»   » ಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!

ಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಆಡಿಯೋ ಜನವರಿ 15 ರಂದು ಬಿಡುಗಡೆಯಾಗಲಿದೆ. ಆದ್ರೆ, ನಾಲ್ಕು ದಿನಗಳ ಮುಂಚೆನೇ ಚಿತ್ರದ ಟೈಟಲ್ ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ.

ಆನಂದ್ ಆಡಿಯೋ 'ಚಕ್ರವರ್ತಿ' ಚಿತ್ರದ ಆಡಿಯೋ ಹಕ್ಕನ್ನ ಖರೀದಿಸಿದ್ದು, ಇಂದು (ಜನವರಿ 11) ಯ್ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ. ಹಾಡು ಬಿಡುಗಡೆಯಾದ 1 ಗಂಟೆಗಳಲ್ಲಿ ಸುಮಾರು 28 ಸಾವಿಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.[ರಿವಿಲ್ ಆಯ್ತು 'ಚಕ್ರವರ್ತಿ'ಯಲ್ಲಿ ದರ್ಶನ್ ಕಹಾನಿ!]


Darshan Starrer Chakravarthy Movie Title Song Released

''ನೋಡೋ ಕತ್ತು ಎತ್ತಿ, ಎಷ್ಟು ಹೊತ್ತು ನೋಡ್ತಿ. ಎತ್ತೋ ಎತ್ತೋ ಆರತಿ....ಬಂದ ಚಕ್ರವರ್ತಿ.....'' ಎಂಬ ಮಾಸ್ ಸಾಲುಗಳನ್ನ ಹೊಂದಿರುವ ಈ ಹಾಡು ಈಗ ಎಲ್ಲೆಡೆ ಟ್ರೆಂಡ್ ಕ್ರಿಯೆಟ್ ಮಾಡುತ್ತಿದೆ.['ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]


ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಮಾಸ್ ಹಾಡಿಗೆ, ವ್ಯಾಸರಾಜ್ ಎಂಬುವವರು ಧ್ವನಿಯಾಗಿದ್ದಾರೆ. ಇನ್ನೂ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಸಂಗೀತ ನೀಡಿರುವ ಅರ್ಜುನ್ ಜನ್ಯ, ಚೊಚ್ಚಲ ಹಾಡಿನಲ್ಲೇ ತಮ್ಮ ಖದರ್ ತೋರಿಸಿದ್ದಾರೆ.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]


ಅಂದ್ಹಾಗೆ, ಚಿಂತನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದರ್ಶನ್ ಡಿಫ್ರೆಂಟ್ ಗೆಟಪ್ ಗಳನ್ನ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಗೆ ದೀಪಾ ಸನ್ನಿಧಿ ನಾಯಕಿಯಾಗಿದ್ದು, ಸೃಜನ್ ಲೋಕೇಶ್, ಆದಿತ್ಯ, ದಿನಕರ್ ತೂಗುದೀಪ್, ಕುಮಾರ್ ಬಂಗಾರಪ್ಪ, ಚಾರುಲತಾ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


English summary
Challenging Star Darshan Starrer Most Expected Movie Chakravarthy's Title Song Released on Today (January 11). Music Director Arjun Janya Compose The Songs Of Chakravarthy. Here the Title Song of Chakravarthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada