Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಕ್ಕಾ ಪಾರ್ಟಿ ನಂಬರ್: 'ಶೇಕ್ ಇಟ್ ಪುಷ್ಪವತಿ' ಎಂದು ಕುಣಿದು ಅಭಿಮಾನಿಗಳನ್ನು ಕುಣಿಸಿದ ದರ್ಶನ್
'ಕ್ರಾಂತಿ' ಚಿತ್ರದ 3ನೇ ಹಾಡು ಕೇಳಿ 'ಶೇಕ್ ಇಟ್ ಪುಷ್ಪವತಿ' ಎಂದು ಅಭಿಮಾನಿಗಳು ಕುಣಿತ್ತಿದ್ದಾರೆ. ಮತ್ತೊಮ್ಮೆ ಹರಿ, ಭಟ್ರು, ದರ್ಶನ್ ಕಾಂಬಿನೇಷನ್ ಹಿಟ್ ಆಗಿದೆ. ನಿನ್ನೆ(ಜನವರಿ 25) ಸಂಜೆ ಹುಬ್ಬಳ್ಳಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಾಂಗ್ ಲೋಕಾರ್ಪಣೆ ಆಯಿತು.
ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ. ಈಗಾಗಲೇ 'ಧರಣಿ' ಹಾಗೂ 'ಬೊಂಬೊ ಬೊಂಬೆ' ಸಾಂಗ್ಸ್ ರಿಲೀಸ್ ಆಗಿ ಸಿನಿರಸಿಕರು ಗಮನ ಸೆಳೆದಿತ್ತು. ಇದೀಗ 'ಪುಷ್ಪವತಿ' ಸಾಂಗ್ ಕೂಡ ಅದೇ ಸಾಲಿಗೆ ಸೇರಿಕೊಂಡಿದೆ. ದರ್ಶನ್ ಅಭಿಮಾನಿಗಳಂತೂ ಸಾಂಗ್ ಕೇಳುತ್ತಾ ಕುಂತಲ್ಲೇ ಮೈ ಕುಣಿಸುತ್ತಿದ್ದಾರೆ. ನಿಮಿಕಾ ರತ್ನಾಕರ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. 'ಶೇಕ್ ಇಟ್ ಪುಷ್ಪವತಿ' ವರ್ಷದ ಹಿಟ್ ಸಾಂಗ್ಸ್ ಲಿಸ್ಟ್ ಸೇರುವ ಸುಳಿವು ಸಿಕ್ತಿದೆ.
Pushpavathi
Song:
'ಕ್ರಾಂತಿ'
ಟಪ್ಪಾಂಗುಚಿ
ಸಾಂಗ್
ರಿಲೀಸ್
ಡೇಟ್,
ಸ್ಥಳ,
ಸಮಯ
ಪ್ರಕಟ
ನಿನ್ನೆಯಷ್ಟೆ ಹೊಸ ಜೀವನಕ್ಕೆ ಕಾಲಿಟ್ಟ ದರ್ಶನ್ ಅಭಿಮಾನಿ ಜೋಡಿ ಸಾಂಗ್ ರಿಲೀಸ್ ಮಾಡಿದ್ದು ವಿಶೇಷ. ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್ 'ಪುಷ್ಪವತಿ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರಾಸಬದ್ಧ ಸಾಲುಗಳನ್ನು ಅಭಿಮಾನಿಗಳು ಪದೇ ಪದೇ ಗುನುಗುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಸಾಂಗ್ ವೀವ್ಸ್ ರಾಕೆಟ್ ವೇಗದಲ್ಲಿ ಹೆಚ್ಚಾಗ್ತಿದೆ.

ಪಾರ್ಟಿ ಸಾಂಗ್ 'ಪುಷ್ಪವತಿ'
'ಶೇಕ್ ಇಟ್ ಪುಷ್ಪವತಿ' ಪಕ್ಕಾ ಪಾರ್ಟಿ ಸಾಂಗ್. ಬಿಂದಾಸ್ ಆಗಿ ಕುಣಿದು ನಲಿಯುವ ಡ್ಯಾನ್ಸಿಂಗ್ ನಂಬರ್. ಅದ್ಧೂರಿ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಚಿತ್ರೀಕರಣ ಮಾಡಲಾಗಿದೆ. ನಿಮಿಕಾ ರತ್ನಾಕರ್ ಜೊತೆ ನಟ ದರ್ಶನ್ ಸಖತ್ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ. ಅದರಲ್ಲೂ ಹುಕ್ ಸ್ಟೆಪ್ ಸಖತ್ ವೈರಲ್ ಆಗ್ತಿದೆ. ಸಣ್ಣ ಡ್ಯಾನ್ಸ್ ಝಲಕ್ ಜೊತೆಗೆ ಮೇಕಿಂಗ್ ಮಿಕ್ಸ್ ಮಾಡಿ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ.

ಮತ್ತೆ ಹರಿ - ಭಟ್ರು ಮ್ಯಾಜಿಕ್
ಈ ಹಿಂದೆ 'ಬಸಣ್ಣಿ ಬಾ', 'ಕಾತಲ ಗಟ್ಟು ಕಾ' ರೀತಿಯ ಸ್ಪೆಷಲ್ ಸಾಂಗ್ಸ್ ಮಾಡಿ ಗೆದ್ದಿದ್ದ ವಿ. ಹರಿಕೃಷ್ಣ ಹಾಗೂ ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಈ ಸಲ ಮ್ಯಾಜಿಕ್ ಮಾಡಿದೆ. ಹಳೇ ಕ್ಯಾಬರೆ ಸಾಂಗ್ಸ್ ನೆನೆಪಿಸುವ ಟ್ಯೂನ್‌ಗೆ ಭಟ್ರು ತಮ್ಮದೇ ಸ್ಟೈಲ್‌ನಲ್ಲಿ ಲಿರಿಕ್ಸ್ ಬರೆದಿದ್ದಾರೆ. ಐಶ್ವರ್ಯ ರಂಗರಾಜನ್ ಜೊತೆ ಸೇರಿ ಹರಿಕೃಷ್ಣ ಅಷ್ಟೇ ಮಜವಾಗಿ ಸಾಂಗ್ ಹಾಡಿದ್ದಾರೆ. ಒಮ್ಮೆ ಕೇಳಿದ್ರೆ ಸಾಕಗಲ್ಲ. ಕೇಳ್ತಾ ಕೇಳ್ತಾ 'ಪುಷ್ಪವತಿ' ಕೇಳುಗರ ಎದೆಗೆ ಲಗ್ಗೆ ಇಡುತ್ತಾಳೆ. ವೆರೈಟಿ ವರೈಟಿ ಕಾಸ್ಟ್ಯೂಮ್ಸ್‌ನಲ್ಲಿ ದರ್ಶನ್, ನಿಮಿಕಾ ಮಿಂಚಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಇವ್ರ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ.

ದರ್ಶನ್ ಬಿಂದಾಸ್ ಸ್ಟೆಪ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನನಗೆ ಅಷ್ಟಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದು ಹೇಳುತ್ತಲೇ ಇರ್ತಾರೆ. ಆದರೆ ಇತ್ತೀಚಿನ ಸಿನಿಮಾಗಳಲ್ಲಿ ಸಖತ್ ಆಗಿ ಸ್ಟೆಪ್ಸ್ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಮ್ಮೆ 'ಶೇಕ್ ಇಟ್ ಪುಷ್ಪವತಿ' ಎಂದು ದರ್ಶನ್ ಹಾಡಿ ಕುಣಿದು ಕಿಕ್ ಕೊಡ್ತಿದ್ದಾರೆ. ತೆಲುಗಿನ ಖ್ಯಾತ ಕೊರಿಯೋಗ್ರಫರ್ ಗಣೇಶ್ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ನಟಿ ನಿಮಿಕಾ ಮೊದಲ ಬಾರಿಗೆ ಸ್ಪೆಷಲ್ ನಂಬರ್‌ಗೆ ಹೆಜ್ಜೆ ಹಾಕಿದ್ದಾರೆ. ಸಾಂಗ್ ಶೂಟಿಂಗ್ ಸೆಟ್‌ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿರುವುದನ್ನು ನೋಡಬಹುದು.

12 ಗಂಟೆಗಳಲ್ಲಿ 30 ಲಕ್ಷ ವೀವ್ಸ್
'ಪುಷ್ಪವತಿ' ಸಾಂಗ್ ರಿಲೀಸ್ ಆದ 12 ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಜೊತೆಗೆ 1 ಲಕ್ಷ 70 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿದೆ. ಇನ್ನು ಸಿನಿರಸಿಕರು ಸಾಂಗ್ ಸೂಪರ್ ಎಂದು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ತೆರೆಗಪ್ಪಳಿಸಲಿದೆ. ವಿ. ಹರಿಕೃಷ್ಣ ನಿರ್ದೇಶನದ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಶೈಲಜಾ ನಾಗ್, ಬಿ. ಸುರೇಶ ದಂಪತಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.