»   » ಕನ್ನಡಕ್ಕೆ ಭಲ್ಲೇ ಭಲ್ಲೇ ಗಾಯಕ ದಲೇರ್ ಮೆಹಂದಿ

ಕನ್ನಡಕ್ಕೆ ಭಲ್ಲೇ ಭಲ್ಲೇ ಗಾಯಕ ದಲೇರ್ ಮೆಹಂದಿ

Posted By:
Subscribe to Filmibeat Kannada

ಕೋಮಲ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ನಮೋ ಭೂತಾತ್ಮ' ಹಲವಾರು ವಿಶೇಷತೆಗಳಿಂದ ಕೂಡಿದ್ದು ಇದೀಗ ಮತ್ತೊಂದು ಹೊಸ ಸಂಗತಿ ಸೇರ್ಪಡೆಯಾಗಿದೆ. ಗಾಯಕ, ಸಂಗೀತ ಸಂಯೋಜಕ ದಲೇರ್ ಮೆಹಂದಿ ಅವರು ಚಿತ್ರದ ಹಾಡೊಂದನ್ನು ಹಾಡಿದ್ದಾರೆ.

ಚಿತ್ರಸಾಹಿತಿ ಹೃದಯಶಿವ ಅವರು ಬರೆದಿರುವ "ಪೈಸಾ ದುಡ್ಡು ಮನಿ ಮನಿ" ಎಂಬ ಹಾಡು ದಲೇರ್ ಮೆಹಂದಿ ಕಂಠಸಿರಿಯಲ್ಲಿ ಹೊರಹೊಮ್ಮಿದ್ದು ಮುಂಬೈನಲ್ಲಿ ಧ್ವನಿಮುದ್ರಿಸಿಕೊಳ್ಳಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ದಲೇರ್ ಮೆಹಂದಿ ಅವರು ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿದ್ದಾರೆ. [ಕನ್ನಡಕ್ಕೆ ಕೋಮಲ್ ಜೊತೆ ತೆಲುಗು ಹಾಸ್ಯನಟ ಆಲಿ]

Singer Daler Mehndi

ಇತ್ತೀಚೆಗೆ ಈ ಹಾಡನ್ನು ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. 'ನಮೋ ಭೂತಾತ್ಮ' ಚಿತ್ರಕ್ಕೆ ರಾಜೇಂದ್ರ ಕಾರಂತ್‌ ಅವರ ಸಂಭಾಷಣೆ ಇದ್ದು, ಫ‌ರ್ಹಾನ್‌ ರೋಷನ್‌ (ಎಮಿಲ್‌) ಸಂಗೀತವಿದೆ. ಅರುಳ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇಷ್ಟಕ್ಕೂ ಆಲಿ ಅವರದು ಚಿತ್ರದಲ್ಲಿ ಅತಿಥಿ ಪಾತ್ರ.

ಇದೇ ಮೊದಲ ಬಾರಿಗೆ ನೃತ್ಯ ನಿರ್ದೇಶಕ ಮುರಳಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ. ಇದು ತಮಿಳಿನ ಯಶಸ್ವಿ ಚಿತ್ರ 'ಯಾಮಿರುಕ್ಕು ಭಯಮೇ' ರೀಮೇಕ್ ಎಂಬುದು ವಿಶೇಷ. ಪ್ರೇಮ್ ಅವರ 'ದಾಸ್ವಾಳ' ಚಿತ್ರದ ಅಭಿನಯಿಸಿದ್ದ ಐಶ್ವರ್ಯಾ ಮೆನನ್ ಈ ಚಿತ್ರದ ನಾಯಕಿ.

ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಅವರು ಚಿತ್ರದಲ್ಲಿ ಗಮನಾರ್ಹ ಪಾತ್ರ ಪೋಷಿಸುತ್ತಿದ್ದಾರೆ. ನಮೋ ಭೂತಾತ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ಮೊದಲ ಬಾರಿಗೆ ತೆಲುಗು ಹಾಸ್ಯ ನಟ ಆಲಿ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. (ಏಜೆನ್ಸೀಸ್)

English summary
Renowned singer and music composer Daler Mehndi debut in Sandalwood through Namo Bhootatma. Daler Mehndi has sung a song recently at Mumbai for the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada