For Quick Alerts
  ALLOW NOTIFICATIONS  
  For Daily Alerts

  Pushpavathi Song: 'ಕ್ರಾಂತಿ' ಟಪ್ಪಾಂಗುಚಿ ಸಾಂಗ್ ರಿಲೀಸ್ ಡೇಟ್, ಸ್ಥಳ, ಸಮಯ ಪ್ರಕಟ

  |

  ಸ್ಯಾಂಡಲ್‌ವುಡ್‌ನಲ್ಲಿ 'ಕ್ರಾಂತಿ' ಗಾನ ಬಜಾನಾ ಶುರುವಾಗಿದೆ. ಈಗಾಗಲೇ ಚಿತ್ರದ 2 ಸಾಂಗ್ ರಿಲೀಸ್ ಆಗಿದೆ. 3ನೇ ಸಾಂಗ್‌ ಹೊರಬರುವ ಸಮಯ ಹತ್ತಿರ ಬರ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಮತ್ತೊಂದು ಹಾಡನ್ನು ಅದೇ ರೀತಿ ಲೋಕಾರ್ಪಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದಾರೆ. 'ಕ್ರಾಂತಿ' ಥೀಮ್ ಸಾಂಗ್ 'ಧರಣಿ', ರೊಮ್ಯಾಂಟಿಕ್ ಸಾಂಗ್ 'ಬೊಂಬೆ ಬೊಂಬೆ' ನಂತರ 'ಪುಷ್ಪಾವತಿ' ಎನ್ನುವ ಬಿಂದಾಸ್ ನಂಬರ್ ಇದೇ ಭಾನುವಾರ ರಿಲೀಸ್ ಆಗಲಿದೆ. ಡಿಸೆಂಬರ್ 25ರ ಸಂಜೆ 7 ಗಂಟೆಗೆ ಹುಬ್ಬಳಿಯ ಗೋಕುಲ್ ರಸ್ತೆಯ ಅರ್ಬನ್ ಓಯಸಿಸ್ ಮಾಲ್ ಎದುರು 'ಪುಷ್ಪಾವತಿ' ಸಾಂಗ್ ರಿಲೀಸ್ ಪ್ಲ್ಯಾನ್ ನಡೀತಿದೆ.

  ಚಿತ್ರತಂಡವೇ 'ಕ್ರಾಂತಿ' ಚಿತ್ರದ 3ನೇ ಸಾಂಗ್ ರಿಲೀಸ್ ಡೇಟ್, ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಜೊತೆಗೆ ಹರಿಕೃಷ್ಣ ಮ್ಯೂಸಿಕ್ ಕೂಡ ಮಾಡಿದ್ದಾರೆ. ದರ್ಶನ್ ಹಾಗೂ ಹರಿ ಕಾಂಬಿನೇಷನ್ ಆಲ್ಬಮ್‌ಗಳೆಲ್ಲಾ ಸೂಪರ್ ಹಿಟ್ ಆಗಿದೆ. 'ಕ್ರಾಂತಿ' ಚಿತ್ರದ 2 ಹಾಡುಗಳು ಅಭಿಮಾನಿಗಳ ಮನಗೆದ್ದಿದೆ. 'ಪುಷ್ಪಾವತಿ' ಪಕ್ಕಾ ಟಪ್ಪಾಂಗುಚಿ ಸಾಂಗ್ ಎನ್ನುವುದು ಗೊತ್ತಾಗುತ್ತಿದೆ. ದರ್ಶನ್ ಟ್ರಂಪೆಟ್ ಹಿಡ್ದು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದು ಬರೀ ಟಪ್ಪಾಂಗುಚಿನಾ ಅಥವಾ ಐಟಂ ಸಾಂಗಾ ಎನ್ನುವುದನ್ನು ಕಾದು ನೋಡಬೇಕು.

  "ಆ ದೇವತಾ ಮನುಷ್ಯನ ಬಗ್ಗೆ ಮಾತಾಡೋ ಯೋಗ್ಯತೆನೂ ಇಲ್ಲ" - ದುನಿಯಾ ವಿಜಯ್!

  'ಕ್ರಾಂತಿ' ಚಿತ್ರದಲ್ಲಿ ಅಕ್ಷರಕ್ರಾಂತಿ ಕಥೆ ಹೇಳಲಾಗುತ್ತಿದೆ. ಕನ್ನಡ ಸರ್ಕಾರಿ ಶಾಲೆಗಳ ಸ್ಥಿತಿಗತಿಯ ಬಗ್ಗೆ ಸಿನಿಮಾದಲ್ಲಿ ಚರ್ಚಿಸಲಾಗಿದೆ. ಸೂಪರ್ ಹಿಟ್ 'ಯಜಮಾನ' ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸಂಯುಕ್ತಾ ಹೊರನಾಡ್ ಚಿತ್ರದ ತಾರಾಗಣದಲ್ಲಿದ್ದಾರೆ. ಜನವರಿ 26ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

  Darshan Starrer kranti makers plan to release the 3rd song Pushpavathi on december 25th In hubli

  ಕಳೆದ ಭಾನುವಾರ ಚಿತ್ರದ 2ನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಸಾಂಗ್ ರಿಲೀಸ್ ವೇದಿಕೆ ಏರಿದ್ದ ನಟ ದರ್ಶನ್ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ಅಭಿಮಾನಿಗಳು, ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಖಂಡಿಸಿದ್ದರು. ತಪ್ಪಿತಸ್ಥನಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮನವಿ ಮಾಡಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  English summary
  Darshan Starrer kranti makers plan to release the 3rd song Pushpavathi on december 25th In hubli. Songe Release Event Held in opposite Urban Oasis Mall, Gokul Road, Hubli. know more.
  Friday, December 23, 2022, 5:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X