ ಮೊದಲು ಪರಿಷ್ಕೃತ ಆವೃತ್ತಿಯನ್ನು ಸಲ್ಲಿಸಲು ಸಮಿತಿಯು ಚಿತ್ರ ನಿರ್ಮಾಪಕರಿಗೆ ಮಾರ್ಗದರ್ಶನ ನೀಡಿದೆ'' ಎಂದು ಪ್ರಸೂನ್ ಜೋಷಿ ಹೇಳಿದ್ದಾರೆ.
'ಪಠಾಣ್' ಸಿನಿಮಾವು ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಗೂಢಚಾರಿಯ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವು ಜನವರಿ 25 ರಂದು ಬಿಡುಗಡೆ ಆಗಿದೆ.