Don't Miss!
- Sports
Ranji Trophy: ಜಾರ್ಖಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- News
ಪತ್ರಿಕಾ ಸ್ವಾತಂತ್ರವನ್ನು ಬೆಂಬಲಿಸಿ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕಾ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Pushpavati Song: ದರ್ಶನ್ ಜೊತೆ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿರುವ 'ಪುಷ್ಪವತಿ' ಯಾರು?
'ಕ್ರಾಂತಿ' ಚಿತ್ರದ 3ನೇ ಸಾಂಗ್ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಸಂಜೆ ಅಭಿಮಾನಿಗಳ ಸಮ್ಮುಖದಲ್ಲಿ ಈ ಡ್ಯಾನ್ಸಿಂಗ್ ನಂಬರ್ ಲೋಕಾರ್ಪಣೆಗೊಳ್ಳಲಿದೆ. ನಟ ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದೆ.
ವಿ. ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ ಬಂದಿರುವ ಎಲ್ಲಾ ಆಲ್ಬಮ್‌ಗಳು ಸೂಪರ್ ಹಿಟ್ ಆಗಿದೆ. ಅದರಲ್ಲೂ ಐಟಂ ಸಾಂಗ್ ವಿಚಾರಕ್ಕೆ ಬಂದರೆ ಈ ಕಾಂಬೊ ಕೊಂಚ ಜೋರಾಗೇ ಸದ್ದು ಮಾಡಿದೆ. ಇದೀಗ 'ಕ್ರಾಂತಿ' ಚಿತ್ರದಲ್ಲೂ ಅಂತದ್ದೇ ಸ್ಪೆಷಲ್ ಸಾಂಗ್ ಕಂಪೋಸ್ ಆಗಿದ್ದು, ರಿಲೀಸ್‌ಗೆ ಕೌಂಟ್‌ಡೌನ್ ಶುರು ಆಗಿದೆ. 'ಡ್ಯಾನ್ಸ್ ವಿತ್ ಪುಷ್ಪವತಿ' ಎಂದು ಸಾಂಗ್ ಶುರುವಾಗುತ್ತದೆ ಎನ್ನಲಾಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಈ ಸಾಂಗ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
"ಯಾರು
ಅಂತ
ಹೇಳೋದು
ಕಷ್ಟ..
ಇದ್ರಲ್ಲಿ
2
ತರ
ಇರುತ್ತೆ":
ಹೊಸಪೇಟೆ
ಘಟನೆ
ಬಗ್ಗೆ
ಶಿವಣ್ಣ
ವಿವರಣೆ
'ಕ್ರಾಂತಿ' ಚಿತ್ರದ ಥೀಮ್ ಸಾಂಗ್ 'ಧರಣಿ' ಹಾಗೂ ಮೆಲೋಡಿ ಸಾಂಗ್ 'ಬೊಂಬೆ ಬೊಂಬೆ' ಸಖತ್ ಸದ್ದು ಮಾಡಿದ್ದು ಗೊತ್ತೇಯಿದೆ. ಮೊದಲ ಸಾಂಗ್ ಮೈಸೂರಿನಲ್ಲಿ ಬಿಡುಗಡೆ ಆಗಿತ್ತು. 2ನೇ ಸಾಂಗ್ ಹೊಸಪೇಟೆಯ ಅಭಿಮಾನಗಳ ಸಮ್ಮುಖದಲ್ಲಿ ಹೊರಬಂದಿತ್ತು. ಇದೀಗ 3ನೇ ಸಾಂಗ್ ಹುಬ್ಬಳ್ಳಿಯಲ್ಲಿ ಸದ್ದು ಮಾಡಲಿದೆ.

ಭಟ್ರು, ಹರಿ, ದರ್ಶನ್ ಕಾಂಬೋ
'ಪುಷ್ಪವತಿ' ಹಾಡಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಟ್ಯೂನ್ ಹಾಕುವುದರ ಜೊತೆಗೆ ಐಶ್ವರ್ಯ ರಂಗರಾಜನ್ ಜೊತೆ ಸೇರಿ ಸ್ವತ: ವಿ. ಹರಿಕೃಷ್ಣ ಹಾಡು ಹಾಡಿದ್ದಾರೆ. ಕಲರ್‌ಫುಲ್ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಅದ್ಧೂರಿಯಾಗಿ ಈ ಡ್ಯಾನ್ಸಿಂಗ್ ನಂಬರ್ ಸೆರೆ ಹಿಡಿಯಲಾಗಿದೆ. 'ಬಸಣ್ಣಿ ಬಾ' ರೀತಿಯಲ್ಲೇ ಈ ಸಾಂಗ್ ಕೂಡ ಸೂಪರ್ ಹಿಟ್ ಆಗುವ ಸುಳಿವು ಸಿಕ್ತಿದೆ.

ನಿಮಿಕಾ ಜೊತೆ ದರ್ಶನ್ ಟಪ್ಪಾಂಗುಚ್ಚಿ
ಮಂಗಳೂರು ಬೆಡಗಿ ನಿಮಿಕಾ ರತ್ನಾಕರ್ ಸಾಂಗ್‌ನಲ್ಲಿ ದರ್ಶನ್ ಜೊತೆ 'ಪುಷ್ಪವತಿ' ಆಗಿ ಡ್ಯಾನ್ಸ್ ಮಾಡಿದ್ದಾರೆ. ಮಂಗಳೂರಿನಲ್ಲಿ ಹುಟ್ಟಿ ಬೆಳೆದ ನಿಮಿಕಾ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ರಾಮಾಧಾನ್ಯ' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಚೆಲುವೆ ಇತ್ತೀಚೆಗೆ 'ಅಬ್ಬರ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಮಿಂಚಿದ್ದರು. 'ಬಿಂದಾಸ್ ಗೂಗ್ಲಿ', 'ತ್ರಿಶೂಲಂ' ಚಿತ್ರಗಳಲ್ಲೂ ಈ ಕರಾವಳಿ ಬೆಡಗಿ ನಟಿಸಿದ್ದಾರೆ. ಇದೀಗ 'ಕ್ರಾಂತಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಚೆಲುವೆ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ದರ್ಶನ್ ಹಾಗೂ ನಿಮಿಕಾ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ.

ಅಭಿಮಾನಿಗಳಿಂದಲೇ ಸಾಂಗ್ ರಿಲೀಸ್
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 'ಕ್ರಾಂತಿ' ಸಿನಿಮಾ ಸಾಂಗ್ಸ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದೇ ರೀತಿ 2 ಸಾಂಗ್ಸ್ ಹೊರಬಂದಿದೆ. ಸಂಜೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಎದುರು 'ಪುಷ್ಪವತಿ' ಸಾಂಗ್ ಲಾಂಚ್ ಆಗಲಿದೆ. ಈ ಕಾರ್ಯಕ್ರಮಕ್ಕೂ ದರ್ಶನ್ ನಿರೂಪಕರಾಗಿ ಹುಬ್ಬಳ್ಳಿಗೆ ಬರುವುದಾಗಿ ಹೇಳಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಅಭಿಮಾನಿಗಳೇ ಸಾಂಗ್ ರಿಲೀಸ್ ಮಾಡಲಿದ್ದಾರೆ.

ಜನವರಿ 26ಕ್ಕೆ ಸಿನಿಮಾ ರಿಲೀಸ್
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರ್ತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿದೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ರಚಿತಾ ರಾಮ್, ಉಮಾಶ್ರೀ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಶೈಲಜಾ ನಾಗ್, ಬಿ. ಸುರೇಶ್ ಬಂಡವಾಳ ಹೂಡಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.