For Quick Alerts
  ALLOW NOTIFICATIONS  
  For Daily Alerts

  'ಜೈ ಶ್ರೀರಾಮ್' ಎಂದು ಹೋಳಿಯಾಡಲಿದ್ದಾರೆ ದರ್ಶನ್ ಅಭಿಮಾನಿಗಳು!

  |

  'ಬಾ ಬಾ ಬಾ ನಾ ರೆಡಿ' ಹಾಡಿನ ಮೂಲಕ ಧೂಳೆಬ್ಬಿಸಿರುವ 'ರಾಬರ್ಟ್' ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಮುಂದಾಗಿದೆ. ಬಿಡುಗಡೆಯಾದ ನಾಲ್ಕೇ ದಿನಕ್ಕೆ 'ರಾಬರ್ಟ್' ಚಿತ್ರದ ಮೊದಲ ಲಿರಿಕಲ್ ವಿಡಿಯೋ 'ಬಾ ಬಾ ಬಾ ನಾ ರೆಡಿ' ಎರಡು ಮಿಲಿಯನ್‌ಗೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಈ ಸಂಭ್ರಮದ ನಡುವೆ 'ರಾಬರ್ಟ್' ಚಿತ್ರತಂಡ ಮತ್ತೊಂದು ಸಂತಸದ ಸುದ್ದಿ ನೀಡಿದೆ. ಸೋಮವಾರ ಅಂದರೆ, ಮಾರ್ಚ್ 9ರಂದು ಈ ಬಹುನಿರೀಕ್ಷಿತ ಚಿತ್ರದ ಮತ್ತೊಂದು ಹಾಡು ಹೊರಬರಲಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕೌತುಕ ತಣಿಸುವ ಕಾರ್ಯವನ್ನು ಚಿತ್ರತಂಡ ಮಾಡುತ್ತಿದೆ.

  ಬಿಡುಗಡೆಗೆ ಮುನ್ನವೇ 'ರಾಬರ್ಟ್' ಅಬ್ಬರ: ಹೊಸ ಇತಿಹಾಸ ಸೃಷ್ಟಿ?ಬಿಡುಗಡೆಗೆ ಮುನ್ನವೇ 'ರಾಬರ್ಟ್' ಅಬ್ಬರ: ಹೊಸ ಇತಿಹಾಸ ಸೃಷ್ಟಿ?

  ಈ ಹಾಡು ತಮಗೆ ಹೆಚ್ಚು ವಿಶೇಷವಾಗಿದೆ. ಹೃದಯಕ್ಕೆ ಹತ್ತಿರವಾಗಿದೆ. ಈ ಹಾಡನ್ನು ಕೇಳಿದಾಗ ಎನರ್ಜಿ ಹೆಚ್ಚಲಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

  ಹೋಳಿಯಂದು 'ರಾಬರ್ಟ್' ಓಕುಳಿಯಾಟ

  ಹೋಳಿಯಂದು 'ರಾಬರ್ಟ್' ಓಕುಳಿಯಾಟ

  'ರಾಬರ್ಟ್' ಚಿತ್ರದ ಮತ್ತೊಂದು ಹಾಡು 'ಜೈ ಶ್ರೀರಾಮ್'ನ ಲಿರಿಕಲ್ ವಿಡಿಯೋ ಮಾರ್ಚ್ 9ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಅಂದು ಮಧ್ಯಾಹ್ನ 12.03ಕ್ಕೆ ಹಾಡನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಸೋಮವಾರ ಹೋಳಿ ಹಬ್ಬ ಇರುವುದರಿಂದ ಅಂದು 'ರಾಬರ್ಟ್'ನ ಹಾಡಿನ ರಂಗಿನಾಟ ನಡೆಯಲಿದೆ.

  ರಾಮ-ಆಂಜನೇಯನ ಅವತಾರ

  ರಾಮ-ಆಂಜನೇಯನ ಅವತಾರ

  'ರಾಬರ್ಟ್' ಚಿತ್ರದ ಪೋಸ್ಟರ್‌ಗಳು ಸಾಕಷ್ಟು ಕುತೂಹಲ ಕೆರಳಿಸಿದ್ದವು. ಅದರಲ್ಲಿಯೂ ಶ್ರೀರಾಮನನ್ನು ಹೊತ್ತುಕೊಂಡು ಆಂಜನೇಯನ ಅವತಾರದಲ್ಲಿ ದರ್ಶನ್, ಬಾಲಕನೊಬ್ಬನನ್ನು ಹೆಗಲ ಮೇಲೆ ಕೂರಿಸಿಕೊಂಡಿರುವ ಪೋಸ್ಟರ್ ಬಗ್ಗೆ ತುಂಬಾ ಚರ್ಚೆ ನಡೆದಿತ್ತು. ಈ ಪೋಸ್ಟರ್ ಅವತಾರಕ್ಕೆ ಸಂಬಂಧಿಸಿದ ಹಾಡು ಬಿಡುಗಡೆಯಾಗುತ್ತಿದೆ.

  ಏಪ್ರಿಲ್ 9 ರ ಆಟ: ದರ್ಶನ್ ಗೆ ಎದುರು ಗೆಲ್ಲುತ್ತಾರಾ ವಿಜಯ್?ಏಪ್ರಿಲ್ 9 ರ ಆಟ: ದರ್ಶನ್ ಗೆ ಎದುರು ಗೆಲ್ಲುತ್ತಾರಾ ವಿಜಯ್?

  ನಿರ್ಮಾಪಕರಿಂದಲೇ ವಿತರಣೆ

  ನಿರ್ಮಾಪಕರಿಂದಲೇ ವಿತರಣೆ

  ರಾಬರ್ಟ್ ಚಿತ್ರವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರೇ ವಿತರಣೆ ಮಾಡಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಈ ಹಿಂದೆ ಕೂಡ ಉಮಾಪತಿ ಸಿನಿಮಾ ಹಂಚಿಕೆ ಮಾಡಿದ್ದರು. 'ಹೆಬ್ಬುಲಿ' ಚಿತ್ರವನ್ನು ಸಹಭಾಗಿತ್ವದಲ್ಲಿ ವಿತರಣೆ ಮಾಡಿದ್ದರು. ಆದರೆ ಈ ಬಾರಿ ತಾವೇ ಸಂಪೂರ್ಣವಾಗಿ ವಿತರಣೆಯ ಹೊಣೆಗಾರಿಕೆ ಹೊತ್ತುಕೊಂಡಿದ್ದಾರೆ.

  67 ಕೋಟಿ ರೂ. ಗಳಿಕೆ

  67 ಕೋಟಿ ರೂ. ಗಳಿಕೆ

  ಬಿಡುಗಡೆಗೂ ಮುನ್ನವೇ ರಾಬರ್ಟ್ ದಾಖಲೆಯ ಗಳಿಕೆಯತ್ತ ಸಾಗಿದೆ. ಆಡಿಯೋ, ಡಿಜಿಟಲ್ ಮತ್ತು ಉಪಗ್ರಹ ಹಕ್ಕುಗಳ ಮಾರಾಟದಿಂದ ಈಗಾಗಲೇ ರಾಬರ್ಟ್ ಚಿತ್ರ 67 ಕೋಟಿ ರೂ. ಗಳಿಕೆ ಮಾಡಿದೆ. ಇನ್ನು ಡಬ್ಬಿಂಗ್ ಹಾಗೂ ಚಿತ್ರಮಂದಿರ ಬಿಡುಗಡೆಯ ಲಾಭಗಳು ಸೇರಿದರೆ ಚಿತ್ರ ಉತ್ತಮ ಗಳಿಕೆ ಮಾಡಲಿದೆ.

  English summary
  Challenging Star Darshan's Roberrt movie second lyrical video Jai Shri Ram will be released on March 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X