»   » ಸದ್ಯದಲ್ಲೇ ಮಾರುಕಟ್ಟೆಗೆ ಬುಲ್ ಬುಲ್ ಹಾಡುಗಳು

ಸದ್ಯದಲ್ಲೇ ಮಾರುಕಟ್ಟೆಗೆ ಬುಲ್ ಬುಲ್ ಹಾಡುಗಳು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಕಾಣಿಕೆ 'ಬುಲ್ ಬುಲ್' ಚಿತ್ರದ ಹಾಡುಗಳ ಸೀಡಿ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಸಂಗೀತ ನೀಡಿರುವ ವಿ.ಹರಿಕೃಷ್ಣ ಅವರ ಡಿ ಬೀಟ್ಸ್ ಕಂಪನಿ 'ಬುಲ್ ಬುಲ್' ಚಿತ್ರದ ಹಾಡುಗಳ ಸೀಡಿಯನ್ನು ಮಾರುಕಟ್ಟೆಗೆ ತರುತ್ತಿದೆ.

ಇದು ಹರಿಕೃಷ್ಣರ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಪ್ರಥಮ ಸೀಡಿ. ತೂಗುದೀಪ ಪ್ರೊಡಕ್ಷನ್ಸ್ ನಿರ್ಮಾಪಕರಾದ ಮೀನಾ ತೂಗುದೀಪ ಶ್ರೀನಿವಾಸ್ 'ಬುಲ್ ಬುಲ್' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಿನಕರ್ ತೂಗುದೀಪ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಂಸ್ಥೆಯ ಮೂರನೇ ಕಾಣಿಕೆಯಾದ ಈ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ.


ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ಮಲ್ಲಿಕಾರ್ಜುನ್(ಗದಗ) ಸಹನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಂಗಸ್ವಾಮಿ, ಸುಂದರರಾಜ್ ನಿರ್ಮಾಣ ನಿರ್ವಹಣೆಯಿದೆ.

ಈ ಚಿತ್ರದ ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತರಾಂ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Challenging Star Darshan's Bulbul audio will be released soon. The film directed by M. D. Shridhar. Bulbul is the remake of Telugu film Darling Darshan and Ambarish will play the lead roles in the film. Rachita Ram, a Kathak dancer has been signed to play the lead role opposite Darshan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada